ಬಿ ಟೌನ್ ನಲ್ಲಿ ನಟ ಶಾರುಖ್ ಫ್ಯಾಮಿಲಿಯದ್ದೇ ಸೌಂಡು. ಮಗ, ಮಗಳು ಪತ್ನಿ ಹೀಗೆ ಶಾರುಖ್ ಹೊರತಾಗಿಯೂ ಮಾಧ್ಯಮದವರಿಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ನಾಯಕಿಯರಿಗಿಂತಲೂ ಸಕತ್ ಹೈಪ್ ಕ್ರಿಯೇಟ್ ಮಾಡಿದ್ದಾರೆ ಸುಹಾನಾ ಖಾನ್​.  ಶಾರುಖ್ ಪುತ್ರಿಯ ಸಸ್ಪೆನ್ಸ್ ವಿಚಾರವೊಂದು ಹೊರ ಬಿದ್ದಿದೆ. ಅಂತೂ-ಇಂತೂ ಅಧಿಕೃತವಾಗಿ ರಿವೀಲ್ಆ ಗಿರುವ  ಶಾರುಖ್ ಮಗಳ ನ್ಯೂ ಲೈಫ್ ಸ್ಟಾರ್ಟ್ ಆಗೋದನ್ನ ನೋಡೋಕೆ ಕಾತುರರಾಗಿದ್ದಾರಂತೆ ಕಿಂಗ್​ ಖಾನ್​.  ಹೀಗಾಗಲೇ ಸೆಲೆಬ್ರಿಟಿ ನಾಯಕಿಯರಿಗಿಂತಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಸುಹಾನಾ ಖಾನ್ ಯಾವ ಬಾಲಿವುಡ್ ನಾಯಕಿರಿಗೇನೂ ಕಡಿಮೆ ಇಲ್ಲ. ಹಾಟ್ ಫೋಟೋ ಶೂಟ್ ಮಾಡಿಸಿ ನಟೀಮಣಿಯರ ಕಣ್ಣು ಕುಕ್ಕಿಸಿದ ಸುಹಾನ್ ಖಾನ್ ಕಲರ್​ಫುಲ್​ ಲೋಕಕ್ಕೆ ಎಂಟ್ರಿಕೊಡೋದು ಅಫೀಶಿಯಲ್ ಆಗಿದ್ಯಂತೆ.

ಅಂದಹಾಗೇ ಬಾಲಿವುಡ್ ಸಿನಿಮಾ ರಂಗಕ್ಕೆ ತಮ್ಮ ಮಗಳನ್ನ ಪರಿಚಯಿಸ್ತೀರಾ..? ಆಕೆಗೆ ಹೀರೋಯಿನ್​ಗೆ ಇರಬೇಕಾದ ಎಲ್ಲಾ ಕ್ವಾಲೀಟೀಸ್ ಇದೆ. ಯಾವಾಗ ಬರುತ್ತಾರೆ. ಈಗಾಗಲೇ ಹೆಚ್ಚು ಫ್ಯಾನ್ಸ್ ಫಾಲೋಯರ್ಸ್ ಹೊಂದಿರುವ ಸುಹಾನ ಫಸ್ಟ್ ಮೂವಿ ಯಾವುದು ಎಂಬೆಲ್ಲಾ ಮಾಧ್ಯಮದವರ ಪ್ರಶ್ನೆಗಳಿಗೆ ಶಾರುಖ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಿದ್ದರು. ಆಕೆ ಗೆ ಇನ್ನೂ ಸಮಯವಿದೆ. ಈಗಲೇ ಎಲ್ಲವನ್ನು ಹೇಳಲಾಗುವುದಿಲ್ಲ ಎಂಬ ಕ್ಲೂ ಕೊಟ್ಟು ಸುಮ್ಮನಾಗಿದ್ದರು. ಆದರೆ ಮಗಳಿಗೆ ಪೂರ್ಣ ತಯಾರಿ ಮಾಡಿಯೇ ಫೀಲ್ಡ್​ ಗೆ ಇಳಿಸೋಕೆ ಶಾರುಖ್ ರೆಡಿಯಾಗಿದ್ದಾರೆ ಎಂದು  ತಿಳಿಯುತ್ತಿದೆ.

