Rally for ರಿವರ್ಸ್
Rally for ರಿವರ್ಸ್

ದಾವಣಗೆರೆ : ಇಶಾ ಫೌಂಡೇಶನ್ ನ ಸದ್ಗುರು ಜಗ್ಗಿ ವಾಸುದೇವ ಅವರ Rally ಫಾರ್ ರಿವರ್ಸ್ ನದಿಗಳ ಸಂರಕ್ಷಣಾ ಅಭಿಯಾನ ಬೆಂಬಲಿಸಿ ದಾವಣಗೆರೆಯಲ್ಲಿಂದು ಜಾಥಾ ನಡೆಯಿತು.

ನಶಿಸಿ ಹೋಗುತ್ತಿರುವ ನದಿಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಹಾಗೂ ನದಿಗಳ ಪುನರುಜ್ಜೀವನಕ್ಕೆ ಮುಂದಾಗುವುದು ಈ Rally ಯ ಉದ್ದೇಶವಾಗಿದೆ. ಈ ಅಭಿಯಾನಕ್ಕೆ ದಾವಣಗೆರೆ ಜನತೆ ಸ್ಪಂದನೆ ನೀಡಿದ್ದಾರೆ. ನಗರದ ಎಂ.ಸಿ.ಸಿ. ಬಿ ಬ್ಲಾಕ್ ನಲ್ಲಿರುವ ಝೆನ್ ಕಂಪ್ಯೂಟರ್ ಕ್ಯಾಂಪಸ್ ನಿಂದ ಪ್ರಾರಂಭಗೊಂಡ Rally ಯು ಗುಂಡಿವೃತ್ತ, ವಿದ್ಯಾರ್ಥಿಭವನ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ ಸೇರಿದಂತೆ ವಿವಿಧೆಡೆ ಸಂಚರಿಸಿತು. ಇದೇ ವೇಳೆ Rally ಯಲ್ಲಿ ಭಾಗವಹಿಸಿದ್ದ Rally ಯಲ್ಲಿ ಪಿ.ಎಸ್. ಮಧುಸೂಧನ್, ಬಸವರಾಜ್ ನಿಟ್ಟೂರು, ಡಾ.ಎಂ.ಜಿ. ಪಟೇಲ್, ಯೋಗೇಂದ್ರಲಾಲ್, ಜೈನ್ ಕಾಲೇಜು ವಿದ್ಯಾರ್ಥಿಗಳಾದ ಸಿ.ಡಿ ಸುನೀಲ್, ಪಿ.ವಿ. ಸೂರಜ್, ದರ್ಶನ್, ತಿಪ್ಪೇಸ್ವಾಮಿ, ವಿನಾಯಕ್, ಚಿರಂಜೀವಿ ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ಮಂದಿ ಭಾಗವಹಿಸಿ ನದಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಿದರು. Rally ಉದ್ದೇಶ ನದಿ ಜೋಡಣೆ ಮತ್ತು ನದಿ ಸಂರಕ್ಷಣೆ Rally ಯ ಆದ್ಯ ಗುರಿ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಹಯೋಗದಲ್ಲಿ ಇಶಾ ಫೌಂಡೇಶನ್ ಈ Rally ಯನ್ನು ನಡೆಸುತ್ತಿದ್ದು, ಸದ್ಗುರು ಜಗ್ಗಿ ವಾಸುದೇವ ಅವರು Rally ಯ ಮುಂದಾಳತ್ವ ವಹಿಸುತ್ತಿದ್ದಾರೆ.

