ಧಾರವಾಡ : ರಾಹುಲ್ ಗಾಂಧಿ ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ್ದಾರೆ, ಕಾಂಗ್ರೆಸ್ ಅಧ್ಯಕ್ಷರಾಗಿ ಮಾಡಿದ್ದು ಸರಿಯಲ್ಲ ಹೀಗಾಗಿ ಅವರಿಗೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು.

ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಸ್ಮೃತಿ ಇರಾನಿ  ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಸಿದ್ದರಾಮಯ್ಯ ಜಾತಿ ಜಾತಿಗಳ ನಡುವೆ ಒಡೆದು ಆಳುತ್ತಿದ್ದಾರೆ. ಇದಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಬೇಕಾಗಿದೆ.ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಹೆಸರಲ್ಲಿ ಹಣ ಹೊಡೆಯಲು ಸಿಎಂ ಮುಂದಾಗಿದ್ದರು, ಇಂತವರಿಂದ ರಾಜ್ಯದ ರಕ್ಷಣೆ ಹೇಗೆ? ಜನರ ಹಣ ಹೊಡೆಯುವ ಕೆಲಸ ಎಷ್ಟರ ಮಟ್ಟಿಗೆ ಸರಿ ಎಂದರು.

ರಾಜ್ಯದಲ್ಲಿ ಐಐಎಸ್ ಮಹಿಳಾ ಆಫಿಸರ್ ಗೆ ಅವಮಾನ ಮಾಡುತ್ತಾರೆ. ಅನುಪಮಾ ಶೈಣೈ ಗೆ ಕೂಡ ಅಪಮಾನ ಮಾಡಿದ್ದಾರೆ. ಪೊಲೀಸರಿಗೆ ಗೌರವ ಸಿಗುತ್ತಿಲ್ಲ. ಇನ್ನು ಸಾಮಾನ್ಯ ಮಹಿಳೆಗೆ ಹೇಗೆ‌ ರಕ್ಷಣೆ ಮಾಡತ್ತಾರೆ, ನೀವೆ ಯೋಚನೆ ಮಾಡಿ ಮತದಾನ ಮಾಡಿ ಎಂದರು.

2014 ಚುನಾವಣೆಯಲ್ಲಿ ಮೋದಿ ಅವರಿಗೆ ಚಾಯ್ ವಾಲ್ ಅಂತಾ ಅಪಮಾನ ಮಾಡಿದರು, ಚಾಯ್ ವಾಲ್ ಹೇಗೆ ಪ್ರಧಾನಿ ಆಗುತ್ತಾನೆ ಅಂತಾ ಲೇವಡಿ ಮಾಡಿದ್ದರು. ಆದರೆ ದೇಶದ ಜನರು ಮೋದಿ ಅವರಿಗೆ ಆಶೀರ್ವಾದ ನೀಡಿ ಪ್ರಧಾನಿ ಮಾಡಿದರು.

ದೇಶದ ಬಡ ಜನರಿಗೆ ಜನಧನ್ ಯೋಜನೆ ಮೂಲಕ ಬ್ಯಾಂಕ್ ಖಾತೆ ಮಾಡಿಕೊಟ್ಟರು ಮೋದಿ. ಇದರ ಮೂಲಕ ಸರ್ಕಾರದ ಯೋಜನೆಗಳ ಅನುದಾನ ಹಣ ನೇರವಾಗಿ ಖಾತೆಗೆ ಜಮಾ ಆಗುತ್ತಿದೆ. ಆದ್ರೆ ಕೇಂದ್ರದ ಹಣ ಇಂದು ರಾಜ್ಯದ ಜನತೆಗೆ ಸಿಗುತ್ತಿಲ್ಲ, ಯಾಕೆಂದರೆ ಕೇಂದ್ರದ ಹಣ ರಾಜ್ಯ ಸರ್ಕಾರದ ಸರಿಯಾಗಿ ಬಳಕೆ ಮಾಡುತ್ತಿಲ್ಲ. ಇದಕ್ಕೆಲ್ಲಾ  ಸಿದ್ದರಾಮಯ್ಯನ ಸರ್ಕಾರವೇ ಕಾರಣ ಎಂದ ಅವರು, ಸಿಎಂಗೆ ಸಿದ್ದ ರೂಪಯ್ಯ ಅಂತಾ ಲೇವಡಿ ಮಾಡಿದರು.

ವರದಿ: ಶಂಕರಗೌಡ ಪಾಟೀಲ, ಧಾರವಾಡ

Please follow and like us:
0
http://bp9news.com/wp-content/uploads/2018/05/smriti-irani-pti_650x400_51505210033.jpghttp://bp9news.com/wp-content/uploads/2018/05/smriti-irani-pti_650x400_51505210033-150x150.jpgBP9 Bureauಪ್ರಮುಖರಾಜಕೀಯಹುಬ್ಬಳ್ಳಿ-ಧಾರವಾಡಧಾರವಾಡ : ರಾಹುಲ್ ಗಾಂಧಿ ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ್ದಾರೆ, ಕಾಂಗ್ರೆಸ್ ಅಧ್ಯಕ್ಷರಾಗಿ ಮಾಡಿದ್ದು ಸರಿಯಲ್ಲ ಹೀಗಾಗಿ ಅವರಿಗೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು. ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಸ್ಮೃತಿ ಇರಾನಿ  ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಸಿದ್ದರಾಮಯ್ಯ ಜಾತಿ ಜಾತಿಗಳ ನಡುವೆ ಒಡೆದು ಆಳುತ್ತಿದ್ದಾರೆ. ಇದಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಬೇಕಾಗಿದೆ.ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಹೆಸರಲ್ಲಿ ಹಣ...Kannada News Portal