ಚಿಕ್ಕೋಡಿ- ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಮಳೆಯಿಂದ  ಕೃಷ್ಣ ನದಿಯಲ್ಲಿ ಬಾರಿ ಪ್ರಮಾಣದ ಪ್ರವಾಹ ಭೀತಿ ಎದುರಾಗಿದೆ.ಉತ್ತರ ಕರ್ನಾಟಕ ಭಾಗದ ಜೀವನಾಡಿ ಕೃಷ್ಣಾ ನದಿಯು ಭಾರಿ ಪ್ರಮಾಣದಲ್ಲಿ ನೀರು ತುಂಬಿ ಬರುತ್ತಿದೆ.ಮಹಾರಾಷ್ಟ್ರದ ಕೋಯ್ನಾ ಜಲಾಶಯ ದಿಂದ ನೀರು ಬಿಡುಗಡೆಯಾಗಿರುವದರಿಂದ   ಕೃಷ್ಣಾ ನದಿಯಲ್ಲಿ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದೆ.ಹಿಪ್ಪರಗಿ ಬ್ಯಾರೇಜ್ ನಲ್ಲಿ ಒಳ ಹರಿವು ಹೆಚ್ಚಾಗಿದ್ದು, ಬ್ಯಾರೇಜ್ ನಿಂದ ಸದ್ಯಕ್ಕೆ 70,000 ಕ್ಯೂಸೆಕ್ಸ್ ನೀರನ್ನ ಹೊರ ಬಿಡಲಾಗಿದೆ ರಾತ್ರೋರಾತ್ರಿ ಅತಿಯಾಗಿ ಬಂದ ನೀರಿನಿಂದ ಕೇಲವು ರೈತರ ಪಂಪ್ಸೆಟ್ ಗಳು ಜಲಾವೃತಗೊಂಡಿವೆ ಇನ್ನು ಕೆಲವು ರೈತರು.

ತಮ್ಮ ಪಂಪ್ಸೆಟ್ ಗಳನ್ನು ಸ್ಥಳಾಂತರ ಮಾಡುತ್ತಿದ್ದಾರೆ.ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣ ನದಿಯಲ್ಲಿ  ದೋಣಿಗಳ ಮೂಲಕ ಜನರು ಸುರಕ್ಷೀತ ಸ್ಥಳಗಳಿಗ ಸೇರಿವುದು ವಿಪರ್ಯಾಸವಾಗಿದೆ.ಅಥಣಿ ತಾಲೂಕಿನ ಝುಂಜರವಾಡ ಹಾಗೂ ಬಾಗಲಕೋಟೆ  ಜಮಖಂಡಿ ತಾಲೂಕಿನ ಮುತ್ತೂರ ಮಧ್ಯ ಸಂಪರ್ಕ ಕಲ್ಪಿಸುವ ದೋಣಿಗಳ ಮೂಲಕ ಜನರನ್ನು ದಂಡೆಗಳಿಗೆ ಸೇರಿಸಲಾಗುತ್ತಿದೆ. ಕೃಷ್ಣ ನದಿ ಅಪಾಯದ ಮಟ್ಟ ಮೀರಿ ಹರಿಯುತಿದ್ದು  ತಾಲೂಕು ಆಡಳಿತ  ಯಾವುದೇ ಕ್ರಮ ಕೈಗೊಂಡಿಲ್ಲ . ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದ್ದು ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಜಿಲ್ಲಾಡಳಿತ  ಕೊಡಲೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡೆಸಿದ್ದಾರೆ.

ವರದಿ; ಶಿವರಾಜ್ ಎಂ ನೇಸರಗಿ, ಅಥಣಿ
Please follow and like us:
0
http://bp9news.com/wp-content/uploads/2018/07/WhatsApp-Image-2018-07-14-at-3.44.22-PM-1024x768.jpeghttp://bp9news.com/wp-content/uploads/2018/07/WhatsApp-Image-2018-07-14-at-3.44.22-PM-150x150.jpegBP9 Bureauಪ್ರಮುಖಚಿಕ್ಕೋಡಿ- ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಮಳೆಯಿಂದ  ಕೃಷ್ಣ ನದಿಯಲ್ಲಿ ಬಾರಿ ಪ್ರಮಾಣದ ಪ್ರವಾಹ ಭೀತಿ ಎದುರಾಗಿದೆ.ಉತ್ತರ ಕರ್ನಾಟಕ ಭಾಗದ ಜೀವನಾಡಿ ಕೃಷ್ಣಾ ನದಿಯು ಭಾರಿ ಪ್ರಮಾಣದಲ್ಲಿ ನೀರು ತುಂಬಿ ಬರುತ್ತಿದೆ.ಮಹಾರಾಷ್ಟ್ರದ ಕೋಯ್ನಾ ಜಲಾಶಯ ದಿಂದ ನೀರು ಬಿಡುಗಡೆಯಾಗಿರುವದರಿಂದ   ಕೃಷ್ಣಾ ನದಿಯಲ್ಲಿ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದೆ.ಹಿಪ್ಪರಗಿ ಬ್ಯಾರೇಜ್ ನಲ್ಲಿ ಒಳ ಹರಿವು ಹೆಚ್ಚಾಗಿದ್ದು, ಬ್ಯಾರೇಜ್ ನಿಂದ ಸದ್ಯಕ್ಕೆ 70,000...Kannada News Portal