ಬೆಂಗಳೂರು : ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಲು ರಾಜ್ಯ ಮೈತ್ರಿ ಸರ್ಕಾರ ನಿರ್ಧಾರ ಮಾಡಿದೆ.
ಈ ವಿಷಯವನ್ನು ವಿಧಾನಸೌದಲ್ಲಿ ಸುದ್ದಿಗಾರರಿಗೆ ತಿಳಿಸಿದ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಈ ಸಂಬಂಧ ಮುಖ್ಯಮಂತ್ರಿಗಳು ಹಣಕಾಸು ಇಲಾಖೆ ಜತೆ ಮಾತುಕತೆ ನಡೆಸುತ್ತಿದ್ದು ಅಂತಿಮವಾಗಿ ಸಿಎಂ ಕುಮಾರಸ್ವಾಮಿ ಅವರೇ ಈ ಯೋಜನೆಯನ್ನು ಪ್ರಕಟ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

19.6 ಲಕ್ಷ ವಿದ್ಯಾಥಿರ್ಗಳಿಗೆ ಈ ಯಉಚಿತ ಬಸ್ ