ಫರ್ಸ್ಟ್​ ಟೈಮ್​ ಡೇಟಿಂಗ್​ ಅಂದ್ರೆ ಎಲ್ಲರಿಗೂ ಒಂಥರಾ ಭಯ, ನವಿರು ಭಾವ, ಆತನೊಂದಿಗೆ ಅಥವಾ ಅವಳೊಂದಿಗೆ ದಿನ ಕಳೆಯುವುದು ಹೇಗೆ, ಮಾತನಾಡುವ ಬಗೆ, ಅವನನ್ನು ಆಕರ್ಷಿಸುವುದು ಹೇಗೆ? ಹೀಗೆ ಎಲ್ಲ ತರಹದ ಪ್ರಶ್ನೆಗಳು ಗುಂಗು ಹಿಡಿಸಿ ಬಿಡುತ್ತವೆ. ಮನಸಲ್ಲಿ ಉದ್ಭವವಾಗೋ ಎಕ್ಸೈಟ್​ಮೆಂಟ್​ ಪ್ರತಿ ಕ್ಷಣಕ್ಕೂಆಹ್ಲಾದವೆನಿಸುತ್ತೆ. ತಲೆ ಬಾಚುವುದು, ಯಾವ ಡ್ರೆಸ್​ ಹಾಕಿದರೆ ಆತ ನನ್ನನ್ನ ಬೇಗ ಒಪ್ಪಿಕೊಳ್ಳಬಹುದು ಅನ್ನೋ ಭಾವ ಎಲ್ಲವೂ ಸೊಗಸು…

ಬೃಹತ್​ ನಗರಗಳಲ್ಲಿ ಡೇಟಿಂಗ್​ ಹೋಗೋದು ಹುಡುಗ ಹುಡುಗಿಯರಿಗೆ ಕಾಮನ್​. ಮೊದಲ ಡೇಟಿಂಗ್​ನಲ್ಲಿ ಒಬ್ಬರನ್ನೊಬ್ಬರು ಆಕರ್ಷಿಸುವುದು, ಮಾತು, ನಗು, ಫ್ರೀಯಾಗಿ ಇರೋದು, ಸಕಾರಾತ್ಮಕ ಆಲೋಚನೆ ಭಾವ ಎಲ್ಲವೂ ಕ್ಷಣಕ್ಷಣಕ್ಕೂ ಉದ್ರೇಕಕ್ಕೇರಿಸುತ್ತಲೇ ಇರುತ್ತದೆ. ಹಾಗಿದ್ದರೆ ಈ ಕೆಲವು ವಿಷಯಗಳು ನೀವು ಡೇಟಿಂಗ್​ ಹೋಗುವಾಗ ಗಮನದಲ್ಲಿರಲಿ… 


ಮೊದಲೇ ಕೆಲವು ಯೋಜನೆಗಳನ್ನು ಹಾಕಿಕೊಂಡಿರಿ:

         ನೀವು ಭೇಟಿಯಾಗುವ ಸ್ಥಳ, ಮೊದಲ ಭೇಟಿಯಲ್ಲಿ ಏನು ಮಾತನಾಡಬೇಕು, ವೈಯಕ್ತಿಕ ವಿಚಾರಗಳನ್ನು ಮಾತನಾಡುವಾಗ ಯಾವ ವಿಷಯಕ್ಕೆ ಪ್ರಾಮುಖ್ಯ ನೀಡಬೇಕು ಎಂಬುದನ್ನು ಮೊದಲೇ ಅಂದುಕೊಂಡಿರಿ. ನಿಮ್ಮ ಪರಸ್ಪರ ಮಾತು, ಹರಟೆಯಿರಲಿ. ಸ್ನೇಹಮಯ ವಾತಾವರಣವನ್ನು ಕಾಯ್ದುಕೊಳ್ಳಿ. ಒಬ್ಬರನ್ನೊಬ್ಬರು ಗೆಳೆಯ / ಗೆಳತಿಯಂತೆ ಭಾವಿಸಿಕೊಳ್ಳಿ. ಕೆಲವು ನಿಮಿಷಗಳ ಮೌನ, ಕಣ್ಣುಗಳು ಮಾತನಾಡಲಿ.

