ದಾವಣಗೆರೆ : ಶ್ರೀ ಜಗದ್ಗುರು ಶಿವಯೋಗಿ ಶ್ರೀ ಸಿದ್ದರಾಮೇಶ್ವರ ದೇವರ 56 ನೇ ರಥೋತ್ಸವ ಇಂದು ಬೆಳಗ್ಗೆ ನಗರದ ವೆಂಕಬೋವಿ ಕಾಲೋನಿಯಲ್ಲಿರುವ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರುಗಿತು. ಇಂದು ಬೆಳಗ್ಗೆ ಮಂಗಳವಾದ್ಯ, ಜಾನಪದ ಕಲಾಮೇಳಗಳು ಹಾಗೂ ಪೂರ್ಣಕುಂಭ ಕಳಸದೊಂದಿಗೆ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ರಥೋತ್ಸವ ಅಪಾರ ಸಂಖ್ಯೆಯ ಭಕ್ತಾದಿಗಳ ನಡುವೆ ಸಂಭ್ರಮದಿಂದ ಜರುಗಿತು. ಇದಕ್ಕೂ ಮುನ್ನಾ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಕೆಆರ್ ರಸ್ತೆ, ಮುನ್ಸಿಪಲ್ ಕಾಲೇಜು ಮುಂಭಾಗ, ಚಾಮರಾಜ ಪೇಟೆ ಹಾಗೂ ಬಿನ್ನಿ ಕಂಪನಿ ರಸ್ತೆ ಮಾರ್ಗವಾಗಿ ಸಂಚರಿಸಿ  ಬಳಿಕ ದೇವಸ್ಥಾನಕ್ಕೆ ಆಗಮಿಸಿತು. ರಥೋತ್ಸವದ ಅಂಗವಾಗಿ ವಚನಾಭಿಷೇಕ, ಪ್ರವಚನ, ಕಳೆದ ರಾತ್ರಿ 10 ರಿಂದ ಮುಂಜಾನೆ 5 ರವರೆಗೆ ಮಹಾವಚನ ಭಜನೆ ಜರುಗಿತು.

ಈ ವೇಳೆ ವಿವಿಧ ಮಠಾಧೀಶರು, ಸಮಾಜದ ಮುಖಂಡರಾದ ಡಿ.ಬಸವರಾಜ್, ಪಾಲಿಕೆ ಸದಸ್ಯ ಆರ್,. ಶ್ರೀನಿವಾಸ್, ಹೆಚ್.ವೆಂಕಟೇಶ್, ರಾಮಪ್ಪ, ಎಸ್.ಆನಂದಪ್ಪ, ಓದೋರಂಗಪ್ಪ, ಬಿ.ಟಿ.ಸಿದ್ದಪ್ಪ, ಹೆಚ್.ಚಂದ್ರಪ್ಪ, ಡಿ.ಶಿವಕುಮಾರ್, ಡಿ.ವಿಜಯಕುಮಾರ್, ಶಶಿಕುಮಾರ್, ಸಿದ್ದರಾಮಪ್ಪ, ಡಿ.ಬುಡ್ಡಪ್ಪ, ವೈ.ಶೇಖರಪ್ಪ ಹಾಗೂ ಸಮಾಜ ಬಾಂಧವರಿದ್ದರು.

 

Please follow and like us:
0
http://bp9news.com/wp-content/uploads/2018/08/dvg-3-devara-rathootsava-13818-script.and-photo-1.jpghttp://bp9news.com/wp-content/uploads/2018/08/dvg-3-devara-rathootsava-13818-script.and-photo-1-150x150.jpgBP9 Bureauಆಧ್ಯಾತ್ಮದಾವಣಗೆರೆದಾವಣಗೆರೆ : ಶ್ರೀ ಜಗದ್ಗುರು ಶಿವಯೋಗಿ ಶ್ರೀ ಸಿದ್ದರಾಮೇಶ್ವರ ದೇವರ 56 ನೇ ರಥೋತ್ಸವ ಇಂದು ಬೆಳಗ್ಗೆ ನಗರದ ವೆಂಕಬೋವಿ ಕಾಲೋನಿಯಲ್ಲಿರುವ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರುಗಿತು. ಇಂದು ಬೆಳಗ್ಗೆ ಮಂಗಳವಾದ್ಯ, ಜಾನಪದ ಕಲಾಮೇಳಗಳು ಹಾಗೂ ಪೂರ್ಣಕುಂಭ ಕಳಸದೊಂದಿಗೆ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ರಥೋತ್ಸವ ಅಪಾರ ಸಂಖ್ಯೆಯ ಭಕ್ತಾದಿಗಳ ನಡುವೆ ಸಂಭ್ರಮದಿಂದ ಜರುಗಿತು. ಇದಕ್ಕೂ ಮುನ್ನಾ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಕೆಆರ್ ರಸ್ತೆ, ಮುನ್ಸಿಪಲ್...Kannada News Portal