ಬೆಂಗಳೂರು : ಮೋದಿ ಏಕತಾಯಾತ್ರೆ ಮೂಲಕ ಇಡೀ ರಾಷ್ಟ್ರವನ್ನು ಗೆದ್ದು ಕರ್ನಾಟಕಕ್ಕೆ ಬಂದು ನಿಂತಿರುವ ಪ್ರಧಾನಿ ಮೋದಿಯವರಿಗೆ ಶಿವಮೊಗ್ಗ ಜನರ ಪರವಾಗಿ ಮತ್ತು ವೈಯಕ್ತಿಕವಾಗಿ ಆತ್ಮೀಯ ಸ್ವಾಗತ ಕೋರಿದ ಈಶ್ವರಪ್ಪ, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಆರಂಭಿಸಿದರು.

ಪಿಎಂ ಮೋದಿ ಸರ್ಕಾರ ಶಿವಮೊಗ್ಗ ನಗರವನ್ನು ಸ್ಮಾರ್ಟ್ ಸಿಟಿ ಮಾಡಲು ಆಯ್ಕೆ ಮಾಡಿದೆ. ಆದರೆ ಸಿಎಂ ಸಿದ್ದರಾಮಯ್ಯನವರು ಆ ಹಣವನ್ನು ಉಪಯೋಗ ಮಾಡಲು ಬಿಟ್ಟಿಲ್ಲ. ಅದಕ್ಕಾಗಿ ಸಂಬಂಧ ಪಟ್ಟ ಅಧಿಕಾರಿಗಳನ್ನೂ ಸಹ ನೇಮಿಸಲಿಲ್ಲ ಎಂದು ಆರೋಪಿಸಿದರು.

ನಂತರ ಮಾತನಾಡಿದ ಅವರು, ಮಲಗಿರುವ ಸಿದ್ದರಾಮಯ್ಯ ಎದ್ದು ಕೂರ ಬೇಕು ಹಾಗೆ ಕೂಗಿ ಎಂದ ಅವರು, ಬಿಜೆಪಿಗೆ ಜೈ, ಯಡಿಯೂರಪ್ಪಗೆ ಜೈ ಎಂದೇಳಿ ನೆರೆದಿದ್ದವರ ಚಪ್ಪಾಳೆಗಿಟ್ಟಿಸಿದರು.

ಬಿಎಸ್​​ವೈ ಭಾಷಣ:

ದೇಶಕಂಡ ಶ್ರೇಷ್ಠ ನಾಯಕ ಮೋದಿ ಮೊದಲ ಬಾರಿಗೆ ಪ್ರಧಾನಿಯಾದ ಬಳಿಕ ನಮ್ಮ ಜಿಲ್ಲೆಗೆ ಆಗಮಿಸಿದ್ದಾರೆ. ಅವರಿಗೆ ನಾನು ಸ್ವಾಗತ ಕೋರುತ್ತೇನೆ ಎಂದು ಮಾತು ಆರಂಭಿಸಿದ ಅವರು, ಶಿವಮೊಗ್ಗದಲ್ಲಿ ನಮ್ಮ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಿ, ಶಿವಮೊಗ್ಗ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ನೆರೆದಿದ್ದ ಕಾರ್ಯಕರ್ತರ ಬಳಿ ಕೇಳಿ ಕೊಂಡರು.

ಇನ್ನು ರಾಜ್ಯದಲ್ಲಿ ಎಲ್ಲಿಹೋದರು ಮೋದಿ ಮೋದಿ ಎಂಬ ಅಲೆ ಇದ್ದೇ ಇದ್ದೇ. ಅದಕ್ಕೆ ಕಾರಣ 4 ವರ್ಷದಲ್ಲಿ ಪ್ರಧಾನಿ ಮೋದಿ ಅವರ ಆಡಳಿತ. ರಾಜ್ಯದಲ್ಲಿಯೂ ಅವರ ಮಾರ್ಗದರ್ಶನದ ಸರ್ಕಾರವನ್ನು ಆಡಳಿತಕ್ಕೆ ತಂದು, ಬಸವಣ್ಣನವರ ಆದರ್ಶ ರಾಜ್ಯ ನಿರ್ಮಾಣ ಮಾಡಲು ನೀವು ನನಗೆ ಅವಕಾಶ ಮಾಡಿ ಕೊಡಬೇಕು ಎಂದು ಕೋರಿಕೊಂಡರು.

Please follow and like us:
0
http://bp9news.com/wp-content/uploads/2018/05/Eshwarappa-Yeddyurappa.jpghttp://bp9news.com/wp-content/uploads/2018/05/Eshwarappa-Yeddyurappa-150x150.jpgPolitical Bureauಪ್ರಮುಖರಾಜಕೀಯಶಿವಮೊಗ್ಗEshwarappa Yeddyurappa jugal in Shimoga !!!ಬೆಂಗಳೂರು : ಮೋದಿ ಏಕತಾಯಾತ್ರೆ ಮೂಲಕ ಇಡೀ ರಾಷ್ಟ್ರವನ್ನು ಗೆದ್ದು ಕರ್ನಾಟಕಕ್ಕೆ ಬಂದು ನಿಂತಿರುವ ಪ್ರಧಾನಿ ಮೋದಿಯವರಿಗೆ ಶಿವಮೊಗ್ಗ ಜನರ ಪರವಾಗಿ ಮತ್ತು ವೈಯಕ್ತಿಕವಾಗಿ ಆತ್ಮೀಯ ಸ್ವಾಗತ ಕೋರಿದ ಈಶ್ವರಪ್ಪ, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಆರಂಭಿಸಿದರು. ಪಿಎಂ ಮೋದಿ ಸರ್ಕಾರ ಶಿವಮೊಗ್ಗ ನಗರವನ್ನು ಸ್ಮಾರ್ಟ್ ಸಿಟಿ ಮಾಡಲು ಆಯ್ಕೆ ಮಾಡಿದೆ. ಆದರೆ ಸಿಎಂ ಸಿದ್ದರಾಮಯ್ಯನವರು ಆ ಹಣವನ್ನು ಉಪಯೋಗ ಮಾಡಲು ಬಿಟ್ಟಿಲ್ಲ. ಅದಕ್ಕಾಗಿ ಸಂಬಂಧ ಪಟ್ಟ ಅಧಿಕಾರಿಗಳನ್ನೂ ಸಹ ನೇಮಿಸಲಿಲ್ಲ...Kannada News Portal