ಸಿನಿಟಾಕ್ :  ಸ್ಯಾಂಡಲ್ ವುಡ್​ನ ಸೂಪರ್​ ಹೀರೋಯಿನ್​ ಅನು ಪ್ರಭಾಕರ್​  ತಮ್ಮ ಮುದ್ದಾದ ಮಗು, ಪತಿಯೊಟ್ಟಿಗೆ  ದೀಪಾವಳಿ ಸಂಭ್ರಮ ಆಚರಿಸಿದ್ದಾರೆ.  ಅನುಪ್ರಭಾಕರ್​, ರಘು ಮುಖರ್ಜಿ  ದಂಪತಿ ಮುದ್ದಾದ ಪುಟ್ಟು ಮಹಾಲಕ್ಷ್ಮಿ ಯೊಂದಿಗೆ ಬೆಳಕಿನ  ಹಬ್ಬದಲ್ಲಿ ಭಾಗಿಯಾಗಿದ್ದರು.  ನಟಿ ಅನು ಪ್ರಭಾಕರ್​ ಸದಾ ಸಾಮಾಜಿಕ ಜಾಲತಾಣಗಳಲ್ಲಿ  ಆಕ್ಟೀವ್​ ಆಗಿರುತ್ತಾರೆ.   ಅನು ಅಭಿಮಾನಿಗಳಿಗೆ ದೀಪಾವಳಿ ವಿಶ್​ಸ್​ ತಿಳಿಸಿದ್ದಾರೆ.

ತಮ್ಮ ಟ್ವಿಟ್ಟರ್​ ಖಾತೆ ಮೂಲಕ  ಈ ಬಾರಿ ದೀಪಾವಳಿ  ನಮಗೆ ತುಂಬಾ ವಿಶೇಷವಾಗಿದೆ. ಯಾಕಂದ್ರೆ 3 ತಿಂಗಳ ಹಿಂದಷ್ಟೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದೇನೆ. ನಮ್ಮನೆ ಪಟ್ಟು ಮಹಾಲಕ್ಷ್ಮಿ  ಈ ಬಾರಿ ದೀಪಾವಳಿಗೆ  ಸೇರಿದ್ದಾರೆ ಅಂತಾ ಪತಿ  ರಘುಮುಖರ್ಜಿಜೊತೆಗಿನ ಫೋಟೋ ಅಪ್​ಲೋಡ್​ಮಾಡಿದ್ದರೆ

ಇಷ್ಟು ದಿನ ಅನು ಪ್ರಭಾಕರ್ ಮಗು ಹೇಗಿದೆ ಅಂತಾ ನೋಡಬೇಕು ಅಂತಾ ಕಾಯ್ತಿದ್ದ ಅವರ ಅಭಿಮಾನಿಗಳು ಈಗ ಮಗು ಹಾಗೂ ಅನು ಅವರ ಪುಟ್ಟ ಸಂಸಾರ ನೋಡಿ ನೂರ್ಕಾಲ ಚೆನ್ನಾಗಿರಿ ಅಂತಾ ಹಾರೈಸುತ್ತಿದ್ದಾರೆ.

ಈ ಫೋಟೋಗೆ ನಟ ಅರ್ಜುನ್‌ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾ ಕೂಡ ಪ್ರತಿಕ್ರಿಯಿಸಿದ್ದು, ಓಹ್! ಮಗುವನ್ನು ಯಾವಾಗ ಕಣ್ಣಾರೆ ನೋಡ್ತಿನೋ ಅಂತನ್ನಿಸುತ್ತಿದೆ ಎಂದಿದ್ದಾರೆ.
ಆಗಸ್ಟ್‌ 15ರಂದು ಸ್ವಾತಂತ್ರ್ಯದಿನದಂದೇ ಹೆಣ್ಣು ಮಗುವಿಗೆ ಜನ್ಮ ನೀಡಿರುವುದನ್ನು ಆಕೆಯ ಪತಿ ರಘು ಮುಖರ್ಜಿ ತಮ್ಮ ಇನ್‍ಸ್ಟಾಗ್ರಾಮ್ ಫೋಟೋ ಹಂಚಿಕೊಂಡು ಹೇಳಿಕೊಂಡಿದ್ರು.

Please follow and like us:
0
http://bp9news.com/wp-content/uploads/2018/11/Anu-Prabhakar-profile-family-biodata-wiki-Age-Affairs-Husband-Height-Weight-Biography-Movies-go-profile-2.jpghttp://bp9news.com/wp-content/uploads/2018/11/Anu-Prabhakar-profile-family-biodata-wiki-Age-Affairs-Husband-Height-Weight-Biography-Movies-go-profile-2-150x150.jpgBP9 Bureauಪ್ರಮುಖಸಿನಿಮಾ  ಸಿನಿಟಾಕ್ :  ಸ್ಯಾಂಡಲ್ ವುಡ್​ನ ಸೂಪರ್​ ಹೀರೋಯಿನ್​ ಅನು ಪ್ರಭಾಕರ್​  ತಮ್ಮ ಮುದ್ದಾದ ಮಗು, ಪತಿಯೊಟ್ಟಿಗೆ  ದೀಪಾವಳಿ ಸಂಭ್ರಮ ಆಚರಿಸಿದ್ದಾರೆ.  ಅನುಪ್ರಭಾಕರ್​, ರಘು ಮುಖರ್ಜಿ  ದಂಪತಿ ಮುದ್ದಾದ ಪುಟ್ಟು ಮಹಾಲಕ್ಷ್ಮಿ ಯೊಂದಿಗೆ ಬೆಳಕಿನ  ಹಬ್ಬದಲ್ಲಿ ಭಾಗಿಯಾಗಿದ್ದರು.  ನಟಿ ಅನು ಪ್ರಭಾಕರ್​ ಸದಾ ಸಾಮಾಜಿಕ ಜಾಲತಾಣಗಳಲ್ಲಿ  ಆಕ್ಟೀವ್​ ಆಗಿರುತ್ತಾರೆ.   ಅನು ಅಭಿಮಾನಿಗಳಿಗೆ ದೀಪಾವಳಿ ವಿಶ್​ಸ್​ ತಿಳಿಸಿದ್ದಾರೆ. ತಮ್ಮ ಟ್ವಿಟ್ಟರ್​ ಖಾತೆ ಮೂಲಕ  ಈ ಬಾರಿ ದೀಪಾವಳಿ  ನಮಗೆ ತುಂಬಾ ವಿಶೇಷವಾಗಿದೆ. ಯಾಕಂದ್ರೆ...Kannada News Portal