ನಿಮ್ಮ ಭಾವ ಸಕಾರಾತ್ಮಕವಾಗಿರಲಿ:

          ನೀವು ಸಕಾರಾತ್ಮಕ ಭಾವದಲ್ಲೇ ಇದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮೊದಲು ಕೆಟ್ಟ ಭಾವವನ್ನು ಮನಸ್ಸಿನಿಂದ ತೆಗೆದುಹಾಕಿ. ನೀವು ಮಾಡುವ ಕೆಲಸ, ನಿಮ್ಮ ಕುಟುಂಬ, ನಿಮ್ಮ ಸಮಸ್ಯೆಗಳನ್ನು ಕುರಿತು ಡೇಟಿಂಗ್​ ವೇಳೆಯಲ್ಲಿ ಆಲೋಚಿಸುವುದು, ಅದನ್ನೇ ಹೇಳಿಕೊಂಡು ಮನಸ್ಸು ಹಾಳು ಮಾಡಿಕೊಳ್ಳುವುದು ಬೇಡ. ಮುಖದಲ್ಲಿ ಒಂದು ಮಂದಹಾಸ, ಸಂತಸದಿಂದ ಇಬ್ಬರು ಒಂದಾಗಿ.

ನಿಮ್ಮಿಬ್ಬರ ಸಾಂಗತ್ಯದಲ್ಲಿ ಫೋನ್​ ದೂರವಿರಿಸಿ:

     ಒಬ್ಬರಿಗೊಬ್ಬರು ಒಂದಾಗಿರುವ ಸಮಯದಲ್ಲಿ ನಿಮ್ಮ ಮೊಬೈಲ್​ನ್ನು ಸ್ವಿಚ್ಛ್​ ಆಫ್​ ಮಾಡಿ ಬ್ಯಾಗಲ್ಲಿರಿಸಿಕೊಳ್ಳಿ. ನಿಮ್ಮ ಸಮಯವನ್ನು ಪರಸ್ಪರ ನೋಡುವುದರಲ್ಲಿ, ಮಾತನಾಡುವುದರಲ್ಲಿ, ಖುಷಿಯಾಗಿರುವುದರಲ್ಲಿ ಕಳೆಯಿರಿ. ನಿಮ್ಮ ಮೊಬೈಲ್​ನಲ್ಲಿ ನೀವು ಬ್ಯುಸಿಯಾಗಿದ್ದರೆ, ಇಬ್ಬರೂ ಒಂದಾಗಲು, ಒಬ್ಬರಿಗೊಬ್ಬರ ಅಭಿರುಚಿಗಳು ಅರ್ಥವೇ ಆಗುವುದಿಲ್ಲ.

ನಿಮ್ಮ ಮಾಜಿ ಪ್ರೇಯಸಿ, ಪ್ರಿಯತಮನ ಕುರಿತು ಚರ್ಚಿಸಬೇಡಿ:

ನಿಮ್ಮ ಮಾಜಿ ಪ್ರೇಯಸಿ/ಪ್ರಿಯತಮ ಕುರಿತು ಚರ್ಚಿಸಬೇಡಿ. ನಿಮ್ಮ ಕಳೆದು ಹೋದ ಪ್ರೀತಿಯ ಬಗ್ಗೆ ಮಾತನಾಡಬೇಡಿ. ನಿಮ್ಮ ಡೇಟಿಂಗ್​ ವೇಳೆ ನಿಮ್ಮ ಮನಸ್ಸು, ಆಲೋಚನೆಗಳು ತಾಜಾತನದಿಂದ ಕೂಡಿರಲಿ.