ಅಂದಹಾಗೇ ಕಿಂಗ್ ಖಾನ್ ಮಗಳನ್ನು ಬಿಗ್ ಸ್ಕ್ರೀನ್​ಗೆ ತರಲು ತಾ ಮುಂದು, ನಾ ಮುಂದು ಎಂದು ದೊಡ್ಡ ದೊಡ್ಡ ಸ್ಟಾರ್ ನಿರ್ದೇಶಕರು ಮುಂದೆ ಬರುತ್ತಿದ್ದಾರಂತೆ. ಅದರಲ್ಲಿ ಕರಣ್ ಜೋಹರ್, ಸಂಜಯ್ ಬನ್ಸಾಲಿ, ಸಂಜಯ್ ಘೋಷ್ ಇದ್ದಾರೆ. ಆದರೆ ಕರಣ್ ಅವ್ರೇ ಸುಹಾನಾ ಮೊದಲ ಫಸ್ಟ್ ಸಿನಿಮಾ ಮಾಡ್ತಾರಂತೆ ಎಂಬ ಸುದ್ದಿ ಬಿ ಟೌನ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಆದರೆ ಶಾರುಖ್ ದಂಪತಿ ಬೇರೆಯದ್ದೇ ಪ್ಲ್ಯಾನ್ ಮಾಡಿದ್ದಾರೆ. ಅವರು ಬೇರೆ ನಿರ್ದೇಶಕರ ಹುಡುಕಾಟದಲ್ಲಿದ್ದಾರಂತೆ. ಇನ್ನು ಈಕೆಯ ಮಾಡ್ ಲುಕ್, ಬೋಲ್ಡ್ ಬಿಹೇವಿಯರ್, ಅಟ್ರಾಕ್ಷನ್ ಪರ್ಸನಾಲಿಟಿ ಬಗ್ಗೆ ಮಾತನಾಡ್ತಿರುವ ಬಾಲಿವುಡ್ ಪಂಡಿತರು ಈಕೆಗೆ ತಕ್ಕದಾದ ನಾಯಕ ನಟನೇ ಬೇಕು. ಆ ಅದೃಷ್ಟ ಯಾರಿಗಿದೆ ಎಂದು ಬಾಯಿಬಿಟ್ಟು ಕಾಯ್ತಿದ್ದಾರೆ ಬಿಟೌನ್.

ಆದ್ರೆ ಕೆಲವರು ಮಾತ್ರ ಕಿಂಗ್ ಖಾನ್ ಸ್ಟಾರ್​ಡಮ್​ನಿಂದ ಆಕೆ ಹೀರೋಯಿನ್ ಆಗ್ಬೇಕು ಅಷ್ಟೇ ಅದು ಬಿಟ್ರೆ ಆಕೆಗೇನು ಗೊತ್ತು ನಟನೆ ಬಗ್ಗೆ ಅನ್ನೋ ಪ್ರಶ್ನೆ ಹಾಕಿದ್ದಾರೆ. ಆದ್ರೆ ಸುಹಾನ ರಂಗಭೂಮಿ ಕಲಾವಿದೆ.

ಹಲವು ನಾಟಕಗಳಲ್ಲಿ ನಟಿಸಿದ್ದಾಳಂತೆ. ಒಮ್ಮೆ ಖ್ಯಾತ ಹಿರಿಯ ನಟಿ ಶಬಾನಾ ಆಜ್ಮಿ ಆಕೆ ನಟನೆ ನೋಡಿ, ಇವ್ಳು ಮುಂದೊಂದಿನ ಒಳ್ಳೇ ನಟಿಯಾಗ್ತಾಳೆ ಅಂದಿದ್ರಂತೆ. ಇತ್ತೀಚೆಗೆ ವೋಗ್ ಫ್ಯಾಷನ್ ಮ್ಯಾಗಸೀನ್ಗೆ ಸುಹಾನಾ ಕೊಟ್ಟ ಪೋಸ್​ ಗಳ ಬೋಲ್ಡ್​ ಕುಲ್​ನಿಂದ ಈ ಸುಳಿವು ಸಿಕ್ಕಿದ್ದ ಬಿಟೌನ್ ಮಂದಿಗೆ ಸದ್ಯ ಆಕೆ ಮೊದಲ ಸಿನಿಮಾ ಮೇಲೆ ಕಣ್ಣು.

Please follow and like us:
0
http://bp9news.com/wp-content/uploads/2018/08/711132-suhana-khan-vogue-acting.jpghttp://bp9news.com/wp-content/uploads/2018/08/711132-suhana-khan-vogue-acting-150x150.jpgBP9 Bureauಸಿನಿಮಾಬಿ ಟೌನ್ ನಲ್ಲಿ ನಟ ಶಾರುಖ್ ಫ್ಯಾಮಿಲಿಯದ್ದೇ ಸೌಂಡು. ಮಗ, ಮಗಳು ಪತ್ನಿ ಹೀಗೆ ಶಾರುಖ್ ಹೊರತಾಗಿಯೂ ಮಾಧ್ಯಮದವರಿಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ನಾಯಕಿಯರಿಗಿಂತಲೂ ಸಕತ್ ಹೈಪ್ ಕ್ರಿಯೇಟ್ ಮಾಡಿದ್ದಾರೆ ಸುಹಾನಾ ಖಾನ್​.  ಶಾರುಖ್ ಪುತ್ರಿಯ ಸಸ್ಪೆನ್ಸ್ ವಿಚಾರವೊಂದು ಹೊರ ಬಿದ್ದಿದೆ. ಅಂತೂ-ಇಂತೂ ಅಧಿಕೃತವಾಗಿ ರಿವೀಲ್ಆ ಗಿರುವ  ಶಾರುಖ್ ಮಗಳ ನ್ಯೂ ಲೈಫ್ ಸ್ಟಾರ್ಟ್ ಆಗೋದನ್ನ ನೋಡೋಕೆ ಕಾತುರರಾಗಿದ್ದಾರಂತೆ ಕಿಂಗ್​ ಖಾನ್​.  ಹೀಗಾಗಲೇ ಸೆಲೆಬ್ರಿಟಿ ನಾಯಕಿಯರಿಗಿಂತಲೂ ಹೆಚ್ಚಾಗಿ...Kannada News Portal