ಬಾಲಿವುಡ್​ನಿಂದ ಹಾಲಿವುಡ್​ಗೆ ಹಾರಿದ್ದ ಪ್ರಿಯಾಂಕ ಚೋಪ್ರಾ ಒಂದಿಲ್ಲೊಂದು ಗಾಸಿಪ್​ಗೆ ಒಳಗಾಗುತ್ತಲೇ ಇದ್ದಾರೆ. ಸಾಕಷ್ಟು ಬಾರಿ ಸುದ್ದಿಯಾಗಿದ್ದ  ಪ್ರಿಯಾಂಕಗೆ  ಇದೀಗ ಮತ್ತೊಂದು ಪ್ರೇಮ ​ ಪ್ರಕರಣ  ಗಾಸಿಪ್​ಗೆ ಸುತ್ತಿ ಹಾಕಿಕೊಂಡಿದೆ. ಪಿಗ್ಗಿ, ಹಾಲಿವುಡ್​ ಗೆ ಹೋದ ಮೇಲೆ ಸಾಕಷ್ಟು ಸಮಯ ಗಾಯಕ ನಿಕ್​ ಜೋನಾಸ್​ ಜೊತೆ ಓಡಾಡುತ್ತಿದ್ದುದು ಸುದ್ದಿ ಹೆಚ್ಚು ಸದ್ದು ಮಾಡಿತ್ತು. ಇದೀಗ ಅವರಿಬ್ಬರ ಸಂಬಂಧಕ್ಕೆ  ಅದಕ್ಕೆ ಅಧಿಕೃತ  ಮುದ್ರೆ ಸಿಕ್ಕಂತಿದೆ.  ಈ ಹಿಂದೆ ಇಬ್ಬರು ಹೊರಗಡೆ ಸುತ್ತಾಡುವುದನ್ನು  ನೋಡಿದ ಜನ  ಬಾಲಿವುಡ್​ ಪಿಗ್ಗಿ  ಹಾಲಿವುಡ್​ ಗಾಯಕನ ಕೈ ಹಿಡಿಯುತ್ತಾಳೆ ಎಂಬ ಸುದ್ದಿ ಸಕತ್​​ ವೈರಲ್​ ಆಗಿದೆ. ಮೊದ – ಮೊದಲು ಕದ್ದುಮುಚ್ಚಿ ಮಾತಾಡುತ್ತಿದ್ದ , ಓಡಾಡುತ್ತಿದ್ದ ಜೋಡಿ ಇದೀಗ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇವರಿಬ್ಬರ ಸಬಂಧದ ಬಗ್ಗೆ ಪ್ರಿಯಾಂಕ ಆಗಲೀ ನಿಕ್​ ಜೋನಾಸ್​ ಅವರಾಗಲೀ ಯಾವುದೇ ರೀತಿಯ ವಿಚಾರ ಎತ್ತಿರಲಿಲ್ಲ. ಇದೀಗ  ನಿಕ್​ ಜೋನಾಸ್​ ಅವರ ಆಪ್ತರ ಮದುವೆಯಲ್ಲಿ  ಪ್ರಿಯಾಂಕ್​ ನಿಕ್​ ಅವರ ಕೈ ಹಿಡಿದು ಆದರ್ಶ ಜೋಡಿಯಂತೆ ಓಡಾಡುತ್ತಿದ್ದುದ್ದನ್ನು ನೋಡಿ ಇವರದ್ದು ಬರೀ ಫ್ರೆಂಡ್​ಶಿಪ್​ ಅಷ್ಟೇ ಅಲ್ಲ ಪ್ರೇಮವೂ ಇದೆ ಎಂಬುದನ್ನು ಕನ್ಫರ್ಮ್​ ಮಾಡಿಕೊಂಡಿದ್ದಾರೆ.

