ಸಿನಿಟಾಕ್​ :  ಬಾಲಿವುಡ್​ನ ಬಹು ಬೇಡಿಕೆ ನಟಿ ದೀಪಿಕಾ ಪಡುಕೋಣೆ ಮತ್ತು ರಣಬೀರ್​ ಕಪೂರ್​ ಮದುವೆ ಸುದ್ದಿಯಾಗುತ್ತಲೇ ಇದೆ. ಮ್ಯಾರೇಜ್​ ಡೇಟ್​ ಫಿಕ್ಸಿಂಗ್​ನಲ್ಲಿ ಇಂದು-ಮುಂದೋಗುತ್ತಲೇ ಇರುವ ಸುದ್ದಿ  ಯಾಗುತ್ತಲೇ ಇದೆ. ಆದರೆ ಈ ಬಾರಿ ಕ್ಯಾನೆ ಉತ್ಸವದಲ್ಲಿ ಎಲ್ಲರ ಕಣ್ಣು ಡಿಪ್ಪಿ ಕುತ್ತಿಗೆ   ಮೇಲೆ ಹೋಗಿದ್ಯಾಕೆ…?

 ಅಂದಹಾಗೇ ದೀಪಿಕಾ ಪಡುಕೋಣೆ , ತನ್ನ ಪ್ರಿಯತಮ ರಣಬೀರ್​ ಕಪೂರ್​  ಪ್ರೀತಿಯ ನೆನಪಿಗಾಗಿ  ಆರ್​ಕೆ ಎಂದು ಟ್ಯಾಟು ಹಾಕಿಸಿಕೊಂಡಿದ್ದಾರೆ. ಸಾಕಷ್ಟು ಬಾರಿ  ಆರ್​ಕೆ ಬಗ್ಗೆ ಹೋದಲೆಲ್ಲಾ ಎಕ್ಷ್​ಪ್ಲೈನ್​ ಮಾಡಿದ್ರು. ಆದರೆ ಕೆಲ ಕಾರ್ಯಕ್ರಮಗಳಲ್ಲಿ ಅವರ ಕುತ್ತಿಗೆ ಮೇಲೆ ಆ ಟ್ಯಾಟು ಮಾಯವಾಗಿತ್ತು. ಆಗ ಅಭಿಮಾನಿಗಳು ದೀಪಿಕಾ ಪಡುಕೋಣೆ ಮತ್ತು ರಣಬೀರ್​ ಕಪೂರ್​ ಸಂಬಂಧದಲ್ಲಿ ಬಿರುಕು ಬಿಟ್ಟಿದೆ ಎಂಬ ಅನುಮಾನಗಳು ಮೂಡಿದ್ದವು. ಮತ್ತೆ ಕೆಲವು ಕಡೆ ಅವರು ಮದುವೆಯ ಬಗ್ಗೆ ಕನ್ಫರ್ಮ್​ ಇಲ್ಲ ಎಂಬ ಗಾಸಿಪ್​ಗಳು ಹರಿದಾಡಿದವು. ಆದರೆ ದೀಪಿಕಾ ಮಾತ್ರ ಇವುಗಳನ್ನು ಹೆಚ್ಚು ಬೆಳೆಯುವುದಕ್ಕೆ ಬಿಡದೇ ಮತ್ತೆ ಟ್ಯಾಟೂ ಹಾಕಿಸಿಕೊಂಡು ನಾನು ರಣಬೀರ್​ ಒಂದಾಗಿಯೇ ಇದ್ದೇವೆ, ನಮ್ಮ ಸಂಬಂಧದಲ್ಲಿ ಯಾವುದೇ ಅಂತರವಿಲ್ಲ ಎಂದು  ಸಾಬೀತು ಪಡಿಸಿದ್ದರು.

