ಧಾರವಾಡ : ಧಾರವಾಡದ ಜಿದ್ದಾಜಿದ್ದಿ ಕಣ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ.ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಅಮೃತ ದೇಸಾಯಿ ಪರ ಚಿತ್ರನಟಿ,ಬಿಜೆಪಿ ನಾಯಕಿ ಶೃತಿ ಮತ ಯಾಚನೆ ಮಾಡಿದರು.ಕ್ಷೇತ್ರದ ಗರಗ ಗ್ರಾಮದಲ್ಲಿ ಶೃತಿ ರೋಡ್​​ ಶೋ ನಡೆಸಿ ಬಿಜೆಪಿಗೆ ಮತ ಹಾಕಲು ಮತದಾರರಲ್ಲಿ ಮನವಿ ಮಾಡಿದರು. ಮೊನ್ನೆಯಷ್ಟೇ ಕಾಂಗ್ರೆಸ್ ಅಭ್ಯರ್ಥಿ ಸಚಿವ ವಿನಯ ಕುಲಕರ್ಣಿ ಅವರಿಗೆ ಚಿತ್ರನಟ ಯಶ್ ಸಾಥ್​​​ ನೀಡಿ ಬಿರುಸಿನ ಪ್ರಚಾರ ನಡೆಸಿ ಮತ ಯಾಚನೆ ಮಾಡಿದ್ದರು. ಇದರ ಬೆನ್ನಲ್ಲೇ ಶೃತಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದು, ಶೃತಿ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.

ವರದಿ : ಶಂಕರಗೌಡ ಪಾಟೀಲ, ಧಾರವಾಡ

Please follow and like us:
0
http://bp9news.com/wp-content/uploads/2018/05/Karnatakada-Miditha-35.jpeghttp://bp9news.com/wp-content/uploads/2018/05/Karnatakada-Miditha-35-150x150.jpegBP9 Bureauರಾಜಕೀಯಹುಬ್ಬಳ್ಳಿ-ಧಾರವಾಡಧಾರವಾಡ : ಧಾರವಾಡದ ಜಿದ್ದಾಜಿದ್ದಿ ಕಣ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ.ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಅಮೃತ ದೇಸಾಯಿ ಪರ ಚಿತ್ರನಟಿ,ಬಿಜೆಪಿ ನಾಯಕಿ ಶೃತಿ ಮತ ಯಾಚನೆ ಮಾಡಿದರು. ಕ್ಷೇತ್ರದ ಗರಗ ಗ್ರಾಮದಲ್ಲಿ ಶೃತಿ ರೋಡ್​​ ಶೋ ನಡೆಸಿ ಬಿಜೆಪಿಗೆ ಮತ ಹಾಕಲು ಮತದಾರರಲ್ಲಿ ಮನವಿ ಮಾಡಿದರು. ಮೊನ್ನೆಯಷ್ಟೇ ಕಾಂಗ್ರೆಸ್ ಅಭ್ಯರ್ಥಿ ಸಚಿವ ವಿನಯ ಕುಲಕರ್ಣಿ ಅವರಿಗೆ ಚಿತ್ರನಟ ಯಶ್ ಸಾಥ್​​​ ನೀಡಿ ಬಿರುಸಿನ ಪ್ರಚಾರ ನಡೆಸಿ...Kannada News Portal