ಧಾರವಾಡ : ಧಾರವಾಡ ಗ್ರಾಮೀಣದಲ್ಲಿ ಗಾಂಜಾ, ಇಸ್ಪೀಟು, ಅಕ್ರಮ ಚಟುವಟಿಕೆ ಮಟ್ಟ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಮೃತ ದೇಸಾಯಿ ತಿಳಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಜನತೆ ಸರಳ, ಸಜ್ಜನಿಕೆಗೆ ಆದ್ಯತೆ ನೀಡಿದ್ದು, ಕ್ಷೇತ್ರದ ಜನತೆ ನೆಮ್ಮದಿಯಿಂದ ಇರಬೇಕು ಎಂಬುದು ತಮ್ಮ ಆಶಯವಾಗಿದೆ. ಅದನ್ನು ಕಾಪಾಡಿಕೊಂಡು ಹೋಗಲು ಮೊದಲ ಆದ್ಯತೆ ನೀಡಲಾಗುವುದು ಎಂದರು.

ಅಲ್ಲದೆ, ಕ್ಷೇತ್ರದ ಬಹುದೊಡ್ಡ ಸಮಸ್ಯೆ ಕುಡಿಯುವ ನೀರಿನ ತೊಂದರೆಯನ್ನು ನಿವಾರಿಸಲಾಗುವುದು. ತುಪರಿಹಳ್ಳ ನೀರಿನ ಸಂಗ್ರಹ, ಚೆಕ್ ಡ್ಯಾಂ ನಿರ್ಮಾಣ ಕ್ಕೆ ಆದ್ಯತೆ ನೀಡಿ ಅಂತರ್ಜಲ ಹೆಚ್ಚಳ ಮಾಡಲಾಗುವುದು ಎಂದರು.

ಬಹುಗ್ರಾಮ ಯೋಜನೆ ನೆನೆಗುದಿಗೆ ಬಿದ್ದಿದೆ.ಅದನ್ನ ಸಂಬಂಧಿಸಿದ ಸಚಿವರ ಜೊತೆಗೆ ಚರ್ಚಿಸಿ ಪೂರ್ಣಗೊಳಿಸಲಾಗುವುದು ಎಂದರು. ಇದೇ ವೇಳೆ ಕಳೆದ ಅವಧಿಯಲ್ಲಿ ನಡೆದ ಕಳಪೆ ಕಾಮಗಾರಿ, ಅರ್ಧಕ್ಕೆ ಸ್ಥಗಿತಗೊಂಡ ಯೋಜನೆಗಳ ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು,  ಅಂತಹ ಅಕ್ರಮ, ಅವ್ಯವಹಾರ ಕಂಡು ಬಂದಲ್ಲಿತನಿಖೆ ಗೆ ಆದೇಶಿಸಲಾಗುವುದು ಎಂದರು.

ವರದಿ: ಶಂಕರಗೌಡ ಪಾಟೀಲ, ಧಾರವಾಡ

Please follow and like us:
0
http://bp9news.com/wp-content/uploads/2018/06/WhatsApp-Image-2018-06-01-at-6.06.17-PM.jpeghttp://bp9news.com/wp-content/uploads/2018/06/WhatsApp-Image-2018-06-01-at-6.06.17-PM-150x150.jpegBP9 Bureauಹುಬ್ಬಳ್ಳಿ-ಧಾರವಾಡಧಾರವಾಡ : ಧಾರವಾಡ ಗ್ರಾಮೀಣದಲ್ಲಿ ಗಾಂಜಾ, ಇಸ್ಪೀಟು, ಅಕ್ರಮ ಚಟುವಟಿಕೆ ಮಟ್ಟ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಮೃತ ದೇಸಾಯಿ ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಜನತೆ ಸರಳ, ಸಜ್ಜನಿಕೆಗೆ ಆದ್ಯತೆ ನೀಡಿದ್ದು, ಕ್ಷೇತ್ರದ ಜನತೆ ನೆಮ್ಮದಿಯಿಂದ ಇರಬೇಕು ಎಂಬುದು ತಮ್ಮ ಆಶಯವಾಗಿದೆ. ಅದನ್ನು ಕಾಪಾಡಿಕೊಂಡು ಹೋಗಲು ಮೊದಲ ಆದ್ಯತೆ ನೀಡಲಾಗುವುದು ಎಂದರು. ಅಲ್ಲದೆ, ಕ್ಷೇತ್ರದ...Kannada News Portal