ಈ Rally ಯಲ್ಲಿ ಸಂಕಷ್ಟದಲ್ಲಿರುವ 30 ನದಿಗಳ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುತ್ತಿದೆ. ನದಿಗಳ ಪುನರುಜ್ಜೀವನಕ್ಕೆ ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಸಲಹೆಯನ್ನೂ ಇಶಾ ಫೌಂಡೇಶನ್ ನೀಡಲಿದೆ.ನದಿಗಳ ಪುನರುಜ್ಜೀವನ ಹೇಗೆ ಸಾಧ್ಯ ಎಂಬ ಕುರಿತು ಪ್ರಾಯೋಗಿಕವಾಗಿ ಅಧ್ಯಯನ ಮಾಡಿ, ಯಶಸಾಧಿಸಿದ ಇಶಾ ತನ್ನ ಅನುಭವದ ಸಾರವನ್ನೇ ಮನವಿಯಲ್ಲಿ ನೀಡಲಿದೆ. ನದಿಗಳು ಹರಿಯುವ ಪ್ರದೇಶದ ದಡದ ಎರಡೂ ಕಡೆಗಳಲ್ಲಿ ಮರಗಳನ್ನು ಬೆಳೆಸುವುದಲ್ಲದೆ, ಉಪನದಿಗಳ ಎರಡೂ ದಂಡೆಗಳಲ್ಲೂ ಮರಬೆಳೆಸುವಂತೆ ಸಲಹೆ ನೀಡಲಾಗಿದೆ. ನದಿ ತಟದ ಬಳಿ ಸ್ವಂತ ಭೂಮಿ ಹೊಂದಿರುವವರು ಹಣ್ಣಿನ ಮರಗಳನ್ನು ಸಾವಯವ ಕೃಷಿ ಪದ್ಧತಿಯ ಮೂಲಕ ಬೆಳೆಸುವಂತೆಯೂ ಮನವಿ ಮಾಡಲಾಗಿದೆ. ಇದರಿಂದ ರೈತ ಪ್ರತಿ ವರ್ಷ ಪಡೆಯುವ ಬೆಳೆಗಿಂತ ದುಪ್ಪಟ್ಟು ಹೆಚ್ಚು ಬೆಳೆ ಪಡೆಯಬಹುದಾಗಿದೆ. ಹಾಗೆಯೇ ಮುಖ್ಯವಾಗಿ ಇದರಿಂದ ನದಿಯನ್ನು ಜೀವಂತವಾಗಿ ಉಳಿಸುವುದಕ್ಕೆ ಸಾಧ್ಯವಾಗಲಿದೆ. ಈ ಸದುದ್ದೇಶದಿಂದ Rally ನಡೆಸಲಾಗುತ್ತಿದೆ.

Please follow and like us:
0
http://bp9news.com/wp-content/uploads/2017/09/dvg-2-ryali-phar-rhivars-10917-script.and-photo-1024x515.jpghttp://bp9news.com/wp-content/uploads/2017/09/dvg-2-ryali-phar-rhivars-10917-script.and-photo-150x150.jpgBP9 Bureauದಾವಣಗೆರೆಸದ್ಗುರು  ದಾವಣಗೆರೆ : ಇಶಾ ಫೌಂಡೇಶನ್ ನ ಸದ್ಗುರು ಜಗ್ಗಿ ವಾಸುದೇವ ಅವರ Rally ಫಾರ್ ರಿವರ್ಸ್ ನದಿಗಳ ಸಂರಕ್ಷಣಾ ಅಭಿಯಾನ ಬೆಂಬಲಿಸಿ ದಾವಣಗೆರೆಯಲ್ಲಿಂದು ಜಾಥಾ ನಡೆಯಿತು. ನಶಿಸಿ ಹೋಗುತ್ತಿರುವ ನದಿಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಹಾಗೂ ನದಿಗಳ ಪುನರುಜ್ಜೀವನಕ್ಕೆ ಮುಂದಾಗುವುದು ಈ Rally ಯ ಉದ್ದೇಶವಾಗಿದೆ. ಈ ಅಭಿಯಾನಕ್ಕೆ ದಾವಣಗೆರೆ ಜನತೆ ಸ್ಪಂದನೆ ನೀಡಿದ್ದಾರೆ. ನಗರದ ಎಂ.ಸಿ.ಸಿ. ಬಿ ಬ್ಲಾಕ್ ನಲ್ಲಿರುವ ಝೆನ್ ಕಂಪ್ಯೂಟರ್ ಕ್ಯಾಂಪಸ್ ನಿಂದ ಪ್ರಾರಂಭಗೊಂಡ...Kannada News Portal