ನಿಮ್ಮ ಜೀನ್ಸ್ ಯಾವಾಗಲೂ ಹೊಸದರಂತೆ ಹೊಳೆಯುತ್ತಿರಬೇಕು ಎಂದಾದಲ್ಲಿ ಅದನ್ನು ಒಗೆಯುವಾಗ ಒಳಕ್ಕೆ ಹೊರಕ್ಕೆ ಮಾಡಿ ಒಗೆಯಿರಿ. ಹೊರಭಾಗವನ್ನು ಒಳಕ್ಕೆ ಮಾಡಿಕೊಂಡು ನಂತರವಷ್ಟೇ ಅದನ್ನು ಒಗೆಯಿರಿ. ಇದರಿಂದ ನಿಮ್ಮ ಜೀನ್ಸ್ ದೀರ್ಘಕಾಲ ಹಾಳಾಗದಂತೆ ಬಾಳಿಕೆ ಬರುತ್ತದೆ.

ಕೆಲವೊಂದು ಜೀನ್ಸ್‌ಗಳು ಒಗೆದ ನಂತರ ಆಕಾರವನ್ನು ಕಳೆದುಕೊಳ್ಳುತ್ತವೆ. ಇದರಿಂದ ಜೀನ್ಸ್ ತನ್ನ ವಿನ್ಯಾಸವನ್ನು ಕಳೆದುಕೊಂಡು ಗುಣಮಟ್ಟವನ್ನು ನಷ್ಟಮಾಡಿಕೊಳ್ಳುತ್ತದೆ. ಇದನ್ನು ತಡೆಯಲು ಜಿಪ್ ಅನ್ನು ಕ್ಲೋಸ್ ಮಾಡಿ ಮತ್ತು ಬಟನ್‌ಗಳನ್ನು ಮೇಲಕ್ಕೆ ಮಾಡಿಕೊಂಡು ನಂತರ ಒಗೆಯಿರಿ.

ನಿಮ್ಮ ಜೀನ್ಸ್ ಒಗೆಯುವ ಮುನ್ನ ಪಾಕೆಟ್ ಪರಿಶೀಲನೆಯನ್ನು ಮರೆಯದೆ ಮಾಡಿ. ಎಲ್ಲಿಯಾದರೂ ಪಾಕೆಟ್‌ನಲ್ಲಿ ಕಾಗದದ ತುಣುಕು ಅಥವಾ ನೋಟು ಇದ್ದಲ್ಲಿ ಒಗೆಯುವ ಸಂದರ್ಭದಲ್ಲಿ ಅದು ಒದ್ದೆಯಾಗುತ್ತದೆ ಮತ್ತು ಜೀನ್ಸ್‌ನಲ್ಲಿ ಇದು ಅಂಟಿ ಹೋಗುತ್ತದೆ. ಇದರಿಂದ ನಿಮ್ಮ ಬಟ್ಟೆ ಹಾಳಾಗುವ ಸಾಧ್ಯತೆ ಇರುತ್ತದೆ.

ನಿಮ್ಮ ಡೆನೀಮ್‌ಗಳನ್ನು ಎಂದಿಗೂ ಬ್ಲೀಚ್ ಮಾಡದಿರಿ. ಬ್ಲೀಚ್‌ನಿಂದ ನಿಮ್ಮ ಜೀನ್ಸ್ ಹಾಳಾಗುವುದು ಖಂಡಿತ ಮತ್ತು ಬಟ್ಟೆಯ ಗುಣಮಟ್ಟ ನಷ್ಟವಾಗುತ್ತದೆ. ನಿಮ್ಮ ಜೀನ್ಸ್ ಹಳೆಯದರಂತೆ ಕಾಣುತ್ತದೆ.

ಜೀನ್ಸ್ ಅನ್ನು ಎಂದಿಗೂ ಬಿಸಿಲಿನಡಿಯಲ್ಲಿ ಒಣಗಿಸದಿರಿ. ಸೂರ್ಯನ ಕಿರಣಗಳು ಜೀನ್ಸ್ ಬಟ್ಟೆಯನ್ನು ಹಾಳುಮಾಡಿ ಬಿಡುತ್ತದೆ ಮತ್ತು ವೇಗವಾಗಿ ಫೇಡ್ ಆಗಿಬಿಡುತ್ತದೆ. ಆದ್ದರಿಂದ ಜೀನ್ಸ್ ಒಣಗಿಸುವಾಗ ಹೊರಭಾಗವನ್ನು ಒಳಕ್ಕೆ ಮಾಡಿಕೊಂಡು ಒಣಗಿಸಿ.

 

Please follow and like us:
0
http://bp9news.com/wp-content/uploads/2017/08/aid1370636-v4-728px-Wash-Jeans-Step-7.jpghttp://bp9news.com/wp-content/uploads/2017/08/aid1370636-v4-728px-Wash-Jeans-Step-7-150x150.jpgFilm Bureauಲೈಫ್​ ಸ್ಟೈಲ್​​ ಗುರುನಿಮ್ಮ ಜೀನ್ಸ್ ಯಾವಾಗಲೂ ಹೊಸದರಂತೆ ಹೊಳೆಯುತ್ತಿರಬೇಕು ಎಂದಾದಲ್ಲಿ ಅದನ್ನು ಒಗೆಯುವಾಗ ಒಳಕ್ಕೆ ಹೊರಕ್ಕೆ ಮಾಡಿ ಒಗೆಯಿರಿ. ಹೊರಭಾಗವನ್ನು ಒಳಕ್ಕೆ ಮಾಡಿಕೊಂಡು ನಂತರವಷ್ಟೇ ಅದನ್ನು ಒಗೆಯಿರಿ. ಇದರಿಂದ ನಿಮ್ಮ ಜೀನ್ಸ್ ದೀರ್ಘಕಾಲ ಹಾಳಾಗದಂತೆ ಬಾಳಿಕೆ ಬರುತ್ತದೆ. ಕೆಲವೊಂದು ಜೀನ್ಸ್‌ಗಳು ಒಗೆದ ನಂತರ ಆಕಾರವನ್ನು ಕಳೆದುಕೊಳ್ಳುತ್ತವೆ. ಇದರಿಂದ ಜೀನ್ಸ್ ತನ್ನ ವಿನ್ಯಾಸವನ್ನು ಕಳೆದುಕೊಂಡು ಗುಣಮಟ್ಟವನ್ನು ನಷ್ಟಮಾಡಿಕೊಳ್ಳುತ್ತದೆ. ಇದನ್ನು ತಡೆಯಲು ಜಿಪ್ ಅನ್ನು ಕ್ಲೋಸ್ ಮಾಡಿ ಮತ್ತು ಬಟನ್‌ಗಳನ್ನು ಮೇಲಕ್ಕೆ ಮಾಡಿಕೊಂಡು ನಂತರ ಒಗೆಯಿರಿ. ನಿಮ್ಮ...Kannada News Portal