ಬೆಂಗಳೂರು:ಅಭಯಚಾತುರ್ಮಾಸ್ಯದ ನಾಲ್ಕನೇ ದಿನ, ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ವರ್ಧಂತ್ಯೋತ್ಸವವನ್ನು ಅರುಣಹವನ ಹಾಗೂ ತೃಚಕಲ್ಪ ಅರುಣ ನಮಸ್ಕಾರದ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. ಪೀಠಾರೂಢರಾದ ಶ್ರೀಗಳಿಗೆ ಎಲ್ಲಾ ಶಿಷ್ಯಭಕ್ತರು 46 ಅರುಣಮಂತ್ರಗಳಿಂದ 46 ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿದ್ದು ವಿಶೇಷವಾಗಿತ್ತು. ಹೊರನಾಡಿನ ಧರ್ಮದರ್ಶಿಗಳಾದ ಶ್ರೀ ಭೀಮೇಶ್ವರ ಜೋಷಿ ದಂಪತಿಗಳು ಗುರುಭಿಕ್ಷಾ ಸೇವೆಯನ್ನು ನೆರವೇರಿಸಿ, ಫಲಸಮರ್ಪಣೆ ಮಾಡಿದರು.

ಶ್ರೀಗಳ ಮಾತೃಶ್ರೀ ಶ್ರೀಮತಿ ವಿಜಯಲಕ್ಷ್ಮಿ ಅಮ್ಮನವರಿಂದ ಆರತಿ

 

ಪೂಜ್ಯ ಶ್ರೀಗಳ ಮಾತೃಶ್ರೀ ಶ್ರೀಮತಿ ವಿಜಯಲಕ್ಷ್ಮಿ ಅಮ್ಮನವರು ಆರತಿ ಮಾಡಿ, ಅಭಯಾಕ್ಷರ ಅಭಿಯಾನಕ್ಕೆ ಕಾಣಿಕೆ ಸಮರ್ಪಣೆ ಮಾಡಿದರು. ವರ್ಧಂತ್ಯೋತ್ಸವದ ನಿಮಿತ್ತ ಕಾಶಾಯವಸ್ತ್ರ, ಪಾದುಕೆ ಮುಂತಾದ ಸುವಸ್ತುಗಳನ್ನು ಅನಂತರಾಮ್ ಅವರು ಸಮರ್ಪಣೆ ಮಾಡಿದರು. ಹೊರನಾಡಿನ ಭೀಮೇಶ್ವರ ಜೋಷಿ  ಸಹೋದರರು, ಖ್ಯಾತ ಜ್ಯೋತಿಷಿಗಳಾದ ಮಿತ್ತೂರು ಕೇಶವ್ ಭಟ್, ವಿಜಯಕಾಶೀ, ವೈಜಯಂತಿ ಕಾಶಿ ದಂಪತಿಗಳು ಹಾಗೂ ಉದ್ಯಮಿ ಹರೀಶ್ ಎನ್ ಅಭಯಾಕ್ಷರ ಸಹಿಮಾಡಿದರು. ಇದೇ ಸಂದರ್ಭದಲ್ಲಿ ಶ್ರೀಭಾರತೀಪ್ರಕಾಶನ ಹೊರತಂದ, ಹುಕ್ಕಲಿನಲ್ಲಿ ನಡೆದ ‘ಭರತ ಪ್ರತೀಕ್ಷಣಮ್’ ರಾಮಕಥೆಯ ಸಾಂದ್ರಮುದ್ರಿಕೆಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.

ತೃಚಕಲ್ಪ ಅರುಣ ನಮಸ್ಕಾರ:

ಶಿಷ್ಯಭಕ್ತರ ಅಜ್ಞಾನವೆಂಬ ಕತ್ತಲೆಯನ್ನು ಕಳೆದು, ಸುಜ್ಞಾನವೆಂಬ ಬೆಳಕನ್ನು ನೀಡುವ ಸೂರ್ಯಸ್ವರೂಪಿಯಾದ ಗುರುವಿಗೆ ವೇದೋಕ್ತ ಅರುಣ ನಮಸ್ಕಾರ ಮಂತ್ರಗಳಿಂದ ಸಾಷ್ಟಾಂಗಪೂರ್ವಕವಾಗಿ ನಮಿಸುವುದಾಗಿದೆ. ಸೂರ್ಯ ಹಾಗೂ ಗುರುವನ್ನು ಅದ್ವೈತ ಭಾವದಿಂದ 46 ಅರುಣ ಮಂತ್ರ ಪೂರ್ವಕವಾಗಿ ನಮಸ್ಕರಿಸುವುದು ತೃಚಕಲ್ಪ ಅರುಣ ನಮಸ್ಕಾರವಾಗಿದೆ.

ಪೀಠಾರೂಢರಾದ ಶ್ರೀಗಳಿಗೆ ಎಲ್ಲಾ ಶಿಷ್ಯಭಕ್ತರು 46 ಅರುಣಮಂತ್ರಗಳಿಂದ 46 ಸಾಷ್ಟಾಂಗ ನಮಸ್ಕಾರ

 

Please follow and like us:
0
http://bp9news.com/wp-content/uploads/2017/07/Shee-Raghaveshwara-shree-vardanthi-1024x576.jpeghttp://bp9news.com/wp-content/uploads/2017/07/Shee-Raghaveshwara-shree-vardanthi-150x150.jpegNews Updates Notificationಆಧ್ಯಾತ್ಮಬೆಂಗಳೂರು:ಅಭಯಚಾತುರ್ಮಾಸ್ಯದ ನಾಲ್ಕನೇ ದಿನ, ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ವರ್ಧಂತ್ಯೋತ್ಸವವನ್ನು ಅರುಣಹವನ ಹಾಗೂ ತೃಚಕಲ್ಪ ಅರುಣ ನಮಸ್ಕಾರದ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. ಪೀಠಾರೂಢರಾದ ಶ್ರೀಗಳಿಗೆ ಎಲ್ಲಾ ಶಿಷ್ಯಭಕ್ತರು 46 ಅರುಣಮಂತ್ರಗಳಿಂದ 46 ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿದ್ದು ವಿಶೇಷವಾಗಿತ್ತು. ಹೊರನಾಡಿನ ಧರ್ಮದರ್ಶಿಗಳಾದ ಶ್ರೀ ಭೀಮೇಶ್ವರ ಜೋಷಿ ದಂಪತಿಗಳು ಗುರುಭಿಕ್ಷಾ ಸೇವೆಯನ್ನು ನೆರವೇರಿಸಿ, ಫಲಸಮರ್ಪಣೆ ಮಾಡಿದರು.   ಪೂಜ್ಯ ಶ್ರೀಗಳ ಮಾತೃಶ್ರೀ ಶ್ರೀಮತಿ ವಿಜಯಲಕ್ಷ್ಮಿ ಅಮ್ಮನವರು ಆರತಿ ಮಾಡಿ, ಅಭಯಾಕ್ಷರ ಅಭಿಯಾನಕ್ಕೆ ಕಾಣಿಕೆ...Kannada News Portal