ಕೇವಲ ಕಣ್ಣೋಟದ ಮೂಲಕ ರಾತ್ರೋ ರಾತ್ರಿ ಸಾಮಾಜಿಕ  ಜಾಲತಾಣಗಳಲ್ಲಿ  ಇಂಟರ್​ನ್ಯಾಷನಲ್​  ನ್ಯೂಸ್​ ಆದ  ಮಲಯಾಳಂ  ಚೆಲುವೆ ಪ್ರಿಯಾ ವಾರಿಯರ್​ ಈಗ  ಎಷ್ಟು ಬ್ಯುಸಿ ಆಗಿದ್ದಾರೆ ಗೊತ್ತಾ…? ಒಂದೇ ದಿನದಲ್ಲಿ ಪಡ್ಡೆ ಹುಡುಗರ ಹಾರ್ಟ್​ ಪೇವರಿಟ್​ ಆದ ಪ್ರಿಯಾ ಸದ್ಯ ಕೋಟಿ ಕೋಟಿ ರೂ.ಸಂಪಾದಿಸುವ ಜಾಹೀರಾತಿನಲ್ಲಿ  ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

ಕೇವಲ ಕಣ್ಣು ಹೊಡೆಯುವುದರ ಮೂಲಕ ಸೂಪರ್​ಸ್ಟಾರ್​ ಆದ ಪ್ರಿಯಾ, ಮಲಯಾಳಂನ ಒರು ಆಡಾರ್​ ಲವ್​  ಸಿನಿಮಾ ಹಾಡಿನ ತುಣಕಿನಿಂದಲೇ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟೀಸ್ ತನಕ ಎಲ್ಲರಿಗೂ ಪ್ರಿಯಾ ಪ್ರಕಾಶ್​ ಚಿರಪರಿಚಿತವಾದರು.

ಇದಾದ ನಂತರ ಪ್ರಿಯಾಗೆ ಅವಕಾಶಗಳ ಸುರಿ ಮಳೆಯೇ ಆಗಿತ್ತು. ಇನ್​ಸ್ಟಾಗ್ರಾಂನಲ್ಲೂ ಪ್ರಿಯಾ ಪ್ರಕಾಶ್​ ಪ್ರಕಟಿಸುವ ಒಂದು ಪೋಸ್ಟ್​ಗೆ 8 ಲಕ್ಷ ಸಂಭಾವನೆ ಪಡೆಯುತ್ತಿದ್ದರು. ಆದರೆ ಇದಾದ ನಂತರ ಅವರು ಏನು ಮಾಡುತ್ತಿದ್ದಾರೆ ಎಂದು ಎಲ್ಲರೂ ಹುಡುಕಾಟ ನಡೆಸುವಾಗಲೇ ಪ್ರಿಯಾ ಐಪಿಎಲ್​ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

ಇದಾದ ನಂತರ ಈ ಬೆಡಗಿಗೆ ಇತ್ತೀಚೆಗೆ ಒಂದು ಕೋಟಿ ಮೌಲ್ಯದ ಆಫರ್ ಅರಸಿ ಬಂದಿದೆಯಂತೆ. ಹಾಗೆಂದ ಕೂಡಲೇ ಇದು ಯಾವ ಸಿನಿಮಾ ಅವಕಾಶ, ನಾಯಕ ಯಾರು, ಯಾವ ಭಾಷೆಯ ಸಿನಿಮಾ ಎಂದೆಲ್ಲ ಯೋಚಿಸಿ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಕಾರಣ ಇದೇನು ಸಿನಿಮಾ ಅವಕಾಶ ಅಲ್ಲ. ಬದಲಾಗಿ ಇದೊಂದು ರಾಷ್ಟ್ರೀಯ ಜಾಹೀರಾತಿಗಾಗಿ ಪ್ರಿಯಾಗೆ ಸಿಗುತ್ತಿರುವ ದೊಡ್ಡ ಮೊತ್ತ.

ತೆರೆ ಮೇಲೆ ಕೆಲವೇ ಸೆಕೆಂಡ್​ಗಳಷ್ಟೇ ಬಂದು ಹೋಗುವ ಈ ಜಾಹೀರಾತಿಗಾಗಿ ಪ್ರಿಯಾ ಪ್ರಕಾಶ್ ಪರ್ಸಿಗೆ 1 ಕೋಟಿ ಸಂಭಾವನೆ ಜಮಾ ಆಗಲಿದೆ. ಇತ್ತೀಚೆಗಷ್ಟೆ ಈ ರಾಷ್ಟ್ರೀಯ ಜಾಹೀರಾತಿನ ಚಿತ್ರೀಕರಣ ಸಹ ನಡೆದಿದ್ದು, ಇನ್ನೊಂದೇ ಒಂದು ದಿನದ ಶೂಟಿಂಗ್ ಬಾಕಿ ಇದೆಯಷ್ಟೆ.

Please follow and like us:
0
http://bp9news.com/wp-content/uploads/2018/07/MAIN_2-1.jpghttp://bp9news.com/wp-content/uploads/2018/07/MAIN_2-1-150x150.jpgBP9 Bureauಸಿನಿಮಾಕೇವಲ ಕಣ್ಣೋಟದ ಮೂಲಕ ರಾತ್ರೋ ರಾತ್ರಿ ಸಾಮಾಜಿಕ  ಜಾಲತಾಣಗಳಲ್ಲಿ  ಇಂಟರ್​ನ್ಯಾಷನಲ್​  ನ್ಯೂಸ್​ ಆದ  ಮಲಯಾಳಂ  ಚೆಲುವೆ ಪ್ರಿಯಾ ವಾರಿಯರ್​ ಈಗ  ಎಷ್ಟು ಬ್ಯುಸಿ ಆಗಿದ್ದಾರೆ ಗೊತ್ತಾ...? ಒಂದೇ ದಿನದಲ್ಲಿ ಪಡ್ಡೆ ಹುಡುಗರ ಹಾರ್ಟ್​ ಪೇವರಿಟ್​ ಆದ ಪ್ರಿಯಾ ಸದ್ಯ ಕೋಟಿ ಕೋಟಿ ರೂ.ಸಂಪಾದಿಸುವ ಜಾಹೀರಾತಿನಲ್ಲಿ  ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location:...Kannada News Portal