ಧಾರವಾಡ : ಗೌರಿ ಲಂಕೇಶ್ ಹತ್ಯೆಕೊರ ಆರೋಪಿಯನ್ನು ಬಂಧನದ ಹಿನ್ನೆಲೆಯಲಿ ಹಿರಿಯ ಸಂಶೋದಕ  ಡಾ. ಎಂ.ಎಂ. ಕಲಬುರ್ಗಿಯವರ ಪತ್ನಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ಈಗಿನ ಸರ್ಕಾರವಾದ್ರೂ ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿಯವರ ಹಂತಕರ ಪತ್ತೆ  ಮಾಡಲಿ ಎಂದು ಕಲಬುರ್ಗಿಯವರ  ಪತ್ನಿ ಉಮಾದೇವಿ ಆಗ್ರಹಿಸಿದ್ದಾರೆ.

ನಗರದ ಕಲ್ಯಾಣ ನಗರದ ನಿವಾಸದಲ್ಲಿ ಮಾಧ್ಯಮಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು ಕಲಬುರ್ಗಿಯವರ, ಹಂತಕರ ಹತ್ಯೆ ಕುರಿತು ಮೂರು ವರ್ಷವಾದರೂ ಯಾವುದೇ ಪ್ರಗತಿ ಕಂಡಿಲ್ಲ. ಇದರಿಂದ ನಾವು ಕೂಡ ತನಿಖೆ ಚುರುಕು ಆಗಲಿ ಎಂದುಕೊಂಡೆ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದೇವೆ ಎಂದರು.

ಆದರೆ ಸುಪ್ರೀಂಕೋರ್ಟ್ ನಿಂದ ಈ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗ ಗೃಹ ಸಚಿವರಾಗಿದ್ದ ಪರಮೇಶ್ವರ ಅವರೇ ಈಗ ಗೃಹ ಮಂತ್ರಿ ಯಾಗಿದ್ದಾರೆ. ಈಗಿನ ಸರ್ಕಾರ ಆದಷ್ಟು ಬೇಗ ಹಂತಕರ ಪತ್ತೆ ಮಾಡಬೇಕು ಎಂದು ಕಲಬುರ್ಗಿಯವರ ಪತ್ನಿ ಉಮಾದೇವಿ ಹೇಳಿಕೆ ನೀಡಿದ್ದಾರೆ.

ವರದಿ : ಶಂಕರಗೌಡ ಪಾಟೀಲ, ಧಾರವಾಡ

Please follow and like us:
0
http://bp9news.com/wp-content/uploads/2018/06/Karnatakada-Miditha-54.jpeghttp://bp9news.com/wp-content/uploads/2018/06/Karnatakada-Miditha-54-150x150.jpegBP9 Bureauಪ್ರಮುಖರಾಜಕೀಯಹುಬ್ಬಳ್ಳಿ-ಧಾರವಾಡಧಾರವಾಡ : ಗೌರಿ ಲಂಕೇಶ್ ಹತ್ಯೆಕೊರ ಆರೋಪಿಯನ್ನು ಬಂಧನದ ಹಿನ್ನೆಲೆಯಲಿ ಹಿರಿಯ ಸಂಶೋದಕ  ಡಾ. ಎಂ.ಎಂ. ಕಲಬುರ್ಗಿಯವರ ಪತ್ನಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ಈಗಿನ ಸರ್ಕಾರವಾದ್ರೂ ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿಯವರ ಹಂತಕರ ಪತ್ತೆ  ಮಾಡಲಿ ಎಂದು ಕಲಬುರ್ಗಿಯವರ  ಪತ್ನಿ ಉಮಾದೇವಿ ಆಗ್ರಹಿಸಿದ್ದಾರೆ.  ನಗರದ ಕಲ್ಯಾಣ ನಗರದ ನಿವಾಸದಲ್ಲಿ ಮಾಧ್ಯಮಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು ಕಲಬುರ್ಗಿಯವರ, ಹಂತಕರ ಹತ್ಯೆ ಕುರಿತು ಮೂರು ವರ್ಷವಾದರೂ...Kannada News Portal