ಬೆಂಗಳೂರು : ಸಹಕಾರ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್​​ ಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ ರೀತಿಯಲ್ಲಿ ಮೀನುಗಾರರು, ನೇಕಾರರು, ಸ್ತ್ರೀ ಶಕ್ತಿಸಂಘಟನೆಗಳ ಸಾಲವನ್ನು ಮುಖ್ಯಮಂತ್ರಿ ಮನ್ನಾ ಮಾಡಲಿದ್ದಾರೆ.

ಜನತೆ ಸ್ವಲ್ಪ ಸಮಯಾವಕಾಶ ಕೊಡಬೇಕೆಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮನವಿ ಮಾಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮುಖ್ಯಮಂತ್ರಿ, ಸಚಿವರು,ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಮಾಡಬೇಕಾದರೆ ಹಣಕಾಸು ಕ್ರೋಢೀಕರಣವಾಗಬೇಕು. ಅದನ್ನು ಸರಿದೂಗಿಸಲು ಸಮಯ ನೀಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ರೈತರ ಸಾಲವನ್ನು ಮನ್ನಾ ಮಾಡಿದ ರೀತಿಯಲ್ಲಿ ಮೀನುಗಾರರು, ನೇಕಾರರು ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಮನ್ನ ಮಾಡಿದಾಗಲೇ ನನಗೆ ಸಮಾಧಾನವಾಗುವುದು. ರೈತರು ಸಾಲಮನ್ನಾದಲ್ಲಿ ಒಕ್ಕಲಿಗರಿಗೆ ಶೇ.30ರಷ್ಟು ಸಿಗುತ್ತದೆ ಎಂಬ ಸುದ್ದಿ ವಿರೋಧಿಗಳು ಹಬ್ಬಿಸುತ್ತಿರುವ ಕುತಂತ್ರ ಎಂದು ಟೀಕಿಸಿದರು.

ಬಿಜೆಪಿಯವರ ಆಟವನ್ನು ಗಮನಿಸುತ್ತಿದ್ದೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾವ ಕಾರಣಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದಾರೆ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು.ಸುಖಾಸುಮ್ಮನೆ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ಜೆಡಿಎಸ್ ವರಿಷ್ಠ ಆಕ್ಷೇಪಿಸಿದರು. 87ರ ವಯಸಿನಲ್ಲಿ ನಾನು ಸ್ವಾರ್ಥಕ್ಕಾಗಿ ಹೋರಾಟ ನಡೆಸುತ್ತಿಲ್ಲ. ನಾಡಿನ ನೆಲಜಲ ಉಳಿಸುವುದಕ್ಕಾಗಿ ಇಂತಹ ದಿಟ್ಟ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರ ರಚನೆಯಾದ ಮೇಲೆ ಮಾಧ್ಯಮಗಳು, ವಿರೋಧ ಪಕ್ಷಗಳು ಸೇರಿದಂತೆ ಯಾರ್ಯಾರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನಾನು ಮಾಧ್ಯಮಗಳ ಬಗ್ಗೆ ಟೀಕೆ ಮಾಡಲು ಹೋಗೊಲ್ಲ. ನಿಮ್ಮ ಕರ್ತವ್ಯವನ್ನು ನೀವು ಮಾಡುತ್ತಿದ್ದೀರಿ. ಆದರೆ ವಾಸ್ತವಕ್ಕೆ ದೂರವಾದ ಸುದ್ದಿ ಮಾಡಿ ಗೊಂದಲ ಸೃಷ್ಟಿಸಬಾರದು ಎಂದು ಸಲಹೆ ಮಾಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಂತಹ ಸಂದರ್ಭದಲ್ಲಿ ಬಜೆಟ್ ಮಂಡಿಸಿದರು ಎಂಬುದು ನನಗೆ ಮಾತ್ರ ಗೊತ್ತು. ಒಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಬಜೆಟ್ ಮಂಡಿಸದೆ ಲೇಖಾನುದಾನ ಮಾಡಲಿ ಎಂದಿದ್ದರು. ಮತ್ತೊಂದೆಡೆ ಅವರದೇ ಬಜೆಟ್​​ ಅನ್ನು ಮುಂದುವರೆಸುವ ಸಂದಿಗ್ದ ಸ್ಥಿತಿಗೆ ಸಿಲುಕಿಸಿದ್ದರು. ಕುಮಾರಸ್ವಾಮಿ ತಾಳ್ಮೆ ಕಳೆದುಕೊಳ್ಳದೆ ಎಲ್ಲವನ್ನೂ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ದೇವರ ಆಶೀರ್ವಾದ ನಿಮ್ಮ ಸಹಕಾರ ಹೀಗೆಯೇ ಇರಲಿ ಎಂದು ಮನವಿ ಮಾಡಿದರು. 37 ಶಾಸಕರನ್ನು ಹೊಂದಿರುವ ಅವರಿಗೆ 47 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವುದೆಂದರೆ ಹುಡುಗಾಟದ ಮಾತಲ್ಲ. ಈ ಸಾಲವನ್ನು ಒಂದೇ ಕಂತಿನಲ್ಲಿ ತೀರಿಸಲು ಸಾಧ್ಯವಿಲ್ಲ. 4 ಕಂತಿನಲ್ಲಿ ತೀರಿಸುವ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಇದನ್ನು ಪ್ರಶ್ನಿಸುವ ಪ್ರತಿ ಪಕ್ಷದವರು ಅರ್ಥ ಮಾಡಿಕೊಳ್ಳಲಿ ಎಂದು ದೇವೇಗೌಡರು ಛಾಟಿ ಬೀಸಿದರು.

Please follow and like us:
0
http://bp9news.com/wp-content/uploads/2018/07/deve_gowda_630_630.jpghttp://bp9news.com/wp-content/uploads/2018/07/deve_gowda_630_630-150x150.jpgPolitical Bureauಪ್ರಮುಖರಾಜಕೀಯFishermen,Weavers and Female Shocking Debt Waivers Like Farmers Loans .. !!!ಬೆಂಗಳೂರು : ಸಹಕಾರ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್​​ ಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ ರೀತಿಯಲ್ಲಿ ಮೀನುಗಾರರು, ನೇಕಾರರು, ಸ್ತ್ರೀ ಶಕ್ತಿಸಂಘಟನೆಗಳ ಸಾಲವನ್ನು ಮುಖ್ಯಮಂತ್ರಿ ಮನ್ನಾ ಮಾಡಲಿದ್ದಾರೆ. ಜನತೆ ಸ್ವಲ್ಪ ಸಮಯಾವಕಾಶ ಕೊಡಬೇಕೆಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮನವಿ ಮಾಡಿದ್ದಾರೆ. ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮುಖ್ಯಮಂತ್ರಿ, ಸಚಿವರು,ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಮಾಡಬೇಕಾದರೆ ಹಣಕಾಸು ಕ್ರೋಢೀಕರಣವಾಗಬೇಕು. ಅದನ್ನು...Kannada News Portal