ಧಾರವಾಡ :  ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ವಿನಯ ಕುಲಕರ್ಣಿ ಮನೆಗೆ ಸಚಿವ ಎಚ್.ಡಿ‌ ರೇವಣ್ಣ ಭೇಟಿ ನೀಡಿದ್ದಾರೆ. ಮಳೆ ಹಾನಿ ಸಂಬಂಧ ಅಧಿಕಾರಿಗಳ ಸಭೆ ನಡೆಸಲು ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಅವರು, ನಗರದ ಶಿವಗಿರಿ ಕಾಲನಿಯಲ್ಲಿರುವ ವಿನಯ  ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಲಿಂಗಾಯತ ಹೋರಾಟದ ಪ್ರಮುಖರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಿಲ್ಲ ಅನ್ನೋ ಅಸಮಾಧಾನಗಳಿರುವಾಗ ಮಹತ್ವ ಪಡೆದುಕೊಂಡಿದೆ ಲಿಂಗಾಯತ ಹೋರಾಟದ ಪ್ರಮುಖ ನಾಯಕರಾದ ವಿನಯ ಕುಲಕರ್ಣಿ ಅವರ ಮನೆಗೆ ರೇವಣ್ಣ ಅವರ  ಈ ಭೇಟಿ.

ಕಾರು ಇಳಿಯುತ್ತಿದ್ದಂತೆ ಏನ್ರಯ್ಯಾ ನಿಮ್ಮ ಮನೆಗೆ ಬರೋ ಧಾರವಾಡ ರಸ್ತೆಗಳನ್ನ ಹೀಗೆ ಇಟ್ಟು ಕೊಂಡಿದ್ದೀರಾ ಎಂದು ರೇವಣ್ಣ  ಬೇಸರ ವ್ಯಕ್ತಪಡಿಸಿದರು. ಆಗ ಇಲ್ಲ ಅಣ್ಣಾ ಯುಜಿಡಿ ವರ್ಕ್ ನಡೆತಿದೆ ಅದಕ್ಕೆ ರಸ್ತೆಗಳು ಹೀಗಿವೆ ಎಂದು ವಿನಯ ಕುಲಕರ್ಣಿ ಸಮಜಾಯಿಸಿ ನೀಡಿದ್ದಾರಂತೆ.

ವರದಿ : ಶಂಕರಗೌಡ ಪಾಟೀಲ, ಧಾರವಾಡ

 

Please follow and like us:
0
http://bp9news.com/wp-content/uploads/2018/06/firstsuddi-3-1.jpghttp://bp9news.com/wp-content/uploads/2018/06/firstsuddi-3-1-150x150.jpgBP9 Bureauಪ್ರಮುಖರಾಜಕೀಯಹುಬ್ಬಳ್ಳಿ-ಧಾರವಾಡಧಾರವಾಡ :  ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ವಿನಯ ಕುಲಕರ್ಣಿ ಮನೆಗೆ ಸಚಿವ ಎಚ್.ಡಿ‌ ರೇವಣ್ಣ ಭೇಟಿ ನೀಡಿದ್ದಾರೆ. ಮಳೆ ಹಾನಿ ಸಂಬಂಧ ಅಧಿಕಾರಿಗಳ ಸಭೆ ನಡೆಸಲು ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಅವರು, ನಗರದ ಶಿವಗಿರಿ ಕಾಲನಿಯಲ್ಲಿರುವ ವಿನಯ  ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಲಿಂಗಾಯತ ಹೋರಾಟದ ಪ್ರಮುಖರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಿಲ್ಲ ಅನ್ನೋ ಅಸಮಾಧಾನಗಳಿರುವಾಗ ಮಹತ್ವ ಪಡೆದುಕೊಂಡಿದೆ ಲಿಂಗಾಯತ ಹೋರಾಟದ ಪ್ರಮುಖ...Kannada News Portal