ಧಾರವಾಡ: ಕಲ್ಯಾಣ ಮಂಟಪದಿಂದಲೇ ಮತಗಟ್ಟೆಗೆ ಬಂದು ವಧು ವರರು ಮತದ ಹಕ್ಕು ಚಲಾಯಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಮಲ್ಲಿಕಾರ್ಜುನ ಗಾಮನಗಟ್ಟಿ ಹಾಗೂ ನಿಖಿತಾ ಅವರು ಆರತಕ್ಷತೆ ಮುಗಿಸಿಕೊಂಡು ಕಲ್ಯಾಣಮಂಟಪದಿಂದಲೇ ನೇರವಾಗಿ ಧಾರವಾಡ ಕ್ಷೇತ್ರದ ಕಾಮನಕಟ್ಟಿಯ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. 193 ಮತಗಟ್ಟೆಗೆ ಬಂದ ವಧು, ವರರು ಮದುವೆ ಡ್ರೆಸ್ ನಲ್ಲೇ ಮತಗಟ್ಟೆಗೆ ಬಂದು ಎಲ್ಲರ ಗಮನಸೆಳೆದರು.ತಮ್ಮ ಹಕ್ಕು ಚಲಾಯಿಸಿ ವಧು, ವರರು ಸಂತಸಪಟ್ಟರು.


ಹಾಗೆ ಶತಾಯುಷಿ ಅಜ್ಜಿಯಿಂದ  ಮತದಾನ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.ನಗರದ  ಮೃತ್ಯಂಜಯ ನಿವಾಸಿ ಶತಾಯುಷಿ ಚೆನ್ನವ್ವಾ ಗಂಗಪ್ಪ ನಡಕಟ್ಟಿ (104) ಮತದಾನ ಮಾಡಿದರು. ಧಾರವಾಡ ಕ್ಷೇತ್ರದ ಮುರಘಾಮಠದ ಬಳಿ ಇರುವ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ವರದಿ : ಶಂಕರಗೌಡ ಪಾಟೀಲ, ಧಾರವಾಡ

Please follow and like us:
0
http://bp9news.com/wp-content/uploads/2018/05/WhatsApp-Image-2018-05-12-at-1.39.05-PM.jpeghttp://bp9news.com/wp-content/uploads/2018/05/WhatsApp-Image-2018-05-12-at-1.39.05-PM-150x150.jpegBP9 Bureauಪ್ರಮುಖರಾಜಕೀಯಹುಬ್ಬಳ್ಳಿ-ಧಾರವಾಡಧಾರವಾಡ: ಕಲ್ಯಾಣ ಮಂಟಪದಿಂದಲೇ ಮತಗಟ್ಟೆಗೆ ಬಂದು ವಧು ವರರು ಮತದ ಹಕ್ಕು ಚಲಾಯಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಮಲ್ಲಿಕಾರ್ಜುನ ಗಾಮನಗಟ್ಟಿ ಹಾಗೂ ನಿಖಿತಾ ಅವರು ಆರತಕ್ಷತೆ ಮುಗಿಸಿಕೊಂಡು ಕಲ್ಯಾಣಮಂಟಪದಿಂದಲೇ ನೇರವಾಗಿ ಧಾರವಾಡ ಕ್ಷೇತ್ರದ ಕಾಮನಕಟ್ಟಿಯ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. 193 ಮತಗಟ್ಟೆಗೆ ಬಂದ ವಧು, ವರರು ಮದುವೆ ಡ್ರೆಸ್ ನಲ್ಲೇ ಮತಗಟ್ಟೆಗೆ ಬಂದು ಎಲ್ಲರ ಗಮನಸೆಳೆದರು.ತಮ್ಮ ಹಕ್ಕು ಚಲಾಯಿಸಿ ವಧು, ವರರು ಸಂತಸಪಟ್ಟರು. ಹಾಗೆ ಶತಾಯುಷಿ...Kannada News Portal