ಬೆಂಗಳೂರು : ‘ನನ್ನ ಮೇಲೆ ನಿಮಗೆ ಯಾಕಿಷ್ಟು ಕೋಪ ? ನಾನೇನು ಅನ್ಯಾಯ ಮಾಡಿದ್ದೇನೆ’… ‘ನಾನು ಪೆಟ್ರೋಲ್‌ ಡಿಸೇಲ್‌ ಬೆಲೆ ಕೇವಲ 1 ರೂಪಾಯಿ ಹೆಚ್ಚು ಮಾಡಿದರೆ ಮಂಗಳೂರಿನ ಮೀನುಗಾರರ ಮಹಿಳೆಯ ಬಳಿ “ಕುಮಾರಸ್ವಾಮಿ ಇಸ್‌ ನಾಟ್‌ ಅವರ್‌ ಸಿಎಂ” ಅಂತ ಹೇಳಿಸುತ್ತೀರಿ. ಪ್ರಧಾನಿ ನರೇಂದ್ರ ಮೋದಿ 11 ಬಾರಿ ಬೆಲೆ ಏರಿಕೆ ಮಾಡಿದಾಗ ಚಕಾರ ಎತ್ತಿಲ್ಲ ಯಾಕೆ ‘ ?
‘ವಿದ್ಯುತ್‌ ಬಿಲ್‌ 10 ರೂಪಾಯಿ ಮಾತ್ರ ಏರಿಕೆ ಮಾಡಿದ್ದೇನೆ. ಬಡವರೂ ಕೂಡ 20 ರೂಪಾಯಿ ಕೊಟ್ಟು ಮಿನರಲ್‌ ವಾಟರ್‌ ಖರೀದಿಸುತ್ತಾರೆ’. ‘ಮಾಧ್ಯಮಗಳು ಯಾವುದೇ ವಿಷಯವಿಲ್ಲದೆ ಸುದ್ದಿ ಮಾಡುತ್ತೀರಿ. ಜನರ ನಡುವೆ ಕಂದಕ ಸೃಷ್ಟಿಸುತ್ತೀರಿ ನನ್ನ ಮೇಲೆ ಅನುಮಾನ ಮೂಡಿಸುತ್ತೀರಿ.’ ನಾನು ಜನಸಾಮಾನ್ಯರ ಪರವಾಗಿರುವ ಸಿಎಂ.

‘ನಾನು ಮುಖ್ಯಮಂತ್ರಿ ಆಗಿ ಕೇವಲ 2 ತಿಂಗಳು ಆಗಿದೆ. ಸಮಸ್ಯೆಗಳೆಲ್ಲಾ 70 ವರ್ಷಗಳಿಂದ ಇರಲಿಲ್ಲವೇ? ನಾನು ಬಡವರ ಪರ ಕಾಳಜಿಯುಳ್ಳ ಎಲ್ಲಾ ಜಿಲ್ಲೆಗಳ ಸಿಎಂ. ಟೀಕೆ ಮಾಡುವುದನ್ನ ನಿಲ್ಲಿಸಿ. ನನಗೆ ಸ್ವಲ್ಪ ಕಾಲಾವಕಾಶ ನೀಡಿ”ನನ್ನ ಮೇಲೆ ನಿಮಗೆ ಕನಿಕರ ಇಲ್ಲವೆ ? ಯಾಕೆ ನನ್ನ ಮೇಲೆ ಇಷ್ಟು ಕೋಪ ? ಎಷ್ಟು ದಿನ ಅಂತ ನನ್ನ ಮೇಲೆ ಸುಳ್ಳು ಸುದ್ದಿ ಮಾಡುತೀರಿ? ಅಪಪ್ರಚಾರ ಮಾಡಬೇಡಿ’ ಎಂದು ಮಮ್ಮಲ ಮರುಗಿ, ಕ್ಷಣಕ್ಕೊಮ್ಮೆ ಗದ್ಗದಿತರಾಗಿ ಸಿಎಂ ಕುಮಾರಸ್ವಾಮಿ ಅವರು ಕರ್ನಾಟಕ ವಿಕಲಚೇತನ ಸೇವಾ ಸಂಸ್ಥೆ ಒಕ್ಕೂಟ ಆಯೋಜಿಸಿದ್ದ ಸ್ಪಂದನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿ ಬಿಜೆಪಿಗರ ಮತ್ತು ಮಾಧ್ಯಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ನಾನು ರಾಜ್ಯದ 30 ಜಿಲ್ಲೆಗಳ ಹಾಗೂ ಎಲ್ಲ ಜನರ ಸಿಎಂ. ಈ ವಿಚಾರದಲ್ಲಿ ಯಾವುದೇ ಬೇಧ ಭಾವ ಇಲ್ಲ. ರೈತ ಕುಟುಂಬಗಳಲ್ಲಿ ನಡೆಯುತ್ತಿರುವ ಅತ್ಮಹತ್ಯೆ ತಪ್ಪಿಸಲು ಸಾಲ ಮನ್ನಾ ನಿರ್ಧಾರ ಮಾಡಲಾಗಿದೆ. ಇದು ಕಷ್ಟದ ಕೆಲಸ ಎಂದೂ ಹೇಳಿದ್ದಾರೆ. ಎಷ್ಟೇ ಕಷ್ಟ ಆದರೂ ನಾನು ಮಾಡೇ ತೀರಿದ್ದೇನೆ. ಜತೆಗೆ, ಮುಂದಿನ ತಿಂಗಳಿನಿಂದ ವಿಶೇಷ ಚೇತನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹಾಗೂ ಕ್ಷೀರಭಾಗ್ಯ ಯೋಜನೆ ಆರಂಭವಾಗಲಿದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಪ್ರಕಟಿಸಿದ್ದಾರೆ.