ನಿಮ್ಮ ಸಮಸ್ಯೆಗಳ ಚರ್ಚೆ ಅನಗತ್ಯ:

    ಸಮಸ್ಯೆಯನ್ನು ಬದಿಗಿಟ್ಟು ಪರಸ್ಪರ ಪ್ರೀತಿ, ವಿಶ್ವಾಸದಿಂದ ಒಂದುಗೂಡಿ. ನಿಮ್ಮ ಚರಿತ್ರೆ, ಹಿನ್ನೆಲೆ, ಕೆಲಸ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಆಯ್ಕೆಯ ಸಂಗಾತಿ ನಿಮ್ಮೊಂದಿಗಿರುವಾಗ ಸಂತಸವನ್ನೇ ಅನುಭವಿಸಿ. ಒಬ್ಬರನ್ನೊಬ್ಬರು ಆಲಂಗಿಸಿ, ಆರಾಮದಾಯಕವಾಗಿ ನಿಮ್ಮ ದಿನವನ್ನು ಕಳೆಯಿರಿ.

ಅವನ/ಅವಳ ಮಾತು ಕೇಳಿಸಿಕೊಳ್ಳುವಷ್ಟು ತಾಳ್ಮೆಯಿರಲಿ:

ಮೊದಲ ಡೇಟಿಂಗ್​ನಲ್ಲಿ ನಿಮಗೆ ಭಯವಾದರೆ, ನರ್ವಸ್​ ಅನ್ನಿಸಿದರೆ ಒಂದು ಮಂದಹಾಸ ಬೀರಿ, ಕಂಫರ್ಟ್​ ಆಗಿರಿ. ಆತ ಅಥವಾ ಅವಳು ಹೇಳುವ ಮಾತುಗಳನ್ನು, ಖುಷಿಯಾದ ಸಂಗತಿಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ಮಾತು ಕೇಳಿಸಿಕೊಂಡಾಗ ವ್ಯಕ್ತಿ ಮತ್ತು ಆತನ ವಿಷಯವನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಕೆಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಖುಷಿಯಾಗಿರಿ.

ಮೇಲಿನ ಅಂಶಗಳನ್ನು ನಿಮ್ಮ ಗಮನದಲ್ಲಿಟ್ಟುಕೊಂಡರೆ ನಿಮ್ಮ ಜೀವನದ ಮೊದಲ ಡೇಟಿಂಗ್​ ನಿಜಕ್ಕೂ ಸುಂದರ. ಹಾಯಾಗಿ ಸದಾ ನಗುತಿರಿ….

ಲೇಖನ: ಧರಿತ್ರಿ. ಆರ್​ 

 

Please follow and like us:
0
BP9 News Bureauಲೈಫ್​ ಸ್ಟೈಲ್​​ ಗುರುFirst dating,keep in mind some ways to get freshness,love,you have to follow some ways to get freshnessಫರ್ಸ್ಟ್​ ಟೈಮ್​ ಡೇಟಿಂಗ್​ ಅಂದ್ರೆ ಎಲ್ಲರಿಗೂ ಒಂಥರಾ ಭಯ, ನವಿರು ಭಾವ, ಆತನೊಂದಿಗೆ ಅಥವಾ ಅವಳೊಂದಿಗೆ ದಿನ ಕಳೆಯುವುದು ಹೇಗೆ, ಮಾತನಾಡುವ ಬಗೆ, ಅವನನ್ನು ಆಕರ್ಷಿಸುವುದು ಹೇಗೆ? ಹೀಗೆ ಎಲ್ಲ ತರಹದ ಪ್ರಶ್ನೆಗಳು ಗುಂಗು ಹಿಡಿಸಿ ಬಿಡುತ್ತವೆ. ಮನಸಲ್ಲಿ ಉದ್ಭವವಾಗೋ ಎಕ್ಸೈಟ್​ಮೆಂಟ್​ ಪ್ರತಿ ಕ್ಷಣಕ್ಕೂಆಹ್ಲಾದವೆನಿಸುತ್ತೆ. ತಲೆ ಬಾಚುವುದು, ಯಾವ ಡ್ರೆಸ್​ ಹಾಕಿದರೆ ಆತ ನನ್ನನ್ನ ಬೇಗ ಒಪ್ಪಿಕೊಳ್ಳಬಹುದು ಅನ್ನೋ ಭಾವ ಎಲ್ಲವೂ ಸೊಗಸು... ಬೃಹತ್​ ನಗರಗಳಲ್ಲಿ ಡೇಟಿಂಗ್​ ಹೋಗೋದು ಹುಡುಗ...Kannada News Portal