ದಾವಣಗೆರೆ : ದೇವರ ಹೆಸರಿನಲ್ಲಿ ಕಲ್ಲ ನಾಗರಕ್ಕೆ ಹಾಲನ್ನು ಹಾಕಿ ವ್ಯಯ ಮಾಡುವ ಬದಲು ಮಕ್ಕಳಿಗೆ, ರೋಗಿಗಳಿಗೆ, ನಿರ್ಗತಿಕರಿಗೆ, ಅನಾಥರಿಗೆ, ಬಡತನದಲ್ಲಿರುವ ಜನರಿಗೆ ನೀಡಿ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಇಲ್ಲಿನ ಕೊಂಡಜ್ಜಿ ರಸ್ತೆಯಲ್ಲಿರುವ ಪಿಎಲ್‍ಇ ಟ್ರಸ್ಟ್‍ನ ಬಿಜೆಎಂ ಸ್ಕೂಲ್, ಜಿಎನ್‍ಬಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಾಗರ ಪಂಚಮಿ ಪ್ರಯುಕ್ತ 21ನೇ ವರ್ಷದ ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪೌಷ್ಟಿಕಾಂಶಯುಕ್ತ ಹಾಲನ್ನು ಕಲ್ಲ ನಾಗರಕ್ಕೆ, ಹುತ್ತಕ್ಕೆ, ಬೆಳ್ಳಿ ನಾಗಪ್ಪನಿಗೆ ಎಂದು ಎರೆಯದೆ ಬಡ ಮಕ್ಕಳಿಗೆ, ರೋಗಿಗಳಿಗೆ, ಅನಾಥರಿಗೆ ನೀಡುವುದರಿಂದ ಉಪಯೋಗವಾಗುತ್ತದೆ ಎಂದರು.ಕಳೆದ 20 ವರ್ಷಗಳಿಂದ ನಾವು ಇಂತಹ ಹಾಲು ವಿತರಣಾ ಕಾರ್ಯಕ್ರಮಗಳನ್ನು ಇಲ್ಲಿನ ಬುದ್ದಿಮಾಂದ್ಯ, ಅಂಗವಿಕಲ, ಅಂಧ ಮಕ್ಕಳ ಶಾಲೆ, ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಮುಂತಾದೆಡೆ ಹಮ್ಮಿಕೊಂಡು ಬರುತ್ತಿದ್ದು, ಈ ಸಪ್ತಾಹವನ್ನು ದಾವಣಗೆರೆಯಿಂದ ಆರಂಭಿಸಿ, ಮುಂದೆ ಬೆಂಗಳೂರು, ಬೆಳಗಾವಿ ಮುಂತಾದೆಡೆ ಹಮ್ಮಿಕೊಂಡಿರುತ್ತೇವೆ ಎಂದರು.

