ದಾವಣಗೆರೆ : ಲಿಂ, ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ 32 ವಾರ್ಷಿಕ ಪುಣ್ಯಾರಾಧನೆ ಹಾಗೂ ಶ್ರೀಶೈಲ ಜಗದ್ಗುರು ಲಿಂ.ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ 7ನೇ ವರ್ಷದ ಸ್ಮರಣೋತ್ಸವ ನಿಮಿತ್ತ ಸೆ. 22 ರಿಂದ 24 ರವರೆಗೆ ವಿನೋಬನಗರದ ಶ್ರೀಶೈಲ ಮಠದಲ್ಲಿ ಜನಜಾಗೃತಿ ಧರ್ಮ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಸೆ.22 ರಂದು ಬೆಳಗ್ಗೆ 9 ಕ್ಕೆ ಪಂಚಚಾರ್ಯ ಧ್ವಜಾರೋಹಣವನ್ನು ಮೇಯರ್ ಶೋಭಾ ಪಲ್ಲಾಗಟ್ಟೆ ನೆರವೇರಿಸಲಿದ್ದಾರೆ. ಅಂದು ಸಂಜೆ 6 ಕ್ಕೆ ನಡೆಯುವ ಸಮಾವೇಶದ ಸಾನಿಧ್ಯವನ್ನು ಶ್ರೀಶೈಲ ಮಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀ ವಹಿಸಲಿದ್ದಾರೆ. ಶ್ರೀರಂಗಪಟ್ಟಣದ ಶ್ರೀಕ್ಷೇತ್ರ ಬೇಬಿ ಮಠದ ಡಾ.ತ್ರಿನೇತ್ರ ಮಹಾಂತ ಶ್ರೀ ಅಧ್ಯಕ್ಷತೆ ವಹಿಸಲಿದ್ದಾರೆ. ಬಿದರಕೆರೆಯ ರುದ್ರಮುನಿ ಶ್ರೀ ಉಪದೇಶಾಮೃತ ನೀಡಲಿದ್ದಾರೆ.

ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ವಕೀಲ ಬಳ್ಳಾರಿ ರೇವಣ್ಣ ಉಪನ್ಯಾಸ ನೀಡಲಿದ್ದಾರೆ. ಸೆ. 23 ರಂದು ಸಂಜೆ 6 ಕ್ಕೆ ನಡೆಯುವ ಸಮಾರಂಭದಲ್ಲಿ ವೀರಶೈವ ಲಿಂಗಾಯತ ಧರ್ಮಪರಂಪರೆ ಕುರಿತು ಮೈಸೂರು ಉಪನ್ಯಾಸಕ ನಂದೀಶ ಹಂಚೆ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರುಗಳಾದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಡಾ.ಎ.ಹೆಚ್.ಶಿವಯೋಗಿಸ್ವಾಮಿ ಮತ್ತಿತರರು ಆಗಮಿಸಲಿದ್ದಾರೆ. 23 ರಂದು ಸಂಜೆ 6 ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಚಾಲನೆ ನೀಡಲಿದ್ದಾರೆ. ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಸಂಸ್ಕೃತಿ ರಕ್ಷಣೆಯಲ್ಲಿ ಮಹಿಳೆಯರ ಪಾತ್ರಕುರಿತು ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಕುಂತಲಾ ಗುರುಸಿದ್ದಯ್ಯ, ಕೋಗುಂಡಿ ಬಕ್ಕೇಶಪ್ಪ ಮತ್ತಿತರರು ಆಗಮಿಸಲಿದ್ದಾರೆ ಕಾರ್ಯಕ್ರಮದಲ್ಲಿ ಸಾಮೂಹಿಕ ಶಿವದೀಕ್ಷೆ, ಇಷ್ಟಲಿಂಗಪೂಜೆ ಜರುಗಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಜಂಬಗಿ ರಾಧೇಶ್, ಮಲ್ಲಯ್ಯಸ್ವಾಮಿ, ಎಲ್ ಎಂ ಆರ್ ಬಸವರಾಜಯ್ಯ, ಸಿದ್ದೇಶ್ ಕೋಟೆಹಾಳ್, ಎಸ್.ಜಿ.ವಾಗೀಶ್ವರಯ್ಯ, ಕೆ.ಎಂ.ಪರಮೇಶ್ವರಯ್ಯ, ಮಂಜುನಾಥ್ ಕುರಿಯರ್, ದಾಕ್ಷಯಣಮ್ಮ ಮತ್ತಿತರರಿದ್ದರು.

 

Please follow and like us:
0
http://bp9news.com/wp-content/uploads/2018/09/dvg-3-sammeelana-19918-script.and-photo-1.jpghttp://bp9news.com/wp-content/uploads/2018/09/dvg-3-sammeelana-19918-script.and-photo-1-150x150.jpgBP9 Bureauದಾವಣಗೆರೆಪ್ರಮುಖದಾವಣಗೆರೆ : ಲಿಂ, ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ 32 ವಾರ್ಷಿಕ ಪುಣ್ಯಾರಾಧನೆ ಹಾಗೂ ಶ್ರೀಶೈಲ ಜಗದ್ಗುರು ಲಿಂ.ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ 7ನೇ ವರ್ಷದ ಸ್ಮರಣೋತ್ಸವ ನಿಮಿತ್ತ ಸೆ. 22 ರಿಂದ 24 ರವರೆಗೆ ವಿನೋಬನಗರದ ಶ್ರೀಶೈಲ ಮಠದಲ್ಲಿ ಜನಜಾಗೃತಿ ಧರ್ಮ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. var domain = (window.location != window.parent.location)? document.referrer :...Kannada News Portal