ಚಿಕ್ಭಕಮಗಳೂರು : ದ್ರಾ ಮೇಲ್ದಂಡೆ ಸುರಂಗ ಮಾರ್ಗದಿಂದ ಅನ್ಯಾಯಕ್ಕೆ ಒಳಗಾದ 18 ಕೆರೆಗಳ ವ್ಯಾಪ್ತಿಗೆ ಒಳಪಟ್ಟಿರುವ ಗ್ರಾಮಗಳ ರೈತರು, ಕೆರೆಗಳಿಗೆ ನೀರು ತುಂಬಿಸುವ  ಬಗ್ಗೆ  ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಹೀಗಾಗಲೇ ಸುರಂಗ ಮಾರ್ಗದಿಂದ ಅಂತರ್ಜಲ ಬಸಿದು ಹೋಗಿ ತೊಂದರೆಯಾಗುತ್ತದೆ ಎಂದೇ ಕೆರೆಗಳಿಗೆ ಪೈಪ್​ ಲೈನ್​ ಕಾಮಗಾರಿ ಮಾಡಿಸಲಾಗಿದ್ದರೂ ನಮಗೆ ಕುಡಿಯುವ ನೀರಿನ ಅಭಾವ ಹೆಚ್ಚಿನದಾಗಿ ತಲೆದೋರಿದೆ. ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗಿವೆ.  ನಮ್ಮ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೇ ದನ-ಕರುಗಳು ಬಾಯಿಬಿಡುವಂತಾಗಿದೆ. ಅಡಿಕೆ , ತೆಂಗು ಬಾಳೆ, ನಂಬಿಕೊಂಡು ಬಂದಿರುವ ಆ ಭಾಗದ ರೈತರು  ನೀರಿಲ್ಲದೇ ದಿಕ್ಕೇ ತೋಚದಂತೆ ಹತಾಶರಾಗಿದ್ದಾರೆ.

ಈ ಹಿಂದೆ ನೀರಿಗಾಗಿ ನಮ್ಮ ಹೋರಾಟ ನಡೆದಿದ್ದರೂ ನೀರು ಕೊಡುವುದಾಗಿ, ಕೆರೆ ಕಟ್ಟೆಗಳಿಗೆನೀರು ತುಂಬಿಸುವುದಾಗಿ, ಆಶ್ವಾಸನೆ ನೀಡಿದ್ದರೂ ಇಲ್ಲಿಯವರೆಗೂ ಯಾವೊಂದು ಪ್ರಸ್ತಾವನೆಯೂ ನಡೆದಿಲ್ಲ. ಆಗಾಗಿಯೇ ಹೊರಾಟ ಅನಿವಾರ್ಯವಾಗಿದೆ. ಸರ್ಕಾರ ಭರವಸೆ ನೀಡಿ ಸುಮ್ಮನಾಯಿತು. ಈಗ ನಾವೆಲ್ಲರೂ ಒಗ್ಗೂಡಿ ನೀರಿಗಾಗಿ ಹೋರಾಟ ಮಾಡಲೇಬೇಕು, ನಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಇಂದು ಆರಂಭವಾದ ನೀರಿಗಾಗಿ ಹೋರಾಟ ಇನ್ನೂ ನಾಲ್ಕು ದಿನಗಳ ಕಾಲ ಅಹೋರಾತ್ರಿ ನಡೆಸಲಾಗುವುದು ಎಂದು ಪ್ರತಿಭಟನಾ ನಿರತ ರೈತ ಮುಖಂಡರು ತಿಳಿಸಿದರು.

ವರದಿ : ಅವಿನಾಶ್​ ಕೆ.ಎಂ( ಕೋರನಹಳ್ಳಿ)

Please follow and like us:
0
http://bp9news.com/wp-content/uploads/2018/02/BP9-News-Web-Portal-1-1024x576.jpeghttp://bp9news.com/wp-content/uploads/2018/02/BP9-News-Web-Portal-1-150x150.jpegBP9 Bureauಚಿಕ್ಕಮಗಳೂರು ಚಿಕ್ಭಕಮಗಳೂರು : ದ್ರಾ ಮೇಲ್ದಂಡೆ ಸುರಂಗ ಮಾರ್ಗದಿಂದ ಅನ್ಯಾಯಕ್ಕೆ ಒಳಗಾದ 18 ಕೆರೆಗಳ ವ್ಯಾಪ್ತಿಗೆ ಒಳಪಟ್ಟಿರುವ ಗ್ರಾಮಗಳ ರೈತರು, ಕೆರೆಗಳಿಗೆ ನೀರು ತುಂಬಿಸುವ  ಬಗ್ಗೆ  ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಲೇ ಸುರಂಗ ಮಾರ್ಗದಿಂದ ಅಂತರ್ಜಲ ಬಸಿದು ಹೋಗಿ ತೊಂದರೆಯಾಗುತ್ತದೆ ಎಂದೇ ಕೆರೆಗಳಿಗೆ ಪೈಪ್​ ಲೈನ್​ ಕಾಮಗಾರಿ ಮಾಡಿಸಲಾಗಿದ್ದರೂ ನಮಗೆ ಕುಡಿಯುವ ನೀರಿನ ಅಭಾವ ಹೆಚ್ಚಿನದಾಗಿ ತಲೆದೋರಿದೆ. ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗಿವೆ.  ನಮ್ಮ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೇ ದನ-ಕರುಗಳು ಬಾಯಿಬಿಡುವಂತಾಗಿದೆ....Kannada News Portal