ಬೆಂಗಳೂರು: ಕೊಪ್ಪಳದ ಕಾಂಗ್ರೆಸ್ನಲ್ಲಿ ಭಾರಿ ಭಿನ್ನಮತ ಸ್ಫೋಟವಾಗಿದೆ. ಈ ಹಿನ್ನಲೆಯಲ್ಲಿ ಮಾಜಿ ಎಂಎಲ್ಸಿ ಎಚ್.ಆರ್ ಶ್ರೀನಾಥ್, ಕಾಂಗ್ರೆಸ್ ಅಧ್ಯಕ್ಷರಾದ ಡಾ. ಪರಮೇಶ್ವರ್ ಅವರಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಏಕೆಂದರೆ ಇಂದು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಇಕ್ಬಾಲ್ ಅನ್ಸಾರಿ ನಮ್ಮವರು, ನಮ್ಮ ಜೊತೆಯಲ್ಲಿಯೇ ಇದ್ದಾರೆ. ಈ ಬಾರಿ ಕೊಪ್ಪಳದಲ್ಲಿ ಟಿಕೆಟ್ ಅವರಿಗೇ ನೀಡಲಾಗುತ್ತದೆ ಅವರಿಗೆ ಆಶಿರ್ವಾದ ಮಾಡಿ ಎಂದಿದ್ದಾರೆ.

ಈ ಹೇಳಿಕೆಯನ್ನು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಇತ್ತ ಮಾಜಿ ಎಂಎಲ್ಸಿ ಎಚ್.ಆರ್ ಶ್ರೀನಾಥ್ ಆಕ್ರೋಶ ವ್ಯಕ್ತ ಪಡಿಸಿದ್ದು, ಡಾ. ಪರಮೇಶ್ವರ್ ಅವರಿಗೆ ತಾವು ಕಾಂಗ್ರೆಸ್ ತೊರೆಯುತ್ತಿರುವುದಾಗಿ ರಾಜಿನಾಮೆ ಪತ್ರ ಕಳುಹಿಸಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರ ರಕ್ತ ಮೂಲ ಕಾಂಗ್ರೆಸಿಗರ ರಕ್ತವಲ್ಲ. ಅವರು ವಲಸಿಗರು. ನಾಲ್ಕು ವರ್ಷಗಳಿಂದ ಮೂಲ ಕಾಂಗ್ರೆಸಿಗರ ಮೇಲೆ ಸಿದ್ದರಾಮಯ್ಯ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಹಿಟ್ಲರ್ನಂತೆ ನಡೆದು ಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಅನ್ನು ಸಿದ್ದರಾಮಯ್ಯ ಹೈಜಾಕ್ ಮಾಡಿದ್ದಾರೆ. ಇದೀಗ ಕಾಂಗ್ರೆಸ್ ಐ ಇಲ್ಲ, ಎಸ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೊತೆಗೆ ನಾನು 3 ಜಿಲ್ಲೆಗಳಲ್ಲಿ ಕಂಡಿತಾ ಕಾಂಗ್ರೆಸ್ಗೆ ಈ ಬಾರಿ ಡ್ಯಾಮೆಜ್ ಮಾಡೇ ಮಾಡುತ್ತೇನೆ ಎಂದು ಸಿಎಂ ಅನ್ಸಾರಿಯವರಿಗೆ ಟಿಕೆಟ್ ನೀಡಿರುವ ಹಿನ್ನಲೆಯಲ್ಲಿ ಸವಾಲು ಎಸೆದಿದ್ದಾರೆ. ಒಟ್ಟಾರೆ ಕೊಪ್ಪಳದಲ್ಲಿ ಕಾಂಗ್ರೆಸ್ ಒಳಗೆ ದೊಡ್ಡ ಭಿನ್ನಮತ ಉಂಟಾಗಿದ್ದು, ಇದನ್ನು ಸಿಎಂ ಯಾವ ರೀತಿ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Please follow and like us:
0
http://bp9news.com/wp-content/uploads/2017/12/iqbal-1.jpghttp://bp9news.com/wp-content/uploads/2017/12/iqbal-1-150x150.jpgPolitical Bureauಕೊಪ್ಪಳಪ್ರಮುಖರಾಜಕೀಯಬೆಂಗಳೂರು: ಕೊಪ್ಪಳದ ಕಾಂಗ್ರೆಸ್ನಲ್ಲಿ ಭಾರಿ ಭಿನ್ನಮತ ಸ್ಫೋಟವಾಗಿದೆ. ಈ ಹಿನ್ನಲೆಯಲ್ಲಿ ಮಾಜಿ ಎಂಎಲ್ಸಿ ಎಚ್.ಆರ್ ಶ್ರೀನಾಥ್, ಕಾಂಗ್ರೆಸ್ ಅಧ್ಯಕ್ಷರಾದ ಡಾ. ಪರಮೇಶ್ವರ್ ಅವರಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಏಕೆಂದರೆ ಇಂದು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಇಕ್ಬಾಲ್ ಅನ್ಸಾರಿ ನಮ್ಮವರು, ನಮ್ಮ ಜೊತೆಯಲ್ಲಿಯೇ ಇದ್ದಾರೆ. ಈ ಬಾರಿ ಕೊಪ್ಪಳದಲ್ಲಿ ಟಿಕೆಟ್ ಅವರಿಗೇ ನೀಡಲಾಗುತ್ತದೆ ಅವರಿಗೆ ಆಶಿರ್ವಾದ ಮಾಡಿ ಎಂದಿದ್ದಾರೆ. ಈ ಹೇಳಿಕೆಯನ್ನು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಇತ್ತ ಮಾಜಿ ಎಂಎಲ್ಸಿ ಎಚ್.ಆರ್ ಶ್ರೀನಾಥ್...Kannada News Portal