ಹರಿಹರ : ನಗರದ ಕನ್ಸರ್‍ವೆನ್ಸ್ ರಸ್ತೆಗೆ ತಂತಿಬೇಲಿ ಹಾಕುವ ಸಲುವಾಗಿ ಸಾರ್ವಜನಿಕರ ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ ಶಾಸಕ ಎಸ್.ರಾಮಪ್ಪ ಮಧ್ಯೆ ಪ್ರವೇಶಿಸಿ ಗಲಾಟೆಯಾಗುವುದನ್ನು ತಿಳಿಗೊಳಿಸಿದ ಘಟನೆ ಪೊಲೀಸ್ ಬಡಾವಣೆಯ ಕನ್ಸ್‍ರ್‍ವೆನ್ಸ್ ರಸ್ತೆಯಲ್ಲಿ ನಡೆಯಿತು.

ಈ ವೇಳೆ ಶಾಸಕ ಎಸ್.ರಾಮಪ್ಪ ಮಾತನಾಡಿ ಪೊಲೀಸರ ಮತ್ತು ಸಾರ್ವಜನಿಕರ ಮಧ್ಯೆ ಪ್ರೀತಿ ವಿಶ್ವಾಸವಿರಬೇಕು. ಅದರಂತೆ ಅವರ ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡಬೇಕು. ಕಾನೂನನ್ನು ಕಾಪಾಡುವವರು ತಾವೇ ಕಾನೂನನ್ನು ಕೈಗೆತ್ತಿಕೊಳ್ಳಬಾರದು ತಮ್ಮ ಪೊಲೀಸ್ ಬಡಾವಣೆ ಮತ್ತು ಹಿಂಭಾಗದಲ್ಲಿರುವ ಹರ್ಲಾಪುರ ಇನ್ನಿತರೆ ಬಡಾವಣೆಗಳಿಗೆ ಸೇರಿದಂತೆ ಕನ್ಸ್‍ರ್‍ವೆನ್ಸ್ ರಸ್ತೆ ಇರುತ್ತದೆ.  ಹಾಗೇಯೆ ನಿಮ್ಮ ಪೊಲೀಸ್ ಬಡಾವಣೆಗೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿ ನಿಮ್ಮ ವ್ಯಾಪ್ತಿಗೆ ಬರುವ ಜಾಗದಲ್ಲಿ ನಾನೇ ಸ್ವತಃ ನನ್ನ ಅನುದಾನದಲ್ಲಿ ತಡೆಗೋಡೆ ನಿರ್ಮಿಸಿ ನಿಮಗೆ ಉತ್ತಮ ಪರಿಸರ ನಿರ್ಮಾಣ ಮಾಡಿಕೊಡುತ್ತೇನೆ. ಅದನ್ನು ಬಿಟ್ಟು ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಗಲಾಟೆ ಗದ್ದಲಗಳಿಗೆ ಅವಕಾಶಕೊಡುವುದು ಬೇಡ.

ಈ ಕೂಡಲೇ ಸಂಬಂಧಿಸಿದ ಪೌರಾಯುಕ್ತರು, ತಹಶೀಲ್ದಾರನ್ನು ಸ್ಥಳಕ್ಕೆ ಕರೆಸಿ ಸರ್ವೇ ಕಾರ್ಯ ಮಾಡಿಸಿ ನಿಮ್ಮ ಜಾಗದಲ್ಲಿ ಬಿಗಿ ಮಾಡಿಕೊಡಲಾಗುವುದು ಎಂದು ಸ್ಥಳದಲ್ಲಿದ್ದ ವೃತ್ತ ನಿರೀಕ್ಷಕರಿಗೆ, ಪಿಎಸ್‍ಐ ಮತ್ತು ಸಿಬ್ಬಂದಿ ವರ್ಗ, ಸಾರ್ವಜನಿಕರಿಗೆ ತಿಳಿ ಹೇಳಿ ಆಗುವ ಗಲಾಟೆಯನ್ನು ತಪ್ಪಿಸಿದರು. ಚರಂಡಿ ಪಕ್ಕದಲ್ಲಿ ಬೇಲಿ ಹಾಕವುದರಿಂದ ಸ್ವಚ್ಚತೆ ಮಾಡುವುದಕ್ಕೆ ಅಡೆತಡೆಯಾಗುತ್ತದೆ. ನೀವು ತಂತಿ ಬೇಲಿ ಹಾಕುವುದಾದರೆ ಚರಂಡಿಯಿಂದ 2 ಅಡಿ ಬಿಟ್ಟು ಹಾಕಿಕೊಳ್ಳಿ ಎಂದು ಪೊಲೀಸರಿಗೆ ಹೇಳಿದರು.

