ದಾವಣಗೆರೆ :  ದಾವಣಗೆರೆ ವಿಶ್ವವಿದ್ಯಾಲಯದ ಮುಖ್ಯಕೇಂದ್ರದಲ್ಲಿ  14 ಹೊಸ ಸ್ನಾತಕೋತ್ತರ ಅಧ್ಯಯನ, ಸಂಶೋಧನ ವಿಭಾಗಗಳು ಹಾಗೂ ಸ್ನಾತಕೋತ್ತರ ಕೇಂದ್ರ, ಚಿತ್ರದುರ್ಗದಲ್ಲಿ 4 ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳನ್ನು ಪ್ರಾರಂಭಿಸಲಾಗುವುದು ಎಂದು ಉಪಕುಲಪತಿಗಳಾದ ಪ್ರೊ.ಎಸ್.ವಿ.ಹಲಸೆ ಮಾಹಿತಿ ನೀಡಿದರು.

ನಗರದ ಸಮೀಪದ ತೋಳಹುಣಸೆಯಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದಲ್ಲಿಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದಾಗಿ ಪ್ರಾರಂಭಿಸಲು ಉದ್ದೇಶಿರುವ ಎಲ್ಲಾ ನೂತನ ಕೋರ್ಸ್ ಗಳಿಗೆ ಅವಶ್ಯವಿರುವ ಬೋಧನಾ ಕೊಠಡಿಗಳು, ಪ್ರಯೋಗಾಲಯ ಸೇರಿದಂತೆ ಇನ್ನಿತರ ಪೂರಕ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಿವಿ ಕೇಂದ್ರದಲ್ಲಿ ಸೈನ್ಸ್ ಹಾಗೂ ಆರ್ಟ್ಸ್ ಬ್ಲಾಕ್ ನ ಮೊದಲ ಅಂತಸ್ತಿನಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿಗಳು ಜುಲೈ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು, ಹೊಸ ಸ್ನಾತಕೋತ್ತರ ವಿಭಾಗಗಳಿಗೆ ಬೋಧನ ಕೊಠಡಿ ಹಾಗೂ ಪ್ರಯೋಗಾಲಯ ಲಭ್ಯವಾಗಲಿದೆ.

2018-19ನೇ ಶೈಕ್ಷಣಿಕ ಸಾಲಿನ ಕಾರ್ಯಕ್ರಮಗಳು ವಿವಿ ಕೇಂದ್ರದಲ್ಲಿ ಹಾಗೂ ಕಾಲೇಜುಗಳಲ್ಲಿ ಜುಲೈ 1 ರಿಂದ ಏಕಕಾಲದಲ್ಲಿ ಪ್ರಾರಂಭಗೊಳ್ಳಲಿವೆ ಎಂದು ಮಾಹಿತಿ ನೀಡಿದರು.ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ವಸತಿ ನಿಲಯಗಳಲ್ಲಿರುವ ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಉಚಿತ ಊಟೋಪಚಾರ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಉಚಿತ ಲ್ಯಾಬ್ ಟಾಪ್ ಗಳನ್ನು ಸಹ ವಿತರಿಸಲಾಗಿದೆ.

ಯುಜಿಸಿ ನಿಯಮಗಳಾನುಸಾರ ಮಾಸಿಕ ಶಿಷ್ಯ ಮತ್ತು ವಾರ್ಷಿಕ ವೆಚ್ಚ ಪಾವತಿಸಲಾಗುತ್ತಿದೆ. ಅಲ್ಲದೆ ವಿವಿಯಲ್ಲಿ ಪ್ರವೇಶ ಪಡೆಯುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ಕಲಿಕಾ ಕೇಂದ್ರ ಮತ್ತು ಇಂಗ್ಲೀಷ್ ಭಾಷಾ ಪ್ರಯೋಗಾಲಯಗಳ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಪರೀಕ್ಷಾ ಸುಧಾರಣೆಗೂ ಸಹ ಆದ್ಯತೆ ನೀಡಲಾಗುತ್ತಿದೆ ಎಂದರು.

ಕ್ಯಾಂಪಸ್ ಸಂದರ್ಶನಕ್ಕೆ ವ್ಯವಸ್ಥೆ

ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಉದ್ಯೋಗದಾತ ಸಂಸ್ಥೆಗಳ ಮೂಲಕ ಕ್ಯಾಂಪಸ್ ಸಂದರ್ಶನ ವ್ಯವಸ್ಥೆಯನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ನಮ್ಮ ವಿವಿ ಕೇಂದ್ರದಲ್ಲಿನ ವ್ಯಾಸಂಗ ವಿಷಯಗಳಿಗನುಗುಣವಾಗಿ ಸಂಬಂಧಪಟ್ಟ ಸಂಸ್ಥೆಗಳನ್ನು ಸಂಪರ್ಕಿಸಿ ಕ್ರಮಕೈಗೊಳ್ಳಲು ನೋಡೆಲ್ ಆಫಿಸರ್ ಗಳಿಗೆ ತಿಳಿಸಲಾಗಿದೆ ಎಂದರು.

 

Please follow and like us:
0
http://bp9news.com/wp-content/uploads/2018/06/dvg-4-v-v-hosa-koors-18618-script.and-photo.jpghttp://bp9news.com/wp-content/uploads/2018/06/dvg-4-v-v-hosa-koors-18618-script.and-photo-150x150.jpgBP9 Bureauದಾವಣಗೆರೆದಾವಣಗೆರೆ :  ದಾವಣಗೆರೆ ವಿಶ್ವವಿದ್ಯಾಲಯದ ಮುಖ್ಯಕೇಂದ್ರದಲ್ಲಿ  14 ಹೊಸ ಸ್ನಾತಕೋತ್ತರ ಅಧ್ಯಯನ, ಸಂಶೋಧನ ವಿಭಾಗಗಳು ಹಾಗೂ ಸ್ನಾತಕೋತ್ತರ ಕೇಂದ್ರ, ಚಿತ್ರದುರ್ಗದಲ್ಲಿ 4 ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳನ್ನು ಪ್ರಾರಂಭಿಸಲಾಗುವುದು ಎಂದು ಉಪಕುಲಪತಿಗಳಾದ ಪ್ರೊ.ಎಸ್.ವಿ.ಹಲಸೆ ಮಾಹಿತಿ ನೀಡಿದರು. ನಗರದ ಸಮೀಪದ ತೋಳಹುಣಸೆಯಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದಲ್ಲಿಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದಾಗಿ ಪ್ರಾರಂಭಿಸಲು ಉದ್ದೇಶಿರುವ ಎಲ್ಲಾ ನೂತನ ಕೋರ್ಸ್ ಗಳಿಗೆ ಅವಶ್ಯವಿರುವ ಬೋಧನಾ ಕೊಠಡಿಗಳು, ಪ್ರಯೋಗಾಲಯ ಸೇರಿದಂತೆ ಇನ್ನಿತರ ಪೂರಕ...Kannada News Portal