ಬೆಂಗಳೂರು : ಖಾಸಗೀ ಜಮೀನಿನಲ್ಲಿ ವಿದ್ಯತ್ ತಂತಿ ತಗುಲಿ ತಂದೆ ಮಗ ಸಾವನ್ನಪ್ಪಿರುವ ಘಟನೆ ಮೈಸೂರಿನ ಹೆಚ್ ಡಿ ಕೋಟೆ ಸಮೀಪದ ಆನಗಟ್ಟಿ ಹಾಡಿಯ ಬಳಿ ಸಂಭವಿಸಿದೆ. ಮೃತ ಪಟ್ಟವರನ್ನು ಇದೇ ಹಾಡಿಯ ಮಾದ (48) ಪ್ರವೀಣ್ (21) ಎಂದು ಗುರುತಿಸಲಾಗಿದೆ.

ಇವರಿಬ್ಬರು ಜಮೀನಿನ ಕೆಲಸಕ್ಕಾಗಿ ತೆರಳಿದ್ದಾಗ, ಅದೇ ಜಮೀನಿನ ಪಕ್ಕದಲ್ಲಿ ಹಸಿರಿನ ಮಧ್ಯೆ ಕಾಣದೆ ಬಿದ್ದಿದ್ದ ವಿದ್ಯತ್ ತಂತಿಯ ಮೇಲೆ ಕಾಳಿಟ್ಟ ಪರಿಣಾಮ ವಿದ್ಯತ್ ಸ್ಪರ್ಷವಾಗಿದೆ. ಕೂಡಲೆ ಒಬ್ಬರನ್ನು ಉಳಿಸಲು ಮತ್ತೊಬ್ಬರು ಪ್ರಯತ್ನಿಸಿದಾಗ ವಿದ್ಯತ್ ಇಬ್ಬರನ್ನು ಸೆಳೆದು ಕೊಂಡಿದೆ.

ಈ ಹಿನ್ನಲೆಯಲ್ಲಿ ಇಬ್ಬರಿಗೂ ತೀವ್ರ ಸುಟ್ಟಗಾಯಗಳಾಗಿದ್ದು, ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
0
http://bp9news.com/wp-content/uploads/2018/06/pic-8.jpghttp://bp9news.com/wp-content/uploads/2018/06/pic-8-150x150.jpgPolitical Bureauಪ್ರಮುಖಮೈಸೂರುFather's son's death to save one another The incident occurred in HD Castleಬೆಂಗಳೂರು : ಖಾಸಗೀ ಜಮೀನಿನಲ್ಲಿ ವಿದ್ಯತ್ ತಂತಿ ತಗುಲಿ ತಂದೆ ಮಗ ಸಾವನ್ನಪ್ಪಿರುವ ಘಟನೆ ಮೈಸೂರಿನ ಹೆಚ್ ಡಿ ಕೋಟೆ ಸಮೀಪದ ಆನಗಟ್ಟಿ ಹಾಡಿಯ ಬಳಿ ಸಂಭವಿಸಿದೆ. ಮೃತ ಪಟ್ಟವರನ್ನು ಇದೇ ಹಾಡಿಯ ಮಾದ (48) ಪ್ರವೀಣ್ (21) ಎಂದು ಗುರುತಿಸಲಾಗಿದೆ. ಇವರಿಬ್ಬರು ಜಮೀನಿನ ಕೆಲಸಕ್ಕಾಗಿ ತೆರಳಿದ್ದಾಗ, ಅದೇ ಜಮೀನಿನ ಪಕ್ಕದಲ್ಲಿ ಹಸಿರಿನ ಮಧ್ಯೆ ಕಾಣದೆ ಬಿದ್ದಿದ್ದ ವಿದ್ಯತ್ ತಂತಿಯ ಮೇಲೆ ಕಾಳಿಟ್ಟ ಪರಿಣಾಮ ವಿದ್ಯತ್ ಸ್ಪರ್ಷವಾಗಿದೆ. ಕೂಡಲೆ ಒಬ್ಬರನ್ನು...Kannada News Portal