ದಾವಣಗೆರೆ :  ಗಿಡ ನೆಡಿ ಇಂದೇ, ಸುಖ ಪಡಿ ಮುಂದೆ, ಪರಿಸರ ನಾಶ, ಮನುಕುಲದ ವಿನಾಶ, ಡಬಡಬ ಶಬ್ದ ಹೃದಯ ಸ್ಥಬ್ದ, ಮನೆಗೊಂದು ಮರ-ಊರಿಗೊಂದು ವನ ಹೀಗೆ ಹತ್ತು ಹಲವಾರು ಘೋಷಣೆಗಳ ಬಿತ್ತಿಪತ್ರಗಳನ್ನಿಡಿದ ವಿದ್ಯಾರ್ಥಿ ಸಮೂಹ ಸಾಗರೋಪಾದಿಯಲ್ಲಿ ಹೈಸ್ಕೂಲ್ ಮೈದಾನದತ್ತ ಹೆಜ್ಜೆ ಹಾಕಿತು.ವಿಶ್ವ ಪರಿಸರದ ದಿನದ ಅಂಗವಾಗಿ ಜಿಲ್ಲಾಡಳಿತ, ಜಿ.ಪಂ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಯುವಜನ ಸಬಲೀಕರಣ ಇಲಾಖೆ ಮುಂತಾದವುಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಕ್‍ಥಾನ್ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು, ನಾಗರೀಕರು ಸಮಾಜ ಪರಿಸರ ಸಂರಕ್ಷಣೆಗೆ ಹೇಗೆ ಗಮನ ಕೋಡಬೇಕೆಂಬುದನ್ನು ಸಾರಿ ಹೇಳಿತು.ಜಾಥಾವನ್ನು ಬಿ.ಎಸ್.ಎನ್.ಎಲ್ ಕಚೇರಿ ಬಳಿ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಇಂದಿನಿಂದ 7 ದಿನಗಳ ಕಾಲ ನಡೆಯುವ ಪರಿಸರ ಜಾಗೃತಿ ಸಪ್ತಾಹದ ರೂಪು ರೇಷೆಗಳನ್ನು ವಿವರಿಸಿದರು. ಹಾಗೂ ಪರಿಸರ ಮಾಲಿನ್ಯದಿಂದ ಇಂದು ಈಗಾಗಲೇ ಅನುಭವಿಸುತ್ತಿರುವ ಸಂಕಟಗಳು ಪರಿಸರ ಮಾಲಿನ್ಯ, ಪ್ಲಾಸ್ಟಿಕ್ ಬಳಕೆಯಿಂದಾಗುತ್ತಿರುವ ಅನಾಹುತಗಳ ಎಳೆ-ಎಳೆಯಾಗಿ ಬಿಚ್ಚಿಟ್ಟರು, ಪರಿಸರವನ್ನು ಮುಂದಿನ ದಿನಗಳಲ್ಲಿ ಹೇಗೆ ಕಾಪಾಡಿಕೊಳ್ಳಬೇಕೆಂಬ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ನಮ್ಮ ಸುತ್ತಲಿನ ಪರಿಸರ, ನಗರದ ಸ್ವಚ್ಚತೆ, ಕಚೇರಿಗಳ ಸ್ವಚ್ಚತೆ ಬಗ್ಗೆ ತಿಳಿಸಿ ಯಾವುದೇ ಒಂದು ಜೀವಿ ಬದುಕಲು ಉತ್ತಮ ಗಾಳಿ ಬೇಕು.

ಅಂತಹ ಉತ್ತಮ ಗಾಳಿಯ ಉತ್ಪತ್ತಿಗೆ ಹೆಚ್ಚೆಚ್ಚು ಮರಗಳು ಬೇಕು. ಇಂದಿನಿಂದಲೇ ಗಿಡ ನೆಟ್ಟು ಬೆಳೆಸುವುದರ ಮೂಲಕ ಉತ್ತಮ ಪರಿಸರಕ್ಕೆ ನಾಂದಿಯಿಡೋಣ ಎಂದರು.  ಪರಿಸರ ಸಪ್ತಾಹದಲ್ಲಿ ಎಲ್ಲರೂ ಭಾಗವಹಿಸಿ ಪರಿಸರ ದೇವಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು. ಇಂದಿನಿಂದಲೇ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿಸುತ್ತೇವೆಂದು ಪಣ ತೊಡಬೇಕೆಂದರು. ಶಾಲಾ ವಿದ್ಯಾರ್ಥಿಗಳು ಪರಿಸರದ ಸಂರಕ್ಷಣೆಯ ಬಗ್ಗೆ ವ್ಯಕ್ತಪಡಿಸಿದ ಕಳಕಳಿ ಮೆಚ್ಚುಗೆಯಾಯಿತು. ಇಂದಿನಿಂದಲೇ ಗಿಡ ನೆಡುವ, ಬೆಳೆಸುವ, ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಪರಿಸರಕ್ಕೆ ಮಾಲಿನ್ಯ ಮಾಡುವ ವಸ್ತುಗಳನ್ನು ಧಿಕ್ಕರಿಸುವ ಅವರ ಮಾತುಗಳು ಎಲ್ಲರಿಗೂ ಸ್ಪೂರ್ತಿಯಾಗಿದ್ದವು. ನಗರದ ನಾಲ್ಕು ದಿಕ್ಕುಗಳಿಂದ ಆಗಮಿಸಿದ ತಂಡಗಳು ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಸಮಾರೋಪಗೊಂಡವು. ಕಾರ್ಯಕ್ರಮದಲ್ಲಿ ಸರ್ಕಾರೇತರ ಸಂಘಟನೆಗಳು, ಯೋಗ ತಂಡಗಳ ಯೋಗಪಟುಗಳು, ರೋಟರಿ, ಲಯನ್ಸ್, ಸ್ಕೌಟ್ಸ ಗೈಡ್ಸ್, ಮಹಿಳಾ ಸಮಾಜದ ಪ್ರತಿನಿಧಿಗಳು ಹಲವು ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಜಿ.ಪಂ ಉಪಕಾರ್ಯದರ್ಶಿ ಷಡಾಕ್ಷರಪ್ಪ , ಡಿ.ಡಿ.ಪಿ.ಐ ಕೋದಂಡರಾಮ ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.

 

Please follow and like us:
0
http://bp9news.com/wp-content/uploads/2018/06/dvg-4-parisara-samrakshane-5618-script.and-photo.2-1.jpghttp://bp9news.com/wp-content/uploads/2018/06/dvg-4-parisara-samrakshane-5618-script.and-photo.2-1-150x150.jpgBP9 Bureauದಾವಣಗೆರೆದಾವಣಗೆರೆ :  ಗಿಡ ನೆಡಿ ಇಂದೇ, ಸುಖ ಪಡಿ ಮುಂದೆ, ಪರಿಸರ ನಾಶ, ಮನುಕುಲದ ವಿನಾಶ, ಡಬಡಬ ಶಬ್ದ ಹೃದಯ ಸ್ಥಬ್ದ, ಮನೆಗೊಂದು ಮರ-ಊರಿಗೊಂದು ವನ ಹೀಗೆ ಹತ್ತು ಹಲವಾರು ಘೋಷಣೆಗಳ ಬಿತ್ತಿಪತ್ರಗಳನ್ನಿಡಿದ ವಿದ್ಯಾರ್ಥಿ ಸಮೂಹ ಸಾಗರೋಪಾದಿಯಲ್ಲಿ ಹೈಸ್ಕೂಲ್ ಮೈದಾನದತ್ತ ಹೆಜ್ಜೆ ಹಾಕಿತು.ವಿಶ್ವ ಪರಿಸರದ ದಿನದ ಅಂಗವಾಗಿ ಜಿಲ್ಲಾಡಳಿತ, ಜಿ.ಪಂ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಯುವಜನ ಸಬಲೀಕರಣ ಇಲಾಖೆ ಮುಂತಾದವುಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಕ್‍ಥಾನ್...Kannada News Portal