ದಾವಣಗೆರೆ :  ಮತದಾನ ನಮ್ಮ ಹಕ್ಕು, ಅದನ್ನು ತಪ್ಪದೆ ಚಲಾಯಿಸಬೇಕು ಎಂದು ವಿರಕ್ತಮಠದ ಬಸವಪ್ರಭುಶ್ರೀ ಹೇಳಿದರು. ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ಹಿರಿಯ ನಾಗರೀಕರ ಉದ್ಯಾನವನದ ಬಳಿ ಕರುನಾಡ ಕನ್ನಡ ಸೇನೆ, ಪರಿಸರ ಸಂರಕ್ಷಣಾ ವೇದಿಕೆ ಹಾಗೂ ವಿಶ್ವಚೇತನ ಸಮಗ್ರಾಭಿವೃದ್ದಿ ಸಂಸ್ಥೆ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಈ ವೇಳೆ ಮಾತನಾಡಿದ ಅವರು, ವಿದ್ಯಾವಂತರೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಮತದಾನ ಮಾಡಲು ಹಿಂದೇಟು ಹಾಕಲಾಗುತ್ತಿದೆ. ಅದು ಸರಿಯಲ್ಲ. ನಮ್ಮ ಹಕ್ಕನ್ನು ನಾವು ಚಲಾಯಿಸಬೇಕು. ಯೋಗ್ಯರಾದವರಿಗೆ ಮತ ನೀಡಿ ನಮ್ಮ ಕರ್ತವ್ಯ ನಿರ್ವಹಿಸಬೇಕು. ಸಂವಿಧಾನ ನಮಗೆ ಮತದಾನ ಮಾಡುವಹಕ್ಕು ಕಲ್ಪಿಸಿದೆ. ಆದ್ದರಿಂದ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಬೇಕು. ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತಚಲಾವಣೆ ಮಾಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ದೊಗ್ಗಳ್ಳಿ ಪುಟ್ಟರಾಜು, ಕೆ.ಟಿ.ಗೋಪಾಲಗೌಡ್ರು, ಗಿರೀಶ್ ಎಸ್ ದೇವರಮನೆ, ಕಾಯಕಯೋಗಿ ಮಂಜಪ್ಪ, ಮಾರುತಿ, ಸುಧಾಮಂಜುನಾಥ್, ಸುನಂದ ವರ್ಣೆಕರ್ ಸೇರಿದಂತೆ ಅನೇಕರು ಇದ್ದರು.

Please follow and like us:
0
http://bp9news.com/wp-content/uploads/2018/05/dvg-2-matadana-namma-hakku-11518-script.and-photo-1.jpghttp://bp9news.com/wp-content/uploads/2018/05/dvg-2-matadana-namma-hakku-11518-script.and-photo-1-150x150.jpgBP9 Bureauದಾವಣಗೆರೆಪ್ರಮುಖರಾಜಕೀಯದಾವಣಗೆರೆ :  ಮತದಾನ ನಮ್ಮ ಹಕ್ಕು, ಅದನ್ನು ತಪ್ಪದೆ ಚಲಾಯಿಸಬೇಕು ಎಂದು ವಿರಕ್ತಮಠದ ಬಸವಪ್ರಭುಶ್ರೀ ಹೇಳಿದರು. ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ಹಿರಿಯ ನಾಗರೀಕರ ಉದ್ಯಾನವನದ ಬಳಿ ಕರುನಾಡ ಕನ್ನಡ ಸೇನೆ, ಪರಿಸರ ಸಂರಕ್ಷಣಾ ವೇದಿಕೆ ಹಾಗೂ ವಿಶ್ವಚೇತನ ಸಮಗ್ರಾಭಿವೃದ್ದಿ ಸಂಸ್ಥೆ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಈ ವೇಳೆ ಮಾತನಾಡಿದ ಅವರು, ವಿದ್ಯಾವಂತರೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಮತದಾನ ಮಾಡಲು...Kannada News Portal