ದಾವಣಗೆರೆ :  ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪನವರು ಹಣಬಲ ಹಾಗೂ ತೋಳ್ಬಲದಿಂದ ಗೆಲುವು ಪಡೆದಿದ್ದಾರೆ. ಅಭಿವೃದ್ದಿಕಾರ್ಯದಿಂದಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದ ನನಗೆ ಕ್ಷೇತ್ರದಲ್ಲಿ ಠೇವಣಿ ಕಳೆಯುವುದಾಗಿ ಹೇಳಿದ್ದರು. ಆದರೆ ನಮ್ಮ ಭಾಗದ ಜನತೆ ನನಗೆ 55.484 ಮತ ನೀಡುವ ಮೂಲಕ ಬೆಂಬಲಿಸಿದ್ದಾರೆ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಅದನ್ನು ಒಪ್ಪಿಕೊಳ್ಳುತ್ತೇನೆ.

ಆದರೆ ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ನವರು ಪ್ರಾಮಾಣಿಕವಾಗಿ ಮತ ಪಡೆದಿಲ್ಲ. ಪ್ರತಿ ಮನೆ ಮನೆಗೂ ತೆರಳಿ ಹಣ ಹಂಚಿಕೆ ಮಾಡಿದ್ದಾರೆ. ಅವರು ಯಾವ ರೀತಿ ಗೆಲುವು ಪಡೆದಿದ್ದಾರೆ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಶಾಮನೂರು ಶಿವಶಂಕರಪ್ಪ ಹಿರಿಯರು. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. 40 ವರ್ಷಗಳಿಂದಲೂ ಅವರು ರಾಜಕಾರಣದಲ್ಲಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಅಭಿವೃದ್ದಿ ಕಾರ್ಯದಿಂದ ಅವರು ಗೆಲುವು ಪಡೆದಿಲ್ಲ.

ಕೇವಲ ಹಣಬಲ ಮತ್ತು ತೋಳ್ಬಲದಿಂದ ಜಯಸಾಧಿಸಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮೂರು ಜನರು ಮೇಯರ್ ಆಗಿದ್ದಾರೆ. ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ. ಹಣ ಹಂಚಿಕೆ ಮಾಡಿರುವ ಬಗ್ಗೆ ನನ್ನಲ್ಲಿ ದಾಖಲೆ ಇದೆ. ನಾವು ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಜನರಿಗೆ ಸ್ಪಷ್ಟತೆ ದೊರೆಯಬೇಕು. ವಾಮಮಾರ್ಗದಿಂದ ಗೆಲುವು ಸಾಧಿಸಲಾಗಿದೆ ಎಂದರು.  ಪತ್ರಿಕಾಗೋಷ್ಠಿಯಲ್ಲಿ ಎನ್.ರಾಜಶೇಖರ್, ರಮೇಶ್ ನಾಯ್ಕ್,ಕೊಟ್ರೇಶ್, ಮಟ್ಟಿಕಲ್ ಕರಿಬಸಪ್ಪ, ರಾಘವೇಂದ್ರ, ಮಲ್ಲೇಶ್, ನಾರಾಯಣಪ್ಪ ಬೋವಿ, ಮಾದೇಶ ಇದ್ದರು.

Please follow and like us:
0
http://bp9news.com/wp-content/uploads/2018/05/WhatsApp-Image-2018-05-16-at-3.52.25-PM.jpeghttp://bp9news.com/wp-content/uploads/2018/05/WhatsApp-Image-2018-05-16-at-3.52.25-PM-150x150.jpegBP9 Bureauದಾವಣಗೆರೆರಾಜಕೀಯದಾವಣಗೆರೆ :  ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪನವರು ಹಣಬಲ ಹಾಗೂ ತೋಳ್ಬಲದಿಂದ ಗೆಲುವು ಪಡೆದಿದ್ದಾರೆ. ಅಭಿವೃದ್ದಿಕಾರ್ಯದಿಂದಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್ ಆರೋಪಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದ ನನಗೆ ಕ್ಷೇತ್ರದಲ್ಲಿ ಠೇವಣಿ ಕಳೆಯುವುದಾಗಿ ಹೇಳಿದ್ದರು. ಆದರೆ ನಮ್ಮ ಭಾಗದ ಜನತೆ ನನಗೆ 55.484 ಮತ ನೀಡುವ ಮೂಲಕ ಬೆಂಬಲಿಸಿದ್ದಾರೆ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ನಮ್ಮ...Kannada News Portal