ನಮ್ಮ ದೇಶದಲ್ಲಿರುವಷ್ಟು ಹಬ್ಬ ಹರಿದಿನಗಳು ಬೇರೆ ಯಾವ ದೇಶದಲ್ಲಿಯೂ ಆಚರಿಸುವುದಿಲ್ಲ. ರಾಜ್ಯ ಸರ್ಕಾರ ಕೂಡಾ ಕ್ಷೀರ ಭಾಗ್ಯ ಯೋಜನೆಯಡಿ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಾಲನ್ನು ಶಾಲೆಗಳಲ್ಲಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದು ಎಲ್ಲರೂ ಮೆಚ್ಚುವಂತಹ ಕಾರ್ಯ. ಇದರಿಂದ ಲಕ್ಷಾಂತರ ಮಕ್ಕಳ ಆರೋಗ್ಯ ಸುಧಾರಿಸುವುದಲ್ಲದೇ, ಉತ್ತಮ ಆರೋಗ್ಯವಂತರಾಗಿ ಬಾಳುತ್ತಾರೆ ಜೊತೆಗೆ ಬುದ್ದಿಶಕ್ತಿಯೂ ಕೂಡಾ ಬೆಳೆಯುತ್ತದೆ. ಪೌಷ್ಟಿಕಾಂಶಯುಕ್ತ ತಾಯಿಯ ಹಾಲು ಉತ್ತಮ, ಆಕಳ ಹಾಲು ಪವಿತ್ರ, ಇಂತಹ ಹಾಲನ್ನು ಅಪವ್ಯಯ ಮಾಡದೇ ಹಸಿದವರಿಗೆ ನೀಡಿ ಇದರಿಂದ ದೇವರು ಮೆಚ್ಚುತ್ತಾನೆ. ಕಲ್ಲಿಗೆ, ಹುತ್ತಕ್ಕೆ ಹಾಕಿದರೆ ದೇವರು ಖಂಡಿತಾ ಮೆಚ್ಚುವುದಿಲ್ಲ ಎಂದರು. ನಿಜವಾದ ಹಾವು ಕಂಡರೆ ಕೊಲ್ಲು ಎನ್ನುವ ಜನರು ಕಲ್ಲ ನಾಗರಕ್ಕೆ ಹಾಲನ್ನು ಎರೆಯುವ ಮೌಡ್ಯತೆಗೆ ಕಡಿವಾಣ ಹಾಕುವ ಕೆಲಸವನ್ನು ಬಸವಣ್ಣನವರು ಮಾಡಿದರು.

ನಾಗರ ಪಂಚಮಿ ಹೆಸರಿನಲ್ಲಿ ಹಾಲನ್ನು ಅಪವ್ಯಯ ಮಾಡದೇ ಅದನ್ನು ಮಕ್ಕಳಿಗೆ ನೀಡುವ ಹಬ್ಬವನ್ನಾಗಿಸಬೇಕು ಎಂದು ನಾವೂ ಸಹಾ ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ಇದರಿಂದ ಜಾತಿ, ಧರ್ಮ, ಬೇಧ, ಬಾವವಿಲ್ಲದೇ ಎಲ್ಲ ಮಕ್ಕಳೂ ಒಟ್ಟಾಗಿ ಸೇರಿ ಕುಡಿಯುತ್ತಾರೆ. ಎಲ್ಲ ಮಕ್ಕಳೂ ಒಂದೇ ತಾಯಿಯ ಮಕ್ಕಳಂತೆ ಬಾಳುತ್ತಾರೆ ಎಂದರು.

