ಬೆಂಗಳೂರು : ಕಾಫಿ, ಪಶ್ಚಿಮ ಘಟ್ಟ ಮತ್ತು ಬೋರ್ಗರೆಯುವ ಜಲಪಾತಗಳಿಂದ ಖ್ಯಾತಿ ಪಡೆದಿದ್ದ ಚಿಕ್ಕಮಗಳೂರು ಇದೀಗ ದಕ್ಷಿಣ ಭಾರತದಿಂದ, ಅದರಲ್ಲೂ ಕರ್ನಾಟಕದಿಂದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್‌ನ್ನು ನೀಡಿದ ಖ್ಯಾತಿಗೂ ಪಾತ್ರವಾಗಿದೆ.

ಆ ಚಿಕ್ಕಮಗಳೂರಿನ ಹಿರಿಮರಯ ಗರಿಯ ಹೆಸರು ಮೇಘನಾ ಶಾನಭೋಗ್. ಇಲ್ಲಿನ ದುಂಡಿಗಲ್‌ ವಾಯುಪಡೆ ಅಕಾಡೆಮಿಯಲ್ಲಿ ಮೇಘನಾ ಯುದ್ಧವಿಮಾನ ಪೈಲಟ್ ತರಬೇತಿ ಪದವಿ ಪೂರೈಸಿದ್ದಾರೆ. ಪದವಿ ಪೂರೈಸಿದವರ ಪಥಸಂಚಲನದಲ್ಲಿ ಮೇಘನಾ ಶಾನಭೋಗ್ ಮತ್ತುಮತ್ತೋರ್ವ ಯುವತಿಯನ್ನು ಯುದ್ಧವಿಮಾನದ ಪೈಲಟ್‌ ಆಗಿ ಆಯ್ಕೆ ಮಾಡಿರುವ ವಿಷಯವನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಮೇಘನಾ ಅವರ ತಂದೆ ಎಂ.ಕೆ.ಸುರೇಶ್ ವಕೀಲರಾಗಿದ್ದು, ತಾಯಿ ಉಡುಪಿಯ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿದ್ದಾರೆ. ಮೇಘನಾ ಅವರು ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ ಮತ್ತು ಮೈಸೂರಿನ ಜಯ ಚಾಮರಾಜೇಂದ್ರ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ.

ಅಲ್ಲದೆ ಮನಾಲಿಯಲ್ಲಿ ಪರ್ವತಾರೋಹಣ ಮತ್ತು ಗೋವಾದಲ್ಲಿ ಪ್ಯಾರಾಗ್ಲೈಡಿಂಗ್ ತರಬೇತಿ ಪಡೆದಿದ್ದಾರೆ. ದುಂಡಿಗಲ್‌ನ ಏರ್‌ಫೋರ್ಸ್ ಅಕಾಡೆಮಿಗೆ ಅವರು 2017ರ ಜನವರಿಯಲ್ಲಿ ಪ್ರವೇಶ ಪಡೆದಿದ್ದರು.

Please follow and like us:
0
http://bp9news.com/wp-content/uploads/2018/06/15448124-1.jpghttp://bp9news.com/wp-content/uploads/2018/06/15448124-1-150x150.jpgPolitical Bureauಚಿಕ್ಕಮಗಳೂರುಪ್ರಮುಖರಾಷ್ಟ್ರೀಯಬೆಂಗಳೂರು : ಕಾಫಿ, ಪಶ್ಚಿಮ ಘಟ್ಟ ಮತ್ತು ಬೋರ್ಗರೆಯುವ ಜಲಪಾತಗಳಿಂದ ಖ್ಯಾತಿ ಪಡೆದಿದ್ದ ಚಿಕ್ಕಮಗಳೂರು ಇದೀಗ ದಕ್ಷಿಣ ಭಾರತದಿಂದ, ಅದರಲ್ಲೂ ಕರ್ನಾಟಕದಿಂದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್‌ನ್ನು ನೀಡಿದ ಖ್ಯಾತಿಗೂ ಪಾತ್ರವಾಗಿದೆ. ಆ ಚಿಕ್ಕಮಗಳೂರಿನ ಹಿರಿಮರಯ ಗರಿಯ ಹೆಸರು ಮೇಘನಾ ಶಾನಭೋಗ್. ಇಲ್ಲಿನ ದುಂಡಿಗಲ್‌ ವಾಯುಪಡೆ ಅಕಾಡೆಮಿಯಲ್ಲಿ ಮೇಘನಾ ಯುದ್ಧವಿಮಾನ ಪೈಲಟ್ ತರಬೇತಿ ಪದವಿ ಪೂರೈಸಿದ್ದಾರೆ. ಪದವಿ ಪೂರೈಸಿದವರ ಪಥಸಂಚಲನದಲ್ಲಿ ಮೇಘನಾ ಶಾನಭೋಗ್ ಮತ್ತುಮತ್ತೋರ್ವ ಯುವತಿಯನ್ನು ಯುದ್ಧವಿಮಾನದ ಪೈಲಟ್‌ ಆಗಿ...Kannada News Portal