ಇನ್ನು ನಿಕ್​ ಮನೆಯವರ ಜೊತೆ ಪಿಗ್ಗಿ ಮಾತು-ಕತೆ ಮಾಡಿಕೊಂಡಿದ್ದಾರೆ ಎಂದು  ಅಧಿಕೃತ ಮೂಲಗಳು ತಿಳಿಸಿವೆ. ಈ ಹಿಂದೆ  ಫೇಸ್​ಬುಕ್​ನಲ್ಲಿ ಇಬ್ಬರು ಒಬ್ಬರಿಗೊಬ್ಬರು ಸಂದೇಶ ಕಳುಹಿಸುತ್ತಲೇ ಇರುತ್ತಾರೆ, ಯಾವಾಗಲೂ ಚಾಟಿಂಗ್​ನಲ್ಲಿ  ಇರುತ್ತಾರೆ ಎಂಬುದೇ ದೊಡ್ಡ ಸುದ್ದಿಯಾಗಿತ್ತು. ಅದರಲ್ಲಿಯೇ ನಿಕ್​  ಪ್ರಿಯಾಂಕಾಗೆ ಲವ್​ ಪ್ರಪೋಸ್​ ಮಾಡಿದ್ದಾರಂತೆ. ಆದರೆ ಪಿಗ್ಗಿ ಮಾತ್ರ  ಏನನ್ನೂ ಹೇಳಿರಲಿಲ್ವಂತೆ ಎಂಬುದು ಮಾತ್ರ ತಿಳಿದಿತ್ತು, ಇದೀಗ ಪಿಗ್ಗಿ ಇನ್​ಲವ್​ ಅನ್ನೋದು ಗೊತ್ತಾಗುತ್ತಿದೆ.

 

 

Please follow and like us:
0
http://bp9news.com/wp-content/uploads/2018/06/Priyanka-Chopra-Nick-Jonas-Met-Gala-5-1.jpghttp://bp9news.com/wp-content/uploads/2018/06/Priyanka-Chopra-Nick-Jonas-Met-Gala-5-1-150x150.jpgBP9 Bureauಸಿನಿಮಾಬಾಲಿವುಡ್​ನಿಂದ ಹಾಲಿವುಡ್​ಗೆ ಹಾರಿದ್ದ ಪ್ರಿಯಾಂಕ ಚೋಪ್ರಾ ಒಂದಿಲ್ಲೊಂದು ಗಾಸಿಪ್​ಗೆ ಒಳಗಾಗುತ್ತಲೇ ಇದ್ದಾರೆ. ಸಾಕಷ್ಟು ಬಾರಿ ಸುದ್ದಿಯಾಗಿದ್ದ  ಪ್ರಿಯಾಂಕಗೆ  ಇದೀಗ ಮತ್ತೊಂದು ಪ್ರೇಮ ​ ಪ್ರಕರಣ  ಗಾಸಿಪ್​ಗೆ ಸುತ್ತಿ ಹಾಕಿಕೊಂಡಿದೆ. ಪಿಗ್ಗಿ, ಹಾಲಿವುಡ್​ ಗೆ ಹೋದ ಮೇಲೆ ಸಾಕಷ್ಟು ಸಮಯ ಗಾಯಕ ನಿಕ್​ ಜೋನಾಸ್​ ಜೊತೆ ಓಡಾಡುತ್ತಿದ್ದುದು ಸುದ್ದಿ ಹೆಚ್ಚು ಸದ್ದು ಮಾಡಿತ್ತು. ಇದೀಗ ಅವರಿಬ್ಬರ ಸಂಬಂಧಕ್ಕೆ  ಅದಕ್ಕೆ ಅಧಿಕೃತ  ಮುದ್ರೆ ಸಿಕ್ಕಂತಿದೆ.  ಈ ಹಿಂದೆ ಇಬ್ಬರು ಹೊರಗಡೆ ಸುತ್ತಾಡುವುದನ್ನು  ನೋಡಿದ...Kannada News Portal