ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡ ಜನತೆ : ಕೆಲವೆಡೆ ಕೈಕೊಟ್ಟ ಮತಯಂತ್ರ, ತಡವಾದ ಮತದಾನ ಪ್ರಕ್ರಿಯೆ

ದಾವಣಗೆರೆ :  ಜಿಲ್ಲೆಯಾದ್ಯಂತ ಮತದಾನ ಪ್ರಕ್ರಿಯೆ ಈ ಬಾರಿ ಚುರುಕಿನಿಂದಲೇ ಪ್ರಾರಂಭಗೊಂಡಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾರರು ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಹ ಬೆಳಗಿನಿಂದಲೇ ಬಿರುಸಿನಿಂದ ಮತದಾನ ಪ್ರಕ್ರಿಯೆ ಸಾಗಿದೆ. ಇನ್ನು ಗ್ರಾಮೀಣ ಭಾಗಗಳಲ್ಲಿಯೂ ಸಹ ಮತದಾರರು ಉತ್ಸಾಹದಿಂದಲೇ ಮತದಾನ ಪ್ರಕ್ರಿಯೆಯಲ್ಲಿ ತೊಡಗಿರುವುದು ಗೋಚರಿಸಿದೆ ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ. 21.33 ರಷ್ಟು ಮತದಾನ ನಡೆದಿದೆ. ಬಹುತೇಕ ಶಾಂತಿಯುತವಾಗಿ ಮತದಾನ ಪ್ರಾರಂಭಗೊಂಡಿದ್ದು ಮಧ್ಯಾಹ್ನದವರೆಗೂ ಯಾವುದೇ ಅಹಿತಕರ ಘಟನಗೆಳು ಸಂಭವಿಸದೆ ಮತದಾನ ನಡೆದಿದೆ.

ಜಿಲ್ಲೆಯಲ್ಲಿ ಅಲ್ಲಲ್ಲಿ ಕೈಕೊಟ್ಟ ಮತಯಂತ್ರಗಳು

ಹರಪನಹಳ್ಳಿ ಪಟ್ಟಣ ಹಾಗೂ ತಾಲ್ಲೂಕಿನ ಮತ್ತಿಹಳ್ಳಿ, ನೀಲಗುಂದ, ಕೂಲಹಳ್ಳಿ ಮತಗಟ್ಟೆ ಕೇಂದ್ರಗಳಲ್ಲಿ ಮತಯಂತ್ರ ಹಾಗೂ ವಿವಿ ಪ್ಯಾಟ್ ಸಮರ್ಪಕವಾಗಿ ಕಾರ್ಯನಿರ್ವಹಿಸದ ಪರಿಣಾಮ ಮತಗಟ್ಟೆಯಲ್ಲಿ ಮತದಾನ 2 ಗಂಟೆ 30 ನಿಮಿಷಗಳ ಕಾಲ ತಡವಾಗಿ ಪ್ರಾರಂಭಗೊಂಡಿತು. ಇನ್ನು ತಾಲ್ಲೂಕಿನ ಹಲವಾಗಲು ಮತಗಟ್ಟೆ ಕೇಂದ್ರಗಳಲ್ಲಿ ತಾಂತ್ರಿಕ ದೋಷದಿಂದಾಗಿ ಮತದಾನ ಬೆಳಗ್ಗೆ 10 ಗಂಟೆ ವೇಳೆಯಲ್ಲಿ ಹರಪನಹಳ್ಳಿ ಪಟ್ಟಣದಲ್ಲಿ ಶೇ. 22 ರಷ್ಟು ಮತದಾನ ನಡೆದಿದೆ.

ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಆಲೂರಹಟ್ಟಿ ಗ್ರಾಮದಲ್ಲಿ ಬಿರುಸಿನ ಮತದಾನ ನಡೆದಿದೆ. ಗ್ರಾಮದ 998 ಮತದಾರರ ಪೈಕಿ ಈಗಾಗಲೇ 118 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಇಲ್ಲಿಯವರೆಗೂ ಶೇ. 20 ರಷ್ಟು ಮತದಾನ ನಡೆದಿದೆ. ಉಳಿದಂತೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಮಲ್ಲಾಪುರದಲ್ಲಿ 106ನೇ ಕ್ಷೇತ್ರದ 15ನೇ ಸಂಖ್ಯೆ ಮತಗಟ್ಟೆಯಲ್ಲಿ 163 ಮತಚಲಾಯಿಸಿದ ನಂತರ ಮತಯಂತ್ರ ಕೆಟ್ಟು ಹೋಗಿದ್ದು, 2 ಗಂಟೆಗೂ ಅಧಿಕ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ನಂತರ ಮತಗಟ್ಟೆ ಅಧಿಕಾರಿಗಳು ಮತ್ತೊಂದು ಯಂತ್ರ ತಂದು ಮತದಾನಕ್ಕೆ ಅವಕಾಶ ಕಲ್ಪಿಸಿದರು. ನಂತರ ಮತದಾನ ಪ್ರಕ್ರಿಯೆ ಚಾಲನೆಗೊಂಡಿತು. ಇನ್ನು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪಿಂಕ್ ಮತಗಟ್ಟೆ ಕೇಂದ್ರದಲ್ಲಿ ಬೆಳಕಿನ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಮತದಾನ ಪ್ರಕ್ರಿಯೆ ನಿಧಾನಗೊಂಡಿತ್ತು. ದಾವಣಗೆರೆಯ ಮಹಾನಗರ ಪಾಲಿಕೆ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 131 ರಲ್ಲಿ ವಿವಿ ಪ್ಯಾಟ್ ನಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ಸಿಬ್ಬಂದಿಗಳು ಹೊಸಯಂತ್ರ ಅಳವಡಿಕೆ ಮಾಡಿದರು. ನಂತರ ಅರ್ಧಗಂಟೆ ತಡವಾಗಿ ಮತದಾನ ನಡೆಯಿತು. ದಾವಣಗೆರೆ ತಾಲ್ಲೂಕು ಬಾವಿಹಾಳ ಗ್ರಾಮದಲ್ಲಿ ಹರಿಹರ, ಹೊನ್ನಾಳಿ, ಜಗಳೂರಿನಲ್ಲಿಯೂ ಸಹ ಬಿರುಸಿನ ಮತದಾನ ಪ್ರಾರಂಭಗೊಂಡಿದೆ.

ಮೊದಲ ಬಾರಿಗೆ ಪಿಂಕ್ ಮತಗಟ್ಟೆ

ಈ ಬಾರಿ ವಿಶೇಷವಾಗಿ ಮಹಿಳಾ ಮತದಾರರಲ್ಲಿ ಮತದಾನದ ಅರಿವು ಮೂಡಿಸುವ ಸಲುವಾಗಿ ಪಿಂಕ್ ಮತಗಟ್ಟೆ ಸ್ಥಾಪಿಸಲಾಗಿದೆ. ಮಹಿಳಾ ಸಿಬ್ಬಂದಿಗಳೇ ಈ ಮತಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅಷ್ಟೇ ಅಲ್ಲದೆ ಪಿಂಕ್ ಮತಗಟ್ಟೆಗಳಲ್ಲಿ ಮತದಾನ ಮಾಡಿ ಮಹಿಳೆಯರು ಸೆಲ್ಫಿ ಕ್ಲಿಕ್ಕಿಸಲು ಸಹ ಅವಕಾಶ ಕಲ್ಪಿಸಿರುವುದು ವಿಶೇಷವಾಗಿದೆ. ಜಿಲ್ಲೆಯಲ್ಲಿ 15 ಪಿಂಕ್ ಮತಗಟ್ಟೆಗಳಿವೆ. ಹರಪನಹಳ್ಳಿಯ ಪಿಂಕ್ ಮತಗಟ್ಟೆ ಕೇಂದ್ರದಲ್ಲಿ ಸಿಬ್ಬಂದಿಗಳು ಮಹಿಳಾ ಮತದಾರರಿಗೆ ಗುಲಾಬಿ ಹೂ ನೀಡುವ ಮೂಲಕ ವಿಶೇಷವಾಗಿ ಕಂಡು ಬಂದಿತು.

