ದಾವಣಗೆರೆ :  ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಕಂಠಿ ಇಷ್ಟಲಿಂಗ ಗಣೇಶ ಪ್ರತಿಷ್ಟಾಪನೆ ಮಾಡಿರುವುದು ಶ್ಲಾಘನೀಯ ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಹೇಳಿದರು. ನಗರದ ಎಂಸಿಸಿ ಎ ಬ್ಲಾಕ್ ನ ತೊಗಟವೀರ ಕಲ್ಯಾಣ ಮಂಟಪದಲ್ಲಿಂದು ಹಿಂದೂ ಯುವಶಕ್ತಿ ಪ್ರತಿಷ್ಟಾಪಿಸುವ 13 ಸಾವಿರ ಇಷ್ಟಲಿಂಗದ ಗಣೇಶನ ದರ್ಶನ ಪಡೆದು ಮಾತನಾಡಿದ ಅವರು, ಯುವಕರು ಸಂಸ್ಕೃತಿ ಸಂಸ್ಕಾರ ಕಲೆಯನ್ನು ಬಿಂಬಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇತ್ತೀಚಿನ ದಿನಗಳ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.

ಆದರೆ ಈ ಯುವಕರು ಸ್ಪೂರ್ತಿದಾಯಕರಾಗಿ ಕೆಲಸ ಮಾಡುತ್ತಿರುವುದು ಸಂತಸದ ವಿಷಯ. ಇಷ್ಟಲಿಂಗಕ್ಕೆ ಘನತೆ ಮತ್ತು ಮೆರಗನ್ನು ಹೆಚ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಂದ ಒಳ್ಳೆಯ ಕಾರ್ಯಕ್ರಮಗಳು ಹಮ್ಮಿಕೊಳ್ಳಲಿ ಎಂದರು. ರಾಜಕಾರಣಿಗಳು ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುತ್ತಿದ್ದಾರೆ. ಧರ್ಮಗಳನ್ನು ಹೊಡೆಯಲು ಹೊರಟಿರುವುದು ಇದು ಸರಿಯಲ್ಲ, ರಾಜಕಾರಣಿಗಳು ಪರಸ್ಪರ ಸಂಘರ್ಷ ಒಳ್ಳೆಯದಲ್ಲ, ಯಾರೇ ಅಧಿಕಾರ ನಡೆಸಲಿ ಬಡವರ ಮತ್ತು ರಾಜ್ಯದ ಅಭಿವೃದ್ದಿಯ ಕೆಲಸ ಮಾಡಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಿ.ಸಿ.ಶ್ರೀನಿವಾಸ್, ದೇವರಮನಿ ಶಿವಕುಮಾರ್, ಟಿಂಕರ್ ಮಂಜಣ್ಣ, ಸೋಗಿಶಾಂತಕುಮಾರ್, ರಾಮನಾಥ್, ಹರೀಶ್, ಪ್ರಭು, ರಘು, ಶಿವುಪ್ರಕಾಶ್, ಪ್ರವೀಣ್, ಶಿವಕುಮಾರ್, ರುದ್ರೇಶ್, ಸಾಗರ್ ಸೇರಿದಂತೆ ಮತ್ತಿತರರಿದ್ದರು.

Please follow and like us:
0
http://bp9news.com/wp-content/uploads/2018/09/dvg-4-eshthta-linga-ganesh-20918-script.and-photo-1.jpghttp://bp9news.com/wp-content/uploads/2018/09/dvg-4-eshthta-linga-ganesh-20918-script.and-photo-1-150x150.jpgBP9 Bureauಆಧ್ಯಾತ್ಮದಾವಣಗೆರೆದಾವಣಗೆರೆ :  ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಕಂಠಿ ಇಷ್ಟಲಿಂಗ ಗಣೇಶ ಪ್ರತಿಷ್ಟಾಪನೆ ಮಾಡಿರುವುದು ಶ್ಲಾಘನೀಯ ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಹೇಳಿದರು. ನಗರದ ಎಂಸಿಸಿ ಎ ಬ್ಲಾಕ್ ನ ತೊಗಟವೀರ ಕಲ್ಯಾಣ ಮಂಟಪದಲ್ಲಿಂದು ಹಿಂದೂ ಯುವಶಕ್ತಿ ಪ್ರತಿಷ್ಟಾಪಿಸುವ 13 ಸಾವಿರ ಇಷ್ಟಲಿಂಗದ ಗಣೇಶನ ದರ್ಶನ ಪಡೆದು ಮಾತನಾಡಿದ ಅವರು, ಯುವಕರು ಸಂಸ್ಕೃತಿ ಸಂಸ್ಕಾರ ಕಲೆಯನ್ನು ಬಿಂಬಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇತ್ತೀಚಿನ ದಿನಗಳ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. var domain...Kannada News Portal