ಬೆಂಗಳೂರು : ಆರ್​ ಆರ್ ನಗರ ​ ಕ್ಷೇತ್ರದ  ಶಾಸಕ ಮುನಿರತ್ನಗೆ ಜಾಮೀನು ಸಿಕ್ಕಿದೆ. ರಾಜರಾಜೇಶ್ವರಿಯ ಜಾಲಹಳ್ಳಿ ಅಪಾರ್ಟ್​ಮೆಂಟ್​ನಲ್ಲಿ ಸಿಕ್ಕ ನಕಲಿ ವೋಟರ್​ ಐಡಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಾಂಗ್ರೆಸ್​ ನಾಯಕ ಮುನಿರತ್ನಗೆ ಇದೀಗ ಜಾಮೀನು ಸಿಕ್ಕಿದೆ.

 ನಗರದ  ಏಳನೇ ಎಸಿಎಂಎಂ ಕೋರ್ಟ್​ಗೆ ಮುನಿರತ್ನ ಖುದ್ದು  ಜಾಮೀನಿಗಾಗಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ  ಅರ್ಜಿಯನ್ನು ಪರಿಶೀಲಿಸಿದ  ನ್ಯಾಯಧೀಶರು ಜಾಮೀನು ನೀಡಿದ್ದಾರೆ.

  ಪೊಲೀಸ್​ ಠಾಣೆಯಲ್ಲಿ  ಎಫ್​ಐಆರ್​ ದಾಖಲಾಗಿದ್ದ ಈ ಪ್ರಕರಣದಲ್ಲಿ  ನ್ಯಾಯಧೀಶ  ಎಲ್​ ಆರ್​ .ಕುರಣೆ  ಪ್ರಕರಣವನ್ನು ಆಲಿಸಿ, ಬೇಲೆಬಲ್​ ಇನ್​ ನೇಚರ್​ ಆಗಿದೆ ಎಂದು ಹೇಳಿದ್ದಾರೆ. ಅಲ್ಲದೇ ವೈಯಕ್ತಿಕವಾಗಿ  5000 ಪರ್ಸ್​ನಲ್​ ಬಾಂಡ್​ ಮತ್ತು 3000 ಕ್ಯಾಶ್​ ಶೂರಿಟಿ ಪಡೆದು ಆರೋಪಿಗಳಿಗೆ ಜಾಮೀನು  ನೀಡಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಪೊಣ್ಣಯಮ್ಮ ಮತ್ತು  ಮುನಿರತ್ನಗೆ  ಜಾಮೀನು  ನೀಡಿದ್ದಾರೆ. ಇನ್ನು ಆರೋಪಿಗಳ ವಿರುದ್ಧ ಸೆಕ್ಷನ್​ 125, ಸೇರಿದಂತೆ 123, 127a, 135, 171E , 171F,120b ಅಡಿಯಲ್ಲಿ ಕೇಸ್​ ದಾಖಲಾಗಿದ್ದು ತನಿಖೆ ಮುಂದುವರೆದಿದೆ. ಈ ಪ್ರಕರಣ ಸಂಬಂಧ ಆರ್​ ಆರ್​ ಕ್ಷೇತ್ರದಲ್ಲಿ ವಿಧಾನ ಸಭೆ ಚುನಾವಣೆ ಮುಂದೂಡಲಾಗಿದೆ.

Please follow and like us:
0
http://bp9news.com/wp-content/uploads/2018/05/Capture-6.jpghttp://bp9news.com/wp-content/uploads/2018/05/Capture-6-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು : ಆರ್​ ಆರ್ ನಗರ ​ ಕ್ಷೇತ್ರದ  ಶಾಸಕ ಮುನಿರತ್ನಗೆ ಜಾಮೀನು ಸಿಕ್ಕಿದೆ. ರಾಜರಾಜೇಶ್ವರಿಯ ಜಾಲಹಳ್ಳಿ ಅಪಾರ್ಟ್​ಮೆಂಟ್​ನಲ್ಲಿ ಸಿಕ್ಕ ನಕಲಿ ವೋಟರ್​ ಐಡಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಾಂಗ್ರೆಸ್​ ನಾಯಕ ಮುನಿರತ್ನಗೆ ಇದೀಗ ಜಾಮೀನು ಸಿಕ್ಕಿದೆ.  ನಗರದ  ಏಳನೇ ಎಸಿಎಂಎಂ ಕೋರ್ಟ್​ಗೆ ಮುನಿರತ್ನ ಖುದ್ದು  ಜಾಮೀನಿಗಾಗಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ  ಅರ್ಜಿಯನ್ನು ಪರಿಶೀಲಿಸಿದ  ನ್ಯಾಯಧೀಶರು ಜಾಮೀನು ನೀಡಿದ್ದಾರೆ.   ಪೊಲೀಸ್​ ಠಾಣೆಯಲ್ಲಿ  ಎಫ್​ಐಆರ್​ ದಾಖಲಾಗಿದ್ದ ಈ ಪ್ರಕರಣದಲ್ಲಿ  ನ್ಯಾಯಧೀಶ  ಎಲ್​ ಆರ್​ .ಕುರಣೆ ...Kannada News Portal