ಅತಿಥಿಯಗಿ ಆಗಮಿಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಟಿ.ಜೆ.ಉದ್ದೇಶ್ ಮಾತನಾಡಿ, ಬಹಳ ವರ್ಷಗಳಿಂದಲೂ ಜನರು ಈ ಮೂಢನಂಬಿಕೆ ವೃತವನ್ನು ಆಚರಿಸುತ್ತಾ ಬಂದಿದ್ದಾರೆ. ಬಕ್ತಿ ಹೆಸರಿನಲ್ಲಿ ಜನರು ಪೌಷ್ಟಿಕಾಂಶಯುಕ್ತ ಆಹಾರವನ್ನು ಕಲ್ಲು ನಾಗರಕ್ಕೆ, ಹುತ್ತಕ್ಕೆ ಹಾಕುವ ಮೂಲಕ ಅಪವ್ಯಯ ಮಾಡುತ್ತಿದ್ದಾರೆ. ಹಾವು ಎಂದಿಗೂ ಹಾಲು ಕುಡಿಯುವುದಿಲ್ಲ. ಹುಳ ಹುಪ್ಪಟೆ ಮಾತ್ರ ತಿನ್ನುತ್ತದೆ. ಇಂತಹ ಮೂಢನಂಬಿಕೆಗಳು ದೂರವಾಗಬೇಕು. ಜನರಲ್ಲಿ ಜಾಗೃತಿ ಮೂಡಬೇಕು. ಇಂತಹ ಕಾರ್ಯವನ್ನು ಸ್ವಾಮೀಜಿ ಮಾಡುತ್ತಿದ್ದಾರೆ. ಎಲ್ಲಾ ಮೂಢ ನಂಬಿಕೆಗಳೂ ಒಂದೇ ಅಲ್ಲ. ಕೆಲವಕ್ಕೆ ಮಾತ್ರ ಅರ್ಥವಿರುತ್ತದೆ. ಅರಳಿಮರ ಸುತ್ತಿದರೆ ಮಕ್ಕಳಾಗುತ್ತದೆ ಅದು ಹೇಳಲು ಮೂಢ ನಂಬಿಕೆಯಾದರೂ ಕೂಡಾ ಅದರಲ್ಲಿ ವೈಜ್ಞಾನಿಕ ಅರ್ಥವಿದೆ. ಅದರಿಂದ ಮುಂಜಾನೆ ಮರ ಸುತ್ತುವುದರಿಂದ ಕೆಲವು ಕಿರಣಗಳು ತಾಯಂದಿರ ಮೇಲೆ ಬಿದ್ದಾಗ ಅವರಲ್ಲಿ ಅಂತಹ ಹಾರ್ಮೋನ್ಸ್ ಬಿಡುಗಡೆಯಾಗುತ್ತವೆ. ನೀವೂ ಕೂಡಾ ಇಂತಹ ಮೂಢನಂಬಿಕೆಗಳನ್ನು ನಂಬದೇ ನೀವು ನಿಮ್ಮ ಮನೆಗಳಲ್ಲಿ ನಿಮ್ಮ ಕುಟುಂಬದೊಂದಿಗೆ ಹುತ್ತಕ್ಕೆ, ಕಲ್ಲ ನಾಗರಕ್ಕೆ ಹಾಲನ್ನು ಹಾಕಲು ಹೋಗದೇ ನೀವೆ ಕುಡಿದು ಅವರಿಗೂ ಜಾಗೃತಿ ಮೂಡಿಸಿರಿ ಎಂದರು.

ಕಾರ್ಯಕ್ರಮದಲ್ಲಿ ಅಭಿಯೋಗ ಇಲಾಖೆ ಉಪ ನಿರ್ದೇಶಕ ಎಸ್.ವಿ.ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ, ಶಾಲಾ ಕಾರ್ಯದರ್ಶಿ ಕೆ.ಎಸ್.ಮಂಜುನಾಥ ಅಗಡಿ, ಪರಿಸರ ರಕ್ಷಣಾ ವೇದಿಕೆಯ ಗಿರೀಶ ದೇವರಮನಿ, ಶಾಲಾ ಶಿಕ್ಷಕರು, ಸಿಬ್ಬಂದಿ ಇತರರು ಭಾಗವಹಿಸಿದ್ದರು.

 

 

Please follow and like us:
0
http://bp9news.com/wp-content/uploads/2018/08/dvg-4-halu-makkalla-palagali-10818-script.and-photo-1.jpghttp://bp9news.com/wp-content/uploads/2018/08/dvg-4-halu-makkalla-palagali-10818-script.and-photo-1-150x150.jpgBP9 Bureauದಾವಣಗೆರೆಪ್ರಮುಖದಾವಣಗೆರೆ : ದೇವರ ಹೆಸರಿನಲ್ಲಿ ಕಲ್ಲ ನಾಗರಕ್ಕೆ ಹಾಲನ್ನು ಹಾಕಿ ವ್ಯಯ ಮಾಡುವ ಬದಲು ಮಕ್ಕಳಿಗೆ, ರೋಗಿಗಳಿಗೆ, ನಿರ್ಗತಿಕರಿಗೆ, ಅನಾಥರಿಗೆ, ಬಡತನದಲ್ಲಿರುವ ಜನರಿಗೆ ನೀಡಿ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random()...Kannada News Portal