ನಂತರ ವೃತ್ತ ನಿರೀಕ್ಷಕ ಎಸ್.ಲಕ್ಷ್ಮಣ್‍ನಾಯ್ಕ್ ಮಾತನಾಡಿ  ಪೊಲೀಸ್ ಬಡಾವಣೆಯ ಹಿಂಭಾಗದಲ್ಲಿ ಸ್ವಚ್ಚತೆಯಿಲ್ಲದೆ ಹಂದಿ ನಾಯಿಗಳ ಕಾಟ, ಚರಂಡಿಯ ತ್ಯಾಜ್ಯ ನೀರು ಪೊಲೀಸ್ ನಿವಾಸಿಗಳ ಮನೆಯಲ್ಲಿ ಒಳಪ್ರವೇಶಿಸುತ್ತಿತ್ತು ಇಲ್ಲಿ ಸ್ವಚ್ಚತೆಯಿಲ್ಲದೆ ಮರಿಚೀಕೆಯಾಗಿದೆ. ಪರಿಸರ ಹದಗೆಟ್ಟಿರುವುದರಿಂದ ಸಾಂಕ್ರಮಿಕ ರೋಗಗಳು ಹರಡಿ ಡೆಂಗ್ಯೂ, ಚಿಕನ್‍ಗುನ್ಯಾ ಇನ್ನಿತರೆ ಮಾರಕ ರೋಗಗಳಿಂದ ಪೊಲೀಸರ ಮಕ್ಕಳು ಅಸುನೀಗಿದ್ದಾರೆ.

ಪೊಲೀಸ್ ಬಡಾವಣೆಯಲ್ಲಿ ಸ್ವಚ್ಚತೆ ಬಗ್ಗೆ ಚುನಾಯಿತ ಪ್ರತಿನಿಧಿಗಳು ಕಾಳಜಿವಹಿಸುತ್ತಿಲ್ಲಾ ಈ ಹಿನ್ನಲೆಯಲ್ಲಿ ಹಂದಿ ನಾಯಿಗಳು ಬರದಂತೆ ಕನ್ಸ್‍ರ್‍ವೆನ್ಸ್ ರಸ್ತೆಗೆ ತಾತ್ಕಲಿಕವಾಗಿ ತಂತಿ ಬೇಲಿಯನ್ನು ಹಾಕುತ್ತಿದ್ದೇವೆ ಹೊರತು ಪೊಲೀಸರು ಸಾರ್ವಜನಿಕರಿಗೆ ತೊಂದರೆ ಮತ್ತು ದಬ್ಬಾಳಿಕೆ ಮಾಡುವ ಉದ್ದೇಶವು ನಮಗಿಲ್ಲ, ಸಾರ್ವಜನಿಕರ ರಕ್ಷಣೆ ಮತ್ತು ಹಿತದೃಷ್ಠಿಯಿಂದ ಸೇವೆಯಲ್ಲಿ ನಿರತರಾಗಿರುವ ಪೊಲೀಸರ ಬಗ್ಗೆ ಸಾರ್ವಜನಿಕರಿಗೂ, ಚುನಾಯಿತ ಪ್ರತಿನಿಧಿಗಳಿಗೂ ಕಿಂಚಿತ್ತು ಕಾಳಜಿಯಿಲ್ಲ. ಪೊಲೀಸರು ನಾವು ಸಾರ್ವಜನಿಕರ ರಕ್ಷಣೆ ಮಾಡಿದರೆ ನಮ್ಮ ಕುಟುಂಬಗಳ ರಕ್ಷಣೆ ಒಂದೆಡೆಯಾದರೆ ಅವರ ಆರೋಗ್ಯ ಕಾಪಾಡುವುದಕ್ಕೂ ಆಗುತ್ತಿಲ್ಲಾ, ಕನ್ಸ್‍ರ್‍ವೆನ್ಸ್ ರಸ್ತೆಯ ಚರಂಡಿಯಿಂದ ಎರಡು ಅಡಿ ಜಾಗ ಬಿಟ್ಟು ನಾವು ತಾತ್ಕಾಲಿಕವಾಗಿ ತಂತಿ ಬೇಲಿಯನ್ನು ಶಾಸಕರ ಮಾತಿಗೆ ಗೌರವ ಕೊಟ್ಟು ಹಾಕಿಕೊಳ್ಳುತ್ತೇವೆಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಕೆ.ಮರಿದೇವ್, ಪಿಎಸ್‍ಐಗಳಾದ ಸಿದ್ಧನಗೌಡ, ಶ್ರೀಧರ್, ಎಎಸ್‍ಐಗಳಾದ ಮಾರಣ್ಣ, ಸೋಮಣ್ಣ, ಪೊಲೀಸ್ ಪೇದೆಗಳು ಬಡಾವಣೆಯ ನಿವಾಸಿಗಳು ಸ್ಥಳದಲ್ಲಿದ್ದರು.

 

 

Please follow and like us:
0
http://bp9news.com/wp-content/uploads/2018/09/dvg-2-mathina-chakamakhi-16918-script.and-photo-1.jpghttp://bp9news.com/wp-content/uploads/2018/09/dvg-2-mathina-chakamakhi-16918-script.and-photo-1-150x150.jpgBP9 Bureauದಾವಣಗೆರೆಪ್ರಮುಖಹರಿಹರ : ನಗರದ ಕನ್ಸರ್‍ವೆನ್ಸ್ ರಸ್ತೆಗೆ ತಂತಿಬೇಲಿ ಹಾಕುವ ಸಲುವಾಗಿ ಸಾರ್ವಜನಿಕರ ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ ಶಾಸಕ ಎಸ್.ರಾಮಪ್ಪ ಮಧ್ಯೆ ಪ್ರವೇಶಿಸಿ ಗಲಾಟೆಯಾಗುವುದನ್ನು ತಿಳಿಗೊಳಿಸಿದ ಘಟನೆ ಪೊಲೀಸ್ ಬಡಾವಣೆಯ ಕನ್ಸ್‍ರ್‍ವೆನ್ಸ್ ರಸ್ತೆಯಲ್ಲಿ ನಡೆಯಿತು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal