ದಾವಣಗೆರೆ: ವಸತಿಯೋಜನೆ ಫಲಾನುಭವಿಗಳಿಂದ ಪಿಡಿಓ ಒಬ್ಬರು ಲಂಚ ಸ್ವೀಕರಿಸುತ್ತಿರುವ ದೃಶ್ಯಗಳು ಇದೀಗ ಮೊಬೈಲ್‍ಗಳಲ್ಲಿ ಹರಿದಾಡುತ್ತಿವೆ. ಹರಪನಹಳ್ಳಿ ತಾಲ್ಲೂಕು ಹಾರಕನಾಳು ಗ್ರಾಮದ ಪಿಡಿಓ  ಸಿ.ಬಸಪ್ಪ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಲ್ಲದೇ ತಮ್ಮ ಮನೆಗೆ ಫಲಾನುಭವಿಯನ್ನು ಕರೆಯಿಸಿ 20 ಸಾವಿರ ರೂ.ಗಳ ಲಂಚ ಪಡೆದಿದ್ದಾರೆ. ಈ ದೃಶ್ಯಾವಳಿಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ. ತಮ್ಮ ಮನೆಗೆ ಫಲಾನುಭವಿಯನ್ನು ಕರೆಸಿಕೊಂಡ ಪಿಡಿಓ ಸಿ.ಬಸಪ್ಪ ಹೇಳಿದಂತೆ ಹಣ ತಂದಿದ್ದೀಯ ಎಂದು ಪ್ರಶ್ನಿಸಿದ್ದಾರೆ.


ಅಲ್ಲದೇ 20 ಸಾವಿರ ರೂ.ಗಳನ್ನು ಎಣಿಸಿಕೊಂಡು ಸರಿ ಇದೆ. ನಿನಗೆ ಮನೆ ಮಾಡಿಸಿಕೊಡುತ್ತೇನೆ. ನೀನು ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ನನ್ನ ವಾಟ್ಸ್‍ಪ್‍ಗೆ ಹಾಕು ಎಂದು ಸೂಚಿಸಿದ್ದಾರೆ. ಈ ಎಲ್ಲಾ ದೃಶ್ಯಾವಳಿಗಳು ಮೊಬೈಲ್‍ನಲ್ಲಿ ಸೆರೆಯಾಗಿವೆ. ಇದೀಗ ಪಿಡಿಒ ಲಂಚ ಬಾಕತನ ಹೊರಬಿದ್ದಿದ್ದು, ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪಿಡಿಒ ಅಮಾನತು

ಹಾರಕನಾಳು ಗ್ರಾ.ಪಂ. ಪಿಡಿಒ ಲಂಚ ಪಡೆದ ಬಗ್ಗೆ ಮಾಹಿತಿ ದೊರೆತಿದೆ. ಈಗಾಗಲೇ ಅವರನ್ನು ಅಮಾನತು ಗೊಳಿಸಿ ಆದೇಶಿಸಲಾಗಿದೆ. ಈ ಹಿಂದೆಯೂ ಪಿಡಿಒ ಸಿ. ಬಸಪ್ಪ ಪ್ರಕರಣವೊಂದರಲ್ಲಿ ಅಮಾನತು ಗೊಂಡಿದ್ದರು ಹಾಗೂ ಅವರಿಗೆ ಇಂತಹ ಘಟನೆಗಳನು ಮರುಕಳಿಸಬಾರದು ಎಂದು ಸೂಚನೆಯನ್ನು ಸಹ ನೀಡಿದ್ದೆವು. ಜನರ ಕೆಲಸಗಳನ್ನು ಸಮರ್ಪಕವಾಗಿ ಮಾಡುಕೊಡುವುದು ನಮ್ಮ ಕರ್ತವ್ಯ ಅದನ್ನು ಬಿಟ್ಟು ಲಂಚಕ್ಕಾಗಿ ಬೇಡಿಕೆ ಇಡುವುದು ಸರಿಯಲ್ಲ. ಜಿ.ಪಂ. ದಾವಣಗೆರೆ. ಸಿಇಒ, ಎಸ್.ಅಶ್ವತಿ ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/06/Karnatakada-Miditha-29.jpeghttp://bp9news.com/wp-content/uploads/2018/06/Karnatakada-Miditha-29-150x150.jpegBP9 Bureauದಾವಣಗೆರೆಪ್ರಮುಖದಾವಣಗೆರೆ: ವಸತಿಯೋಜನೆ ಫಲಾನುಭವಿಗಳಿಂದ ಪಿಡಿಓ ಒಬ್ಬರು ಲಂಚ ಸ್ವೀಕರಿಸುತ್ತಿರುವ ದೃಶ್ಯಗಳು ಇದೀಗ ಮೊಬೈಲ್‍ಗಳಲ್ಲಿ ಹರಿದಾಡುತ್ತಿವೆ. ಹರಪನಹಳ್ಳಿ ತಾಲ್ಲೂಕು ಹಾರಕನಾಳು ಗ್ರಾಮದ ಪಿಡಿಓ  ಸಿ.ಬಸಪ್ಪ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಲ್ಲದೇ ತಮ್ಮ ಮನೆಗೆ ಫಲಾನುಭವಿಯನ್ನು ಕರೆಯಿಸಿ 20 ಸಾವಿರ ರೂ.ಗಳ ಲಂಚ ಪಡೆದಿದ್ದಾರೆ. ಈ ದೃಶ್ಯಾವಳಿಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ. ತಮ್ಮ ಮನೆಗೆ ಫಲಾನುಭವಿಯನ್ನು ಕರೆಸಿಕೊಂಡ ಪಿಡಿಓ ಸಿ.ಬಸಪ್ಪ ಹೇಳಿದಂತೆ ಹಣ ತಂದಿದ್ದೀಯ ಎಂದು ಪ್ರಶ್ನಿಸಿದ್ದಾರೆ. var domain = (window.location != window.parent.location)?...Kannada News Portal