ಆಂಧ್ರ ಪ್ರದೇಶ
: ಇಷ್ಟು ದಿನ ಉತ್ತರ ಪ್ರದೇಶ, ಹರಿಯಾಣದ ಗ್ರಾಮಗಳಲ್ಲಿ ಮಹಿಳೆಯರು ನೈಟಿಯನ್ನು ಧರಿಸುವಂತಿಲ್ಲ ಎಂಬ ಆದೇಶ ಅಲ್ಲಿನ ಪಂಚಾಯಿತಿಗಳಲ್ಲಿ  ಇಂತಹ ನಿಯಮಾವಳಿ ಹಾಗು ನಿಷೇಧವನ್ನು ಹೇರಿಸಿವುದು ಸಾಮನ್ಯವಾಗಿದೆ. ಆದರೆ  ಈ ನಿಯಮಾವಳಿಯನ್ನು ಈಗ ಜಾರಿಗೆ ತರಲು ಆಂಧ್ರದ ಪಶ್ಚಿಮ ಗೋದಾವರಿಯ ನಿಡಮರ್ರು ಮಂಡಲದ ತೋಕಲಪಲ್ಲಿಯಲ್ಲಿ ಈ ನಿರ್ಧಾರವನ್ನು ಕೈಗೊಂಡಿರುವ ಬಗ್ಗೆ ಮಾಹಿತಿ ಹೊರಬಂದಿದೆ.

ಮಹಿಳೆಯರು ತೊಡುವ ‘ನೈಟಿ’ ಮೇಲೆ ನಿಷೇಧ ಹೇರಲಾಗಿದೆ. ಇನ್ನು ಈ ಹಳ್ಳಿಯಲ್ಲಿ ಯಾರಾದರೂ ಮಹಿಳೆಯರು ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ನೈಟಿ ಧರಿಸಿಬಾರದು ಎಂದು ಗ್ರಾಮದ ಮುಖ್ಯಸ್ಥರು ಆದೇಶಿಸಿದ್ದಾರೆ. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ 2 ಸಾವಿರ ದಂಡ ವಿಧಿಸಲಾಗುವುದು ಎಂದೂ ಹೇಳಿದ್ದಾರಂತೆ. ಅಷ್ಟೆ ಅಲ್ಲ, ಮಹಿಳೆಯರು ‘ನೈಟಿ’ ಧರಿಸಿದ ಕುರಿತು ಯಾರಾದರೂ ದೂರು ನೀಡಿದರೆ, ಅವರಿಗೆ ಒಂದು ಸಾವಿರ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ. ಈ ಹಳ್ಳಿಯಲ್ಲಿ ಮಹಿಳೆಯರು ‘ನೈಟಿ’ ಧರಿಸುವುದನ್ನು ಹಿರಿಯರು ವಿರೋಧಿಸುತ್ತಿದ್ದಾರೆ.

ನೈಟಿ’ ಧರಿಸಿ ಮಹಿಳೆಯರು ಮಕ್ಕಳನ್ನು ಶಾಲೆ ಕರೆದುಕೊಂಡು ಹೋಗುವುದು ಹಾಗೂ ತರಕಾರಿ ಖರೀದಿಗೆ ಹೋಗುವುದು ಸರಿಯಾದ ಕ್ರಮವಲ್ಲ. ಅದನ್ನು ಕೇವಲ ರಾತ್ರಿಯಷ್ಟೆ ತೊಡಬೇಕು ಎನ್ನುವುದು ಗ್ರಾಮದ ಹಿರಿಯರ ವಾದ. ಆದರೆ ಈ ನಿರ್ಧಾರದ ವಿರುದ್ಧ ಸಾಕಷ್ಟು ವಿರೋಧವೂ ಕೇಳಿ ಬರುತ್ತಿದೆ. ಮಹಿಳೆಯರ ಖಾಸಗಿ ನಿರ್ಧಾರದ ಕುರಿತು ನಿಷೇಧ ಹೇರುವುದು ಸರಿಯಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಇನ್ನೂ ಈ ವಿಷಯ ತಿಳಿದ ಸ್ಥಳೀಯ ತಹಸೀಲ್ದಾರ್​ ಸುಂದರ ರಾಜು ಅವರೂ ಈ ಕುರಿತು ಕ್ರಮ ಜರುಗಿಸಲು ಮುಂದಾಗಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ.

Please follow and like us:
0
http://bp9news.com/wp-content/uploads/2018/11/nighties-2.jpeghttp://bp9news.com/wp-content/uploads/2018/11/nighties-2-150x150.jpegBP9 Bureauಟೈಮ್ ಪಾಸ್ಪ್ರಮುಖರಾಷ್ಟ್ರೀಯಆಂಧ್ರ ಪ್ರದೇಶ: ಇಷ್ಟು ದಿನ ಉತ್ತರ ಪ್ರದೇಶ, ಹರಿಯಾಣದ ಗ್ರಾಮಗಳಲ್ಲಿ ಮಹಿಳೆಯರು ನೈಟಿಯನ್ನು ಧರಿಸುವಂತಿಲ್ಲ ಎಂಬ ಆದೇಶ ಅಲ್ಲಿನ ಪಂಚಾಯಿತಿಗಳಲ್ಲಿ  ಇಂತಹ ನಿಯಮಾವಳಿ ಹಾಗು ನಿಷೇಧವನ್ನು ಹೇರಿಸಿವುದು ಸಾಮನ್ಯವಾಗಿದೆ. ಆದರೆ  ಈ ನಿಯಮಾವಳಿಯನ್ನು ಈಗ ಜಾರಿಗೆ ತರಲು ಆಂಧ್ರದ ಪಶ್ಚಿಮ ಗೋದಾವರಿಯ ನಿಡಮರ್ರು ಮಂಡಲದ ತೋಕಲಪಲ್ಲಿಯಲ್ಲಿ ಈ ನಿರ್ಧಾರವನ್ನು ಕೈಗೊಂಡಿರುವ ಬಗ್ಗೆ ಮಾಹಿತಿ ಹೊರಬಂದಿದೆ. ಮಹಿಳೆಯರು ತೊಡುವ 'ನೈಟಿ' ಮೇಲೆ ನಿಷೇಧ ಹೇರಲಾಗಿದೆ. ಇನ್ನು ಈ ಹಳ್ಳಿಯಲ್ಲಿ ಯಾರಾದರೂ ಮಹಿಳೆಯರು...Kannada News Portal