 ಆದರೆ ಇಗ ಮತ್ತೊಮ್ಮೆ ದೀಪಿಕಾ ಕುತ್ತಿಗೆ ಮೇಲೆ ಆರ್​ಕೆ  ಟ್ಯಾಟೂ ಕಾಣಿಸುತ್ತಿಲ್ಲ. ಅದು  ಫ್ರಾನ್ಸ್​ನಲ್ಲಿ ನಡೆಯುತ್ತಿರುವ  ಕ್ಯಾನೆ ಉತ್ಸವದಲ್ಲಿ ದೀಪಿಕಾ ಕುತ್ತಿಗೆ   ಮೇಲೆ ಟ್ಯಾಟೂ ಕಾಣಿಸುತ್ತಿಲ್ಲ. ಅದರಿಂದ ಅಭಿಮಾನಿಗಳಿಗೆ ಮತ್ತಷ್ಟು ಅನುಮಾನ ಬಂದಿದೆ. ಆದರೆ ಕೆಲವರು ಹೇಳುವ ಪ್ರಕಾರ ಕಾರ್ಯಕ್ರಮಗಳಲ್ಲಿ ಟ್ಯಾಟೂ ರಿಮೂವ್​ ಮಾಡಬೇಕಾಗುತ್ತೆ, ಇದು ಹೊಸದೇನಲ್ಲಾ ಸಾಕಷ್ಟು ಬಾರಿ ದೀಪಿಕಾ ಟ್ಯಾಟು ರಿಮೂವ್​ ಮಾಡಿಸಿದ್ದರು. ರಣವೀರ್​ ಮತ್ತುಡಿಪ್ಪಿ ಸಂಬಂಧದಲ್ಲಿ ಬಿರುಕು ಮೂಡಿಲ್ಲ ಎನ್ನುತ್ತಿವೆ.

 ಮೊನ್ನೆಯಷ್ಟೇ ನಡೆದ ಸೋನಂ ಕಪೂರ್​ ಮದುವೆಯಲ್ಲಿ  ರಣವೀರ್​ ತನ್ನ ಸಂಗಾತಿ  ದೀಪಿಕಾ ಬರದೇ ಇದ್ದದಕ್ಕೆ  ತುಂಬಾ ಮಿಸ್​ ಮಾಡಿಕೊಂಡಿದ್ದರು.  ಏಕಾಂಗಿಯಾಗಿ ಮದುವೆ ಮನೆಯಲ್ಲಿ ಕೂತಿದ್ದ ರಣವೀರ್​ ಕಪೂರ್​  ಫೋಟೋಗಳು ವೈರಲ್​ ಆಗಿದ್ದವು.

 

Please follow and like us:
0
http://bp9news.com/wp-content/uploads/2018/05/deepika.jpghttp://bp9news.com/wp-content/uploads/2018/05/deepika-150x150.jpgBP9 Bureauಸಿನಿಮಾ ಸಿನಿಟಾಕ್​ :  ಬಾಲಿವುಡ್​ನ ಬಹು ಬೇಡಿಕೆ ನಟಿ ದೀಪಿಕಾ ಪಡುಕೋಣೆ ಮತ್ತು ರಣಬೀರ್​ ಕಪೂರ್​ ಮದುವೆ ಸುದ್ದಿಯಾಗುತ್ತಲೇ ಇದೆ. ಮ್ಯಾರೇಜ್​ ಡೇಟ್​ ಫಿಕ್ಸಿಂಗ್​ನಲ್ಲಿ ಇಂದು-ಮುಂದೋಗುತ್ತಲೇ ಇರುವ ಸುದ್ದಿ  ಯಾಗುತ್ತಲೇ ಇದೆ. ಆದರೆ ಈ ಬಾರಿ ಕ್ಯಾನೆ ಉತ್ಸವದಲ್ಲಿ ಎಲ್ಲರ ಕಣ್ಣು ಡಿಪ್ಪಿ ಕುತ್ತಿಗೆ   ಮೇಲೆ ಹೋಗಿದ್ಯಾಕೆ...?  ಅಂದಹಾಗೇ ದೀಪಿಕಾ ಪಡುಕೋಣೆ , ತನ್ನ ಪ್ರಿಯತಮ ರಣಬೀರ್​ ಕಪೂರ್​  ಪ್ರೀತಿಯ ನೆನಪಿಗಾಗಿ  ಆರ್​ಕೆ ಎಂದು ಟ್ಯಾಟು ಹಾಕಿಸಿಕೊಂಡಿದ್ದಾರೆ. ಸಾಕಷ್ಟು ಬಾರಿ  ಆರ್​ಕೆ...Kannada News Portal