ಪಿಂಕ್ ಮತಗಟ್ಟೆಗಳಲ್ಲಿ ಮಹಿಳಾಮಣಿಗಳ ಸಂಭ್ರಮ : ಮತಹಾಕಿ ಸೆಲ್ಫಿ ಕ್ಲಿಕ್ಕಿಸಿದ ನಾರಿಯರು

ಈ ಬಾರಿ ವಿಶೇಷವಾಗಿ ಮಹಿಳಾ ಮತದಾರರಲ್ಲಿ ಮತದಾನದ ಅರಿವು ಮೂಡಿಸುವ ಸಲುವಾಗಿ ಪಿಂಕ್ ಮತಗಟ್ಟೆ ಸ್ಥಾಪಿಸಲಾಗಿದೆ. ಮಹಿಳಾ ಸಿಬ್ಬಂದಿಗಳೇ ಈ ಮತಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅಷ್ಟೇ ಅಲ್ಲದೆ ಪಿಂಕ್ ಮತಗಟ್ಟೆಗಳಲ್ಲಿ ಮತದಾನ ಮಾಡಿ ಮಹಿಳೆಯರು ಸೆಲ್ಫಿ ಕ್ಲಿಕ್ಕಿಸಲು ಸಹ ಅವಕಾಶ ಕಲ್ಪಿಸಿರುವುದು ವಿಶೇಷವಾಗಿದೆ. ಜಿಲ್ಲೆಯಲ್ಲಿ 15 ಪಿಂಕ್ ಮತಗಟ್ಟೆಗಳಿವೆ.

ಬಹುತೇಕ ಎಲ್ಲಾ ಪಿಂಕ್ ಮತಗಟ್ಟಗಳಲ್ಲಿ ಮಹಿಳೆಯರು ಸಂಭ್ರಮದಿಂದ ಮತಹಾಕಿದ್ದು ಕಂಡುಬಂದಿದೆ. ಮಹಿಳೆಯರ ಮತದಾನದ ಪ್ರಮಾಣ ಹೆಚ್ಚಿಸಲು ಮತಗಟ್ಟೆಯತ್ತ ಗಮನಸೆಳೆಯುವುದು ಗುಲಾಬಿ ಬಣ್ಣದ ಮತಗಟ್ಟೆ ಮೂಲ ಉದ್ದೇಶವಾಗಿದೆ. ಪ್ರವೇಶ ದ್ವಾರವನ್ನೂ ಪಿಂಕ್ ಬಣ್ಣದಿಂದ ಅಲಂಕರಿಸಲಾಗಿದೆ ಇದು ಗುಲಾಬಿ ಬಣ್ಣದ ಮತಗಟ್ಟೆಯ ಆಕರ್ಷಣೆಯಾಗಿದೆ.

ಗುಲಾಬಿ ಬಣ್ಣ ಮಹಿಳೆಯರಿಗೆ ಹೆಚ್ಚು ಇಷ್ಟ ಮತ್ತು ಆಕರ್ಷಕ. ಮಹಿಳೆಯರನ್ನು ಸಬಲೀಕರಣಗೊಳಿಸಿ ಮತದಾನ ಪ್ರಕ್ರಿಯೆಯಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಚುನಾವಣ ಆಯೋಗ ಈ ಬಾರಿ ಪಿಂಕ್ ಮತಗಟ್ಟೆಗಳನ್ನು ಅನುಷ್ಠಾನಿಸುತ್ತಿದೆ. ಮತಗಟ್ಟೆ ಅಧಿಕಾರಿ, ಚುನಾವಣ ಸಿಬಂದಿ, ಭದ್ರತಾ ಸಿಬಂದಿ ಕೂಡ ಗುಲಾಬಿ ಬಣ್ಣದ ವಸ್ತ್ರಗಳನ್ನು ಧರಿಸುವುದು ಇದರ ವಿಶೇಷ. ಕೇವಲ ಮತಗಟ್ಟೆಯ ಗೋಡೆಗಳು ಮಾತ್ರ ಪಿಂಕ್ ಆಗಿ ಬದಲಾಗಿಲ್ಲ.

ಕಿಟಕಿಯ ಪರದೆ, ಸಿಬ್ಬಂದಿಯ ಸಮವಸ್ತ್ರವೂ ಪಿಂಕ್ ಆಗಿದೆ. ಮಹಿಳೆಯರು ಪಿಂಕ್ ಬಣ್ಣವನ್ನು ಹೆಚ್ಚು ಇಷ್ಟಪಡುವ ಕಾರಣ ಚುನಾವಣಾ ಆಯೋಗ ಮಹಿಳೆಯರನ್ನು ಸೆಳೆಯಲು ಈ ವಿನೂತನ ಪ್ರಯೋಗ ನಡೆಸಿದೆ’ ಎಂದು ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.  ಬಲೂನ್ ತೋರಣ, ಮಹಿಳಾ ಮತದಾರರನ್ನು ಆಹ್ವಾನಿಸುವ ಪಿಂಕ್ ಬಣ್ಣ ಫ್ಲೆಕ್ಸ್‍ಗಳಿಂದ ಕೇಂದ್ರ ಕಂಗೊಳಿಸುತ್ತಿವೆ.  ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲು ಸೂಚನೆ ನೀಡಿದೆ. ಅದರಂತೆ ಆಯ್ದ ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಪಿಂಕ್ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ವಿಶ್ರಾಂತಿಗೆ ಕೊಠಡಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿರುವುದು ವಿಶೇಷ.

ಅಭಿವೃದ್ದಿಗೆ ಬೆಂಬಲ ಸಿಗಲಿದೆ-ಶಾಮನೂರು ಶಿವಶಂಕರಪ್ಪ

ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಐಎಂಎ ಹಾಲ್ ನಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಶಾಮನೂರು ಶಿವಶಂಕರಪ್ಪ ಮತದಾನ ಮಾಡಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮತ ಚಲಾಯಿಸಿದ್ದೇನೆ ಗೆಲ್ಲುವ ಭರವಸೆ ಇದೆ ಎಂದರು. ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಪತ್ರಕರ್ತರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು. ಹಾಗೂ ನಮ್ಮವರು ಯಾರು ಹಣ ಹಂಚಿಕೆ ಮಾಡಿಲ್ಲ ಎಂದರು. ಈ ಬಾರಿಯೂ ಗೆಲುವು ನನ್ನದೇ, ಮತದಾರರು ಪ್ರಜ್ಞಾವಂತರಿದ್ದಾರೆ. ಅಭಿವೃದ್ದಿಗೆ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸವ್ಯಕ್ತಪಡಿಸಿದರು.

 

 

Please follow and like us:
0
http://bp9news.com/wp-content/uploads/2018/05/dvg-1-matadana-12518-script.and-photo-1.jpghttp://bp9news.com/wp-content/uploads/2018/05/dvg-1-matadana-12518-script.and-photo-1-150x150.jpgBP9 Bureauದಾವಣಗೆರೆಪ್ರಮುಖರಾಜಕೀಯಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡ ಜನತೆ : ಕೆಲವೆಡೆ ಕೈಕೊಟ್ಟ ಮತಯಂತ್ರ, ತಡವಾದ ಮತದಾನ ಪ್ರಕ್ರಿಯೆ ದಾವಣಗೆರೆ :  ಜಿಲ್ಲೆಯಾದ್ಯಂತ ಮತದಾನ ಪ್ರಕ್ರಿಯೆ ಈ ಬಾರಿ ಚುರುಕಿನಿಂದಲೇ ಪ್ರಾರಂಭಗೊಂಡಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾರರು ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಹ ಬೆಳಗಿನಿಂದಲೇ ಬಿರುಸಿನಿಂದ ಮತದಾನ ಪ್ರಕ್ರಿಯೆ ಸಾಗಿದೆ. ಇನ್ನು ಗ್ರಾಮೀಣ ಭಾಗಗಳಲ್ಲಿಯೂ ಸಹ ಮತದಾರರು ಉತ್ಸಾಹದಿಂದಲೇ ಮತದಾನ...Kannada News Portal