ಕೊಡಗು ಯುವಕನ ವೀಡಿಯೋ ವೈರಲ್ : ಸಿಎಂ ಪ್ರತಿಕ್ರಿಯೆ

ಇನ್ನು ಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಮೊದಲ ಬಜೆಟ್ನಲ್ಲಿ ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಜಿಲ್ಲೆಯ ಎಮ್ಮೆಮಾಡು ಗ್ರಾಮದ ಬಾಲಕನೊಬ್ಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಆ ವೀಡಿಯೋದಲ್ಲಿ ಆ ಬಾಲಕ ಕೊಡಗಿನ ಕಾವೇರಿ ನೀರು ಬೇಕು. ಆದರೆ, ಕೊಡಗಿನ ಅಭಿವೃದ್ಧಿ ಬೇಡವೇ ಎಂದು ಪ್ರಶ್ನಿಸಿರುವ ಬಾಲಕ, ರಾಜ್ಯ ಸರಕಾರದ ಬಜೆಟ್ನಲ್ಲಿ ಕೊಡಗು ಜಿಲ್ಲೆಯನ್ನು ಮರೆತೆಬಿಟ್ಟಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಅವರು ಕೊಡಗನ್ನು ಅನಾಥವನ್ನಾಗಿಸಿದ್ದಾರೆ ಎಂದು ಬಾಲಕ ಆಕ್ರೋಶ ವ್ಯಕ್ತಪಡಿಸಿದ್ದ. ಭೀಕರ ಮಳೆಯಿಂದ ಕೊಡಗಿನ ವಾಣಿಜ್ಯ ಬೆಳೆಗಳು ನಾಶವಾಗಿದ್ದು, ಜಿಲ್ಲೆಯ ರೈತರಿಗೆ ಮೊದಲು ಪರಿಹಾರ ನೀಡಿ ಎಂದು ಆಗ್ರಹಿಸಿದ್ದ. ಅಲ್ಲದೇ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿದ್ದು, ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಸರಕಾರದ ಗಮನ ಸೆಳೆಯಬೇಕು. ಈ ಮೂಲಕ ಕೊಡಗಿನ ಸಮಸ್ಯೆ ಬಗೆಹರಿಸಬೇಕು ಎಂದು ಪೋರ ಒತ್ತಾಯಿಸಿದ್ದನು.

ಈ ಬಗ್ಗೆ ಸಿಎಂ ಕುಮಾರಸ್ವಾಮಿ ಜೆಡಿಎಸ್ ಜೆಪಿ ಭವನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿದ್ದು, ಆ ವೀಡಿಯೋವನ್ನು ನಾನು ನೋಡಿದ್ದೇನೆ. ಆ ಬಾಲಕನ ಕೈ ನಿಂದ ಆ ವಿಡಿಯೋವನ್ನು ಬಿಜೆಪಿಯವರೇ ಉದ್ದೇಶ ಪೂರ್ವಕವಾಗಿ ಮಾಡಿಸಿದ್ದಾರೆ. ಆತನ ಆವ ಭಾವಗಳನ್ನು ಗಮಿಸಿದರೆ ಅದು ತಿಳಿಯುತ್ತದೆ.

20 ತಾರೀಕು ನಾನು ಕೊಡಗಿಗೆ ಬರುತ್ತಿದ್ದೇನೆ. 2 ದಿನ ಅಲ್ಲೇ ಉಳಿದು ನಿಮ್ಮ ಸಮಸ್ಯೆ ಬಗೆ ಹರಿಸುತ್ತೇನೆ. ಸ್ವಲ್ಪ ಸಮಾಧಾನ ಮಾಡಿಕೊಳ್ಳಿ ಮಾನ್ಯ ಬೋಪಯ್ಯನವರೇ.., ನಿಮ್ಮನ್ನ ನಿಮ್ಮ ಜಿಲ್ಲೆಗೆ ಬಂದಾಗ ಕರೆಸಿ ಕೊಳ್ಳುತ್ತೇನೆ. ದಯಮಾಡಿ ಆಗ ಬನ್ನಿ ಜಿಲ್ಲೆಯ ಸಮಸ್ಯೆ ಬಗ್ಗೆ ಚರ್ಚಿಸೋಣ ಪರಿಹಾರಕ್ಕೆ ಮಾರ್ಗ ತಿಳಿಯೋಣ ಅದನ್ನ ಬಿಟ್ಟು ರಾಜಕೀಯ ಮಾಡಿ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಬೇಡ ಎಂದು ವಿನಂತಿಸುತ್ತಲೇ ಬಿಜೆಪಿಗರ ಮೇಲೆ ಚಾಟಿ ಬೀಸಿದ್ದಾರೆ.

ಇತ್ತ ಸಿಎಂ ಕುಮಾರಸ್ವಾಮಿ ಈ ರೀತಿ ಪರಿ ಪರಿಯಾಗಿ ಬೇಡಿಕೊಳ್ಳುತ್ತಾ ಸಭೆಯನ್ನು ಉದ್ದೇಶಿಸಿ ಮಾತನಾಡುವುದನ್ನು ಕಂಡ ನೆರೆದಿದ್ದ ಕುಮಾರಸ್ವಾಮಿ ಅವರ ಅಭಿಮಾನಿಗಳು ಇತರ ಜಿಲ್ಲೆಯಿಂದ ಆಗಮಿಸಿದ್ದ ಜೆಡಿಎಸ್ ಕಾರ್ಯಕರ್ತರು ತಮ್ಮ ನಾಯಕನ ಕಣ್ಣೀರು ಸಹಿಸಲಾಗದೇ ವಿಲವಿಲನೆ ಒದ್ದಾಡುತ್ತಿದ್ದರು. ಅವರ ಕಣ್ಣಾಲಿಗಳಲ್ಲೂ ನೀರಾಡುವುದನ್ನು ಕಾಣಬಹುದಿತ್ತು…

Please follow and like us:
0
http://bp9news.com/wp-content/uploads/2018/07/Kumaraswamy-crying-B7Vx1-1.jpghttp://bp9news.com/wp-content/uploads/2018/07/Kumaraswamy-crying-B7Vx1-1-150x150.jpgPolitical Bureauಪ್ರಮುಖರಾಜಕೀಯEmotional creature CM Kumaraswamy is tears !!! : 'What have I done wrong - so angry with me'?ಬೆಂಗಳೂರು : ‘ನನ್ನ ಮೇಲೆ ನಿಮಗೆ ಯಾಕಿಷ್ಟು ಕೋಪ ? ನಾನೇನು ಅನ್ಯಾಯ ಮಾಡಿದ್ದೇನೆ'... ‘ನಾನು ಪೆಟ್ರೋಲ್‌ ಡಿಸೇಲ್‌ ಬೆಲೆ ಕೇವಲ 1 ರೂಪಾಯಿ ಹೆಚ್ಚು ಮಾಡಿದರೆ ಮಂಗಳೂರಿನ ಮೀನುಗಾರರ ಮಹಿಳೆಯ ಬಳಿ “ಕುಮಾರಸ್ವಾಮಿ ಇಸ್‌ ನಾಟ್‌ ಅವರ್‌ ಸಿಎಂ'' ಅಂತ ಹೇಳಿಸುತ್ತೀರಿ. ಪ್ರಧಾನಿ ನರೇಂದ್ರ ಮೋದಿ 11 ಬಾರಿ ಬೆಲೆ ಏರಿಕೆ ಮಾಡಿದಾಗ ಚಕಾರ ಎತ್ತಿಲ್ಲ ಯಾಕೆ ' ? ‘ವಿದ್ಯುತ್‌ ಬಿಲ್‌ 10 ರೂಪಾಯಿ ಮಾತ್ರ ಏರಿಕೆ...Kannada News Portal