ದಾವಣಗೆರೆ :  ಆಹಾರಧಾನ್ಯ ಬೆಳೆಯುವ ಕೃಷಿ ಭೂಮಿಯಲ್ಲಿ ಸಿರಿಗಂಧ ಬೆಳೆಯನ್ನು ಬೆಳೆಯಬಾರದು. ಬಂಜರು ಭೂಮಿ, ಬಳಕೆಯಾಗದ ಭೂ ಪ್ರದೇಶದಲ್ಲಿ ಶ್ರೀಗಂಧ ಮರಗಳನ್ನು ಬೆಳೆಸಬೇಕೆಂದು ಪೊನ್ನಂಪಟ್ಟಣ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಮಕೃಷ್ಣ ಹೆಗಡೆ  ಅವರು ಹೇಳಿದರು.

ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿಂದು ಶ್ರೀಗಂಧ ಬೆಳೆ ಮತ್ತು ಇತರೆ ಅರಣ್ಯತಂತ್ರಜ್ಞಾನಗಳ ಬಗ್ಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಗಂಧವನ್ನು 15 ವರ್ಷಗಳಿಗೊಮ್ಮೆ ಕತ್ತರಿಸಬಹುದು.ಒಂದು ಮರದಿಂದ ಸುಮಾರು 15 ಕೆಜಿ ಶ್ರೀಗಂಧ ದೊರೆಯುತ್ತದೆ ಎನ್ನಲಾಗುತ್ತಿದೆ ಆದರೆ ಗುಣಮಟ್ಟದ ಮತ್ತು ಉತ್ತಮ ಸಸಿಗಳಿಂದ ಕೂಡಿದ್ದರೆ ಮಾತ್ರ ಹೆಚ್ಚಿನ ತೂಕ ಸಿಗುವುದು ಎಂಬುದು ಮನಗಾಣಬೇಕು. ಮಾರುಕಟ್ಟೆಯಲ್ಲಿ ಒಂದು ಕೆಜಿ ಶ್ರೀಗಂಧಕ್ಕೆ 22 ಸಾವಿರ ರೂ. ಸಿಗುತ್ತದೆ. ಇದರ ಸಾಧಕ-ಬಾಧಕಗಳ ಬಗ್ಗೆ ತಿಳಿದುಕೊಂಡು ರೈತರು ಬೆಳೆ ಬೆಳೆಯಬೇಕು. ಬೇಸಾಯದಲ್ಲಿ ಇತರೆ ಬೆಳೆಗಳನ್ನು ಅಳವಡಿಸಬೇಕು.ಶ್ರೀಗಂಧ ಬೆಳೆಪೋಷಕಾಂಶ ಮತ್ತು ನೀರಿನಾಂಶವನ್ನು ನೇರವಾಗಿ ತೆಗೆದುಕೊಳ್ಳುವುದಿಲ್ಲ.

ಬೇರೆ ಗಿಡದ ಬೇರುಗಳಿಂದ ಪೋಷಕಾಂಶಗಳನ್ನು ತೆಗೆದುಕೊಳ್ಳುತ್ತದೆ. ಶ್ರೀಗಂಧ ಬೆಳೆ ಬೆಳೆಯಬೇಕಾದರೆ ಆಶ್ರಯ ಗಿಡಗಳು ಬೇಕಾಗುತ್ತದೆ. ಮಾವು, ಹಲಸು ಬೆಳೆಗಳಿಂದ ಶ್ರೀಗಂಧದ ಬೆಳೆಯು ಕುಂಠಿತವಾಗುತ್ತದೆ. ಆಹಾರಧಾನ್ಯ ಬೆಳೆಯುವ ಕೃಷಿ ಭೂಮಿಯಲ್ಲಿ ಶ್ರೀಗಂಧ ಬೆಳೆಯಬಾರದು. ಹೊಲದ ಬದುಗಳಲ್ಲಿ ಶ್ರೀಗಂಧದ ಬೆಳೆಗಳನ್ನು ಬೆಳೆಸಬಹುದು. ಈ ಬೆಳೆಗೆ ಕೆಲವು ರೋಗಗಳು ಬರುತ್ತವೆ. ಹಾಗಾಗಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು. ಶ್ರೀಗಂಧ ಬೆಳೆಗೆ ಕಳ್ಳರ ಕಾಟ ಹೆಚ್ಚಾಗಿರುತ್ತದೆ.ಅದಕ್ಕಾಗಿ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು. ಇನ್ನು ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಕೆ.ರಘುರಾಜ್, ಡಾ.ದೇವರಾಜ್, ಡಾ.ಶ್ರೀನಿವಾಸ್ ರೆಡ್ಡಿ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.

Please follow and like us:
0
http://bp9news.com/wp-content/uploads/2018/08/dvg-10-1.pnghttp://bp9news.com/wp-content/uploads/2018/08/dvg-10-1-150x150.pngBP9 Bureauಕೃಷಿದಾವಣಗೆರೆಪ್ರಮುಖದಾವಣಗೆರೆ :  ಆಹಾರಧಾನ್ಯ ಬೆಳೆಯುವ ಕೃಷಿ ಭೂಮಿಯಲ್ಲಿ ಸಿರಿಗಂಧ ಬೆಳೆಯನ್ನು ಬೆಳೆಯಬಾರದು. ಬಂಜರು ಭೂಮಿ, ಬಳಕೆಯಾಗದ ಭೂ ಪ್ರದೇಶದಲ್ಲಿ ಶ್ರೀಗಂಧ ಮರಗಳನ್ನು ಬೆಳೆಸಬೇಕೆಂದು ಪೊನ್ನಂಪಟ್ಟಣ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಮಕೃಷ್ಣ ಹೆಗಡೆ  ಅವರು ಹೇಳಿದರು. ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿಂದು ಶ್ರೀಗಂಧ ಬೆಳೆ ಮತ್ತು ಇತರೆ ಅರಣ್ಯತಂತ್ರಜ್ಞಾನಗಳ ಬಗ್ಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಗಂಧವನ್ನು 15 ವರ್ಷಗಳಿಗೊಮ್ಮೆ ಕತ್ತರಿಸಬಹುದು.ಒಂದು ಮರದಿಂದ ಸುಮಾರು 15 ಕೆಜಿ...Kannada News Portal