ಡೈನಾಮಿಕ್​ ಹೀರೋ ನಟ ದೇವರಾಜ್​ ಅವರ ಪುತ್ರ ಪ್ರಜ್ವಲ್​ ದೇವರಾಜ್​  ಅವರ ಪತ್ನಿ  ರಾಗಿಣಿ, ಸಿನಿಮಾ ಅಖಾಡಕ್ಕಿಳಿಯುತ್ತಿರುವ ವಿಚಾರ ಸದ್ಯ ಬಹಿರಂಗವಾಗಿದೆ. ಅಂದಹಾಗೇ  ಯಾವ ಸೆಲೆಬ್ರಿಟಿಗೂ ಕಡಿಮೆ ಇಲ್ಲದ ರಾಗಿಣಿ ಬಗ್ಗೆ ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಅಲ್ಲೊಮ್ಮೆ-ಇಲ್ಲೊಮ್ಮೆ ಮಾತುಗಳು ಕೇಳಿ ಬರುತ್ತಿದ್ದವು. ಈ ಹುಡುಗಿ ಸಿನಿಮಾದಲ್ಲಿ ಆ್ಯಕ್ಟ್ ಮಾಡಿದ್ರೆ ಹೇಗೆ ಅಂತಾ…! ಇದೀಗ  ಕಾಲ ಕೂಡಿ ಬಂದಿದೆ.

ಸದ್ಯ ಪ್ರಜ್ವಲ್​ ದೇವರಾಜ್​ ಇನ್ಸ್​ಪೆಕ್ಟರ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ  ಪ್ರಜ್ವಲ್ ಸಹೋದರ ಕೂಡ ಈಗಾಗಲೇ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರ. ಇನ್ನು  ಮುದ್ದು ಸೊಸೆ ರಾಗಿಣಿ ಕಲರ್​ಫುಲ್​  ಲೋಕ್ಕಕೆ ಕಾಲಿಟ್ಟರೆ ಒನ್​ ಆಫ್​ ದ ಸೆಲೆಬ್ರಿಟಿ ಫ್ಯಾಮಿಲಿ ಅಂತಾನೆ ಕರೆಯಲಾಗುತ್ತದೆ. ಅದೇನೇ ಇರಲಿ ಸದ್ಯಮಾಸ್ ಕಥಾ ಹಂದರ ಹೊಂದಿರೋ ಇನ್ಸ್​ಪೆಕ್ಟರ್​ ವಿಕ್ರಂ  ಈ ಚಿತ್ರದ ಬಗ್ಗೆ ಭಾರೀ ಹೋಪ್ ಇಟ್ಟುಕೊಂಡಿರೋ ಪ್ರಜ್ವಲ್ ಪಾಲಿಗಿದು ಟರ್ನಿಂಗ್ ಪಾಯಿಂಟ್​ ಚಿತ್ರ ಎಂದೇ ಹೇಳಲಾಗುತ್ತಿದೆ. ಇದೀಗ ಈ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಪ್ರಜ್ವಲ್ ಮಡದಿ ರಾಗಿಣಿ ಚಂದ್ರನ್ ನಟಿಸಲಿದ್ದಾರೆಂಬ ಸುದ್ದಿ ಹೊರ ಬಿದ್ದಿದೆ!

ಈ ಚಿತ್ರದಲ್ಲಿ ಇಡೀ ಕಥೆಯ ಮುಖ್ಯಬಿಂದುವಿನಂತಿರೋ ಅತಿಥಿ ಪಾತ್ರವೊಂದಿದೆಯಂತೆ. ಆದರೆ ಈ ಪಾತ್ರಕ್ಕಾಗಿ ನಿರ್ದೇಶಕ ವಿಖ್ಯಾತ್ ಯಾರನ್ನೂ ಆಯ್ಕೆ ಮಾಡಿಕೊಂಡಿರಲಿಲ್ಲ. ಇದೀಗ ಈ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ಮಡದಿ ರಾಗಿಣಿ ನಟಿಸೋದೇ ಸೂಕ್ತ ಎಂಬ ತೀರ್ಮಾನಕ್ಕೆ ವಿಖ್ಯಾತ್ ಬಂದಿದ್ದಾರೆ.

ಈ ಬಗ್ಗೆ ಪ್ರಜ್ವಲ್‍ಗೆ ಸಣ್ಣ ಸುಳಿವನ್ನೂ ಕೊಡದೇ ವಿಖ್ಯಾತ್ ಚಿತ್ರ ತಂಡದ ಜೊತೆ ಮಾತಾಡಿದ್ದಾರೆ. ಅತ್ತಲಿಂದಲೂ ರಾಗಿಣಿಯೇ ಸೂಕ್ತ ಎಂಬ ಅಭಿಪ್ರಾಯವೇ ಕೇಳಿ ಬಂದಿದೆ. ಇದಾದಾಕ್ಷಣವೇ ನೇರವಾಗಿ ರಾಗಿಣಿಯವರನ್ನೇ ಸಂಪರ್ಕಿಸಿದ್ದಾರೆ. ಬಳಿಕ ರಾಗಿಣಿ ಪ್ರಜ್ವಲ್ ಜೊತೆ ಮಾತಾಡಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ಇನ್ನು ರಾಗಿಣಿಗೆ ತುಂಬಾ ಖುಒಷಿಯಾಗಿದ್ಯಂತೆ. ಮೊದಲ ಬಾರಿ ನಟಿಸ್ತಾ ಇದ್ರೂ  ಅದು ತಮ್ಮ  ಪ್ರತೀಯ  ಪತಿ ಜೊತೆ ಎನ್ನೋದು. ಇನ್ನು ಪ್ರಜ್ವಲ್​ ಗೂ ಕೂಡ ತಮ್ಮ ಮಡದಿ ಜೊತೆ  ಆ್ಯಕ್ಟ್​ ಮಾಡೋಕೆ ತುಂಬಾ ಖುಷಿಯಿದ್ಯಂತೆ.

ರಾಗಿಣಿ ಕೂಡಾ ಮೂಲತಃ ಮಾಡೆಲಿಂಗ್ ಕ್ಷೇತ್ರದಿಂದ ಬಂದವರು. ಡ್ಯಾನ್ಸರ್ ಕೂಡಾ ಆಗಿರೋ ರಾಗಿಣಿಗೆ ಒಂದು ಹಂತದಲ್ಲಿಯಾದರೂ ನಟಿಯಾಗಬೇಕೆಂಬ ಆಸೆ ಮೊಳೆತಿರುತ್ತದೆ. ಆದರೀಗ ಅವರಿಗೆ ತಮ್ಮ ಪತಿ ಪ್ರಜ್ವಲ್ ಜೊತೆಗೇ ನಟಿಸೋ ಯೋಗ ಕೂಡಿ ಬಂದಿದೆ. ಈ ಮೂಲಕ ಅವರು ಮೊದಲ ಸಲ ಕ್ಯಾಮೆರಾ ಮುಂದೆ ನಿಲ್ಲಲಿದ್ದಾರೆ ಅಂದಹಾಗೇ ಇದು ಸಣ್ಣಪಾತ್ರವಾದ್ರೂ, ರಾಗಿಣಿಗೆ ಒಂದು ದೊಡ್ಡ ಪರೀಕ್ಷೆಯೇ ಸರಿ. ಒಟ್ಟಾರೆ ಈ ಎಕ್ಸಾಮ್​ನಲ್ಲಿ ಪಾಸ್​ ಆದ್ರೆ  ರಾಗಿಣಿಗೆ ಯೋಗಾಯೋಗ ಕೂಡಿ ಬರೋದ್ರಲ್ಲಿ ಆಶ್ಚರ್ಯವಿಲ್ಲ ಎನ್ನುತ್ತಾರೆ ಕೆಲ ಮಂದಿ.  ಅಂದಹಾಗೇ ರಾಗಿಣಿ ಈ ಹಿಂದೆ ನಟಿ ರಚಿತಾರಾಂ ಅವರ  ನಿರ್ಮಾಣದ ರಿಷಬ್ ಪ್ರಿಯಾ ಎಂಬ ಕಿರುಚಿತ್ರದಲ್ಲಿ ನಟಿಸಿ ಒಳ್ಳೆ ರೆಸ್ಪಾನ್ಸ್​ ಗಿಟ್ಟಿಸಿಕೊಂಡಿದ್ದರು.

Please follow and like us:
0
http://bp9news.com/wp-content/uploads/2018/09/maxresdefault-5-1024x576.jpghttp://bp9news.com/wp-content/uploads/2018/09/maxresdefault-5-150x150.jpgBP9 Bureauಸಿನಿಮಾಡೈನಾಮಿಕ್​ ಹೀರೋ ನಟ ದೇವರಾಜ್​ ಅವರ ಪುತ್ರ ಪ್ರಜ್ವಲ್​ ದೇವರಾಜ್​  ಅವರ ಪತ್ನಿ  ರಾಗಿಣಿ, ಸಿನಿಮಾ ಅಖಾಡಕ್ಕಿಳಿಯುತ್ತಿರುವ ವಿಚಾರ ಸದ್ಯ ಬಹಿರಂಗವಾಗಿದೆ. ಅಂದಹಾಗೇ  ಯಾವ ಸೆಲೆಬ್ರಿಟಿಗೂ ಕಡಿಮೆ ಇಲ್ಲದ ರಾಗಿಣಿ ಬಗ್ಗೆ ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಅಲ್ಲೊಮ್ಮೆ-ಇಲ್ಲೊಮ್ಮೆ ಮಾತುಗಳು ಕೇಳಿ ಬರುತ್ತಿದ್ದವು. ಈ ಹುಡುಗಿ ಸಿನಿಮಾದಲ್ಲಿ ಆ್ಯಕ್ಟ್ ಮಾಡಿದ್ರೆ ಹೇಗೆ ಅಂತಾ...! ಇದೀಗ  ಕಾಲ ಕೂಡಿ ಬಂದಿದೆ. ಸದ್ಯ ಪ್ರಜ್ವಲ್​ ದೇವರಾಜ್​ ಇನ್ಸ್​ಪೆಕ್ಟರ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ  ಪ್ರಜ್ವಲ್ ಸಹೋದರ ಕೂಡ...Kannada News Portal