ಅಂದಹಾಗೇ ಫಟ್​ ಫಟ್​ ಅಂತಾ ಹರುಳು  ಉರಿಯೋ ಹಾಗೇ ನ್ಯೂಸ್​ ಚಾನೆಲ್​ನಲ್ಲಿ ಮಾತನಾಡ್ತಿದ್ದ ಶೀತಲ್​ ಶೆಟ್ಟಿ, ಸಿನಿಮಾಗೆ ಪ್ರವೇಶ ಮಾಡಿದ್ದು ಹಳೆಯ ವಿಚಾರ. ಆದರೆ ಇತ್ತೀಚೆಗೆ ಪೂರ್ಣ ಪ್ರಮಾಣದಲ್ಲಿ ತಾವೇ ನಾಯಕಿಯಾಗಿ ನಟಿಸಿರುವ ”ಪತಿ ಬೇಕು. ಕಾಂ”ಮೂಲಕ  ಎಲ್ಲರಿಂದಲೂ ಮೆಚ್ಚುಗೆಗಳಿಸಿಕೊಂಡಿದ್ದಾರೆ.

ಶೀತಲ್​ ಶೆಟ್ಟಿಯ ಹೊಸ ಸಿನಿಮಾ ಪತಿ ಬೇಕು.ಕಾಂ ಟ್ರೈಲರ್​ಗೆ ಅಭಿಮಾನಿಗಳಿಂದ ಒಳ್ಳೆ ರೆಸ್ಪಾನ್ಸ್​ ಸಿಕ್ಕಿದೆ.  ಟ್ರೈಲರ್​ನಲ್ಲಿ ಸಿನಿಮಾ ಮಸ್ತ್​ ಮಸಾಲ  ಕೊಟ್ಟಿದ್ದು ಭಾರೀ ನಿರೀಕ್ಷೆ ಮೂಡಿಸಿದೆ. ಸಿನಿಮಾದಲ್ಲಿನ ಡೈಲಾಗ್ಸ್​ಗೆ ಫಿದಾ ಆಗಿರುವ ಅಭಿಮಾನಿಗಳು ಕಾಮಿಡಿಯನ್ನು ಮೆಚ್ಚಿದ್ದಾರೆ. ಕ್ಲಾಸಿ ಲುಕ್​ನಲ್ಲಿ ಕಾಣಿಸಿಕೊಂಡಿರುವ ಶೀತಲ್​ ಸಿಕ್ಕಾಪಟ್ಟೆ ಇಷ್ಟವಾಗ್ತಾರೆ.

ಶೀತಲ್​ ಹೀರೋಯಿನ್​ ಆಗಿರುವ ಸಿನಿಮಾ ಪಕ್ಕಾ ಮಹಿಳಾ ಪ್ರಧಾನ ಚಿತ್ರವಾಗಿದೆ. ಸಿನಿಮಾದಲ್ಲಿನ ಶೀತಲ್​ ಡೈಲಾಗ್​ ಒಂದು ಸಿಕ್ಕಾಪಟ್ಟೆ ಟಾಕ್​ ಆಗಿದ್ದು ಡಬ್​ಸ್ಮ್ಯಾಷ್​ ರೂಪದಲ್ಲಿ ಎಲ್ಲೆಡೆ ವೈರಲ್​ ಆಗಿದೆ. ಊರೋರಿಗೆಲ್ಲ ಹೆದರ್ಕೊಂಡು ಇಬ್ರು ರೂಮೊಳಗೆ ಸೇರ್ಕೊಂಡ್ರೆ ಲವ್ ಮ್ಯಾರೇಜ್. ಊರೋರೆಲ್ಲ ಸೇರಿ ಇಬ್ರನ್ನ ರೂಮೊಳಗೆ ಬಿಟ್ರೆ ಅದು ಅರೇಂಜ್ಡ್ ಮ್ಯಾರೇಜ್’…….. ಚಿತ್ರದಲ್ಲಿನ ಡೈಲಾಗಂತೂ ಭಾರೀ ಬೇಡಿಕೆ ಸೃಷ್ಟಿಯಾಗಿದೆ.


ಮತ್ತು ಸಿನಿಮಾದಲ್ಲಿನ ಯಾಯಪ್ಪಾ ದ್ಯಾವರೇ, ಆಡಿಸ್ತೀ ಕ್ಯಾಬರೇ..ಅಷ್ಟು ಇಷ್ನಾ ನಾವ್​ ಹೆಣ್ಮಕ್ಳು ನೊಂದರೆ ಎನ್ನುವ  ಹಾಡೊಂದಿನ ಸಾಲುಡಿನ ಹಾಡು ಜನರಿಗಿಷ್ಟವಾಗಿದೆ. ಈಗಾಗಲೇ ಟ್ರೈಲರ್​ ಯೂಟ್ಯೂಬ್​ನ್ಲಲೆ ಟ್ರೆಂಡ್​ ಕ್ರಿಯೇಟ್​ ಮಾಡಿದೆ.

ರಾಕೇಶ್ ನಿರ್ದೇಶನದ ಪತಿಬೇಕು ಡಾಟ್ ಕಾಮ್ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಅದನ್ನು ಜನ ಮೆಚ್ಚಿಕೊಂಡಿದ್ದೂ ಆಗಿದೆ. ಇದರಲ್ಲಿ ಶೀತಲ್ ಶೆಟ್ಟಿ ಹೇಳಿರೋ ಬಿಂದಾಸ್ ಡೈಲಾಗೊಂದೀಗ ಹುಡುಗೀರಿಗೆಲ್ಲ ಹುಚ್ಚು ಹಿಡಿಸಿಬಿಟ್ಟಿದೆ. ಡಬ್ ಸ್ಮ್ಯಾಶ್ ರೂಪದಲ್ಲಿ ಈ ಡೈಲಾಗು ಎಲ್ಲೆಡೆ ಹರಡಿಕೊಂಡು ಪತಿಬೇಕು ಡಾಟ್ ಕಾಮ್ ಚಿತ್ರ ಮಿಂಚಲಾರಂಭಿಸಿದೆ.

‘ಊರೋರಿಗೆಲ್ಲ ಹೆದರ್ಕೊಂಡು ಇಬ್ರು ರೂಮೊಳಗೆ ಸೇರ್ಕೊಂಡ್ರೆ ಲವ್ ಮ್ಯಾರೇಜ್. ಊರೋರೆಲ್ಲ ಸೇರಿ ಇಬ್ರನ್ನ ರೂಮೊಳಗೆ ಬಿಟ್ರೆ ಅದು ಅರೇಂಜ್ಡ್ ಮ್ಯಾರೇಜ್’ ಎಂಬ ಡೈಲಾಗನ್ನು 1300ಕ್ಕೂ ಹೆಚ್ಚು ಹುಡುಗಿಯರು ಡಬ್ ಸ್ಮ್ಯಾಶ್ ಮಾಡಿ ಸಂಭ್ರಮಿಸಿದ್ದಾರೆ. ಡಬ್ ಸ್ಮ್ಯಾಶ್ ನಲ್ಲಿ ಪ್ರಸಿದ್ಧಿ ಪಡೆದುಕೊಂಡಿರೋ ಮ್ಯೂಸಿಕಲಿ ಸೇರಿದಂತೆ ನಾನಾ ಆಪ್ ಗಳಲ್ಲೀಗ ಪತಿಬೇಕು ಡಾಟ್ ಕಾಮ್ ಚಿತ್ರದ ಈ ಡೈಲಾಗೇ ರಿಂಗಣಿಸಲಾರಂಭಿಸಿದೆ!

ಶೀತಲ್ ಶೆಟ್ಟಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿರುವ ಈ ಚಿತ್ರದ ಟ್ರೇಲರಿಗೆ ಎಲ್ಲರೂ ಫಿದಾ ಆಗಿದ್ದಾರೆ. ಆದರೆ ಇದೊಂದೇ ಒಂದು ಮಜಾಕಾದ ಡೈಲಾಗಿನಿಂದ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಗುತ್ತಿರೋದರಿಂದ ಚಿತ್ರ ತಂಡ ಹ್ಯಾಪಿ ಮೂಡಿನಲ್ಲಿದೆ!

Please follow and like us:
0
http://bp9news.com/wp-content/uploads/2018/08/Pati-beku-.com-1-768x455.jpghttp://bp9news.com/wp-content/uploads/2018/08/Pati-beku-.com-1-768x455-150x150.jpgBP9 Bureauಸಿನಿಮಾಅಂದಹಾಗೇ ಫಟ್​ ಫಟ್​ ಅಂತಾ ಹರುಳು  ಉರಿಯೋ ಹಾಗೇ ನ್ಯೂಸ್​ ಚಾನೆಲ್​ನಲ್ಲಿ ಮಾತನಾಡ್ತಿದ್ದ ಶೀತಲ್​ ಶೆಟ್ಟಿ, ಸಿನಿಮಾಗೆ ಪ್ರವೇಶ ಮಾಡಿದ್ದು ಹಳೆಯ ವಿಚಾರ. ಆದರೆ ಇತ್ತೀಚೆಗೆ ಪೂರ್ಣ ಪ್ರಮಾಣದಲ್ಲಿ ತಾವೇ ನಾಯಕಿಯಾಗಿ ನಟಿಸಿರುವ ''ಪತಿ ಬೇಕು. ಕಾಂ''ಮೂಲಕ  ಎಲ್ಲರಿಂದಲೂ ಮೆಚ್ಚುಗೆಗಳಿಸಿಕೊಂಡಿದ್ದಾರೆ. ಶೀತಲ್​ ಶೆಟ್ಟಿಯ ಹೊಸ ಸಿನಿಮಾ ಪತಿ ಬೇಕು.ಕಾಂ ಟ್ರೈಲರ್​ಗೆ ಅಭಿಮಾನಿಗಳಿಂದ ಒಳ್ಳೆ ರೆಸ್ಪಾನ್ಸ್​ ಸಿಕ್ಕಿದೆ.  ಟ್ರೈಲರ್​ನಲ್ಲಿ ಸಿನಿಮಾ ಮಸ್ತ್​ ಮಸಾಲ  ಕೊಟ್ಟಿದ್ದು ಭಾರೀ ನಿರೀಕ್ಷೆ ಮೂಡಿಸಿದೆ. ಸಿನಿಮಾದಲ್ಲಿನ ಡೈಲಾಗ್ಸ್​ಗೆ...Kannada News Portal