ದಾವಣಗೆರೆ : ಶಿಕ್ಷಕರೆಂದರೆ ಎಲ್ಲರು ಉತ್ತಮರೇ ಅವರಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಹೇಳಿದರು. ನಗರದ ದೇವರಾಜು ಅರಸು ಬಡಾವಣೆಯಲ್ಲಿರುವ ಲಯನ್ಸ್ ಭವನದಲ್ಲಿಂದು ಲಯನ್ಸ್ ಅಂತರಾಷ್ಟ್ರೀಯ ಸೇವಾ ಸಂಸ್ಥೆ, ಲಯನ್ಸ್ ಕ್ಲಬ್, ಸುವರ್ಣ ಮಹೋತ್ಸವ ಆಚರಿಸುತ್ತಿರುವ ಸುಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಪದವಿಪೂರ್ವ ಕಾಲೇಜು, ಪ್ರೌಢ,ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಹಾಗೂ ವಿಕಲಚೇತನರ ವಿಶೇಷ ಶಿಕ್ಷಕರಿಗೆ ಸರ್ವಪಲ್ಲಿ ರಾಧಕೃಷ್ಣನ್ ಜನ್ಮದಿನ ಮತ್ತು ಎಂಜಿಎಪ್ ಆರ್.ಜಿ.ಶ್ರೀನಿವಾಸ್ ಮೂರ್ತಿಯವರ ಹುಟ್ಟುಹಬ್ಬದ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರೆಂದು ಮನಸ್ಸಿನಲ್ಲಿ ಅಂದುಕೊಂಡರೆ ಒಳ್ಳೆಯ ಭಾವನೆ ಬರುತ್ತದೆ. ಪ್ರಾಥಮಿಕ ಹಂತದಿಂದ ಉನ್ನತ ಸ್ಥಾನದವರೆಗೂ ತಲುಪಿದ ಮೇಲೆಯೂ ಸಹ ಶಿಕ್ಷಕರನ್ನು ಮರೆಯಲು ಸಾಧ್ಯವಿಲ್ಲ, ಶಿಕ್ಷಕರು ಮಕ್ಕಳಿಗೆ ಹೇಳುವ ಬೋಧನೆಗಿಂತ ಅವರ ನಡವಳಿಕೆ ಮುಖ್ಯವಾಗುತ್ತದೆ.

ಶಿಕ್ಷಕರ ವ್ಯಕ್ತಿತ್ವವನ್ನು ಮಕ್ಕಳು ಪಾಲನೆ ಮಾಡುತ್ತಾರೆ. ಹಿಂದೆ ಗುರುಕುಲದಲ್ಲಿ ಪಾಠ ಹೇಳುತ್ತಿರಲಿಲ್ಲ ಗುರುಗಳ ಕಾರ್ಯವೈಖರಿಯನ್ನು ನೋಡಿ ವಿದ್ಯಾರ್ಥಿಗಳು ಶಿಕ್ಷಣವನ್ನು ಕಲಿಯುತ್ತಿದ್ದರು. ಪರಿಪೂರ್ಣ ಶಿಕ್ಷಕರಿಂದ ಸಮಾಜ ಬದಲಾವಣೆಯಾಗಲು ಸಾಧ್ಯವಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿ ಬದಲಾವಣೆಯಾಗಬೇಕಾದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯ. ಚಿಕ್ಕಮಕ್ಕಳಲ್ಲಿ ನೈತಿಕತೆಯನ್ನು ಬೆಳೆಸಬೇಕು. ಆಗ ಉತ್ತಮ ಪ್ರಜೆಯನ್ನಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್.ಪ್ರಭಾಕರ್ ಮಾತನಾಡಿ, ಕೆಲವರ ಹುಟ್ಟುಹಬ್ಬವನ್ನು ಕುಟುಂಬ, ಸ್ನೇಹಿತರು, ಬಂಧುಬಳಗದ ಜೊತೆ ಆಚರಿಸಿಕೊಳ್ಳುತ್ತಾರೆ. ಆದರೆ ಆರ್,ಜಿ.ಶ್ರೀನಿವಾಸ್ ಮೂರ್ತಿಯವರು ಶಿಕ್ಷಕರಿಗೆ ಸನ್ಮಾನ ಮಾಡುವುದರ ಮೂಲಕ ಆಚರಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ಆರ್.ಜಿ.ಶ್ರೀನಿವಾಸ್ ಮೂರ್ತಿಯವರು ತಮ್ಮದೇ ಆದ ವಿಶೇಷ ಸೇವಾ ಕಾರ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಬೆಳವಣಿಗೆ, ದೇಶದ ಸಮಗ್ರ ಅಭಿವೃದ್ದಿವಾಗಬೇಕಾದರೆ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಹಾಗಾಗಿ ಶಿಕ್ಷಕರನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಸುವ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್.ಜಿ.ನಾಗನೂರು, ಡಾ.ಬಿ.ಎಸ್.ನಾಗಪ್ರಕಾಶ, ನಿರ್ಮಲಶಿವಕುಮಾರ್, ಅನಂತರಾಮ್ ಶೆಟ್ಟಿ ಕೆ.ಎಲ್,ಬಿ.ಪಿ.ನಾಗಭೂಷಣ್, ಪ್ರಭಾರವೀಂದ್ರ, ಎನ್ ಜೆ ಎಫ್ ಆರ್.ಜಿ.ಶ್ರೀನಿವಾಸ್ ಮೂರ್ತಿ, ವಾಸುದೇವ್ ರಾಯ್ಕರ್, ಪ್ರತಾಪ್, ಮಂಜುನಾಥ್ ಸ್ವಾಮಿ, ದೇವರಮನೆ ನಾಗರಾಜ್, ಎನ್.ವಿ.ಬಂಡಿವಾಡ, ಎನ್.ಸಿ.ಬಸವರಾಜ ಸೇರಿದಂತೆ ಮತ್ತಿತರರಿದ್ದರು.

 

Please follow and like us:
0
http://bp9news.com/wp-content/uploads/2018/09/dvg-4-samaja-badalavane19918-script.-and-photo-1.jpghttp://bp9news.com/wp-content/uploads/2018/09/dvg-4-samaja-badalavane19918-script.-and-photo-1-150x150.jpgBP9 Bureauದಾವಣಗೆರೆದಾವಣಗೆರೆ : ಶಿಕ್ಷಕರೆಂದರೆ ಎಲ್ಲರು ಉತ್ತಮರೇ ಅವರಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಹೇಳಿದರು. ನಗರದ ದೇವರಾಜು ಅರಸು ಬಡಾವಣೆಯಲ್ಲಿರುವ ಲಯನ್ಸ್ ಭವನದಲ್ಲಿಂದು ಲಯನ್ಸ್ ಅಂತರಾಷ್ಟ್ರೀಯ ಸೇವಾ ಸಂಸ್ಥೆ, ಲಯನ್ಸ್ ಕ್ಲಬ್, ಸುವರ್ಣ ಮಹೋತ್ಸವ ಆಚರಿಸುತ್ತಿರುವ ಸುಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಪದವಿಪೂರ್ವ ಕಾಲೇಜು, ಪ್ರೌಢ,ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಹಾಗೂ ವಿಕಲಚೇತನರ ವಿಶೇಷ ಶಿಕ್ಷಕರಿಗೆ ಸರ್ವಪಲ್ಲಿ ರಾಧಕೃಷ್ಣನ್ ಜನ್ಮದಿನ ಮತ್ತು ಎಂಜಿಎಪ್ ಆರ್.ಜಿ.ಶ್ರೀನಿವಾಸ್ ಮೂರ್ತಿಯವರ ಹುಟ್ಟುಹಬ್ಬದ...Kannada News Portal