ದಾವಣಗೆರೆ : ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಗೆ ಆಹ್ವಾನ ನೀಡಿರುವ ರಾಜ್ಯಪಾಲರ ಕ್ರಮವನ್ನು ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಗಾಂಧಿ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ರಾಜ್ಯಪಾಲರ ಕ್ರಮವನ್ನು ವಿರೋಧಿಸಿ ಪ್ರತಿಕೃತಿ ದಹನ ಮಾಡಿದರು. ಪ್ರಧಾನಿ ನರೇಂದ್ರ ಮೋದಿ, ಅಮಿತ್‍ ಷಾ ಅವರ ವಿರುದ್ಧ ಧಿಕ್ಕಾರ ಕೂಗಿದರು.

2017ರಲ್ಲಿ ಗೋವಾದ ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿತ್ತು. ಆದರೆ ಸರಕಾರ ರಚಿಸಲು ಆಹ್ವಾನಿಸಿರಲಿಲ್ಲ. ಮಣಿಪುರದಲ್ಲಿ, ಮೇಘಾಲಯದಲ್ಲೂ ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಬಂದಿತ್ತು. ಆದರೆ ಸರಕಾರ ರಚಿಸಲು ಆಹ್ವಾನ ನೀಡಲಿಲ್ಲ. ಆದರೆ ಇಂದು ರಾಜ್ಯದಲ್ಲಿ ಬಹುಮತವಿಲ್ಲದ ಬಿಜೆಪಿಗೆ ಸರಕಾರ ರಚನೆಗೆ ಆಹ್ವಾನ ನೀಡಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಖಾಲೀದ್ ಅಹ್ಮದ್, ಜಿಲ್ಲಾ ವಕ್ತಾರ ಮೈನುದ್ದಿನ್ ಹೆಚ್.ಜೆ., ಜಿಲ್ಲಾ ಕಾರ್ಯದರ್ಶಿ ಖಾಲೀದ್ ಪೈಲ್ವಾನ್, ಕಬೀರ್, ಜಮೀರ್, ಸಾಗರ್, ಸಂದೀಪ್, ಜಮೀರಾ ನವೀದ್, ವಿನಯ್, ದಕ್ಷಿಣ ಅಧ್ಯಕ್ಷ ಮೊಹಮ್ಮದ್ ಸಾಧಿಕ್ (ಸದ್ದಾಂ), ನವೀದ್ ಬಾಷಾ, ಸುಬಾನ್ ಸಾಬ್, ಅಬುಸಾಲೆಬ್ ಎಸ್.ಎಂ., ಸಾಧಿಕ್ ಖಾನ್, ಸೈಯದ್ ಮುಸ್ತಾಫ್, ನೂರುಲ್ಲಾ ನದೀಂ, ಜಾಕೀರ್, ಸಂತೋಷ್ ಆರ್, ಅಲಿ ರಹಮಾನ್, ಕೆ.ಹೆಚ್.ಇಮ್ರಾನ್ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.

Please follow and like us:
0
http://bp9news.com/wp-content/uploads/2018/05/WhatsApp-Image-2018-05-17-at-5.14.54-PM.jpeghttp://bp9news.com/wp-content/uploads/2018/05/WhatsApp-Image-2018-05-17-at-5.14.54-PM-150x150.jpegBP9 Bureauದಾವಣಗೆರೆರಾಜಕೀಯದಾವಣಗೆರೆ : ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಗೆ ಆಹ್ವಾನ ನೀಡಿರುವ ರಾಜ್ಯಪಾಲರ ಕ್ರಮವನ್ನು ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಗಾಂಧಿ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ರಾಜ್ಯಪಾಲರ ಕ್ರಮವನ್ನು ವಿರೋಧಿಸಿ ಪ್ರತಿಕೃತಿ ದಹನ ಮಾಡಿದರು. ಪ್ರಧಾನಿ ನರೇಂದ್ರ ಮೋದಿ, ಅಮಿತ್‍ ಷಾ ಅವರ ವಿರುದ್ಧ ಧಿಕ್ಕಾರ ಕೂಗಿದರು. 2017ರಲ್ಲಿ ಗೋವಾದ ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿತ್ತು. ಆದರೆ ಸರಕಾರ ರಚಿಸಲು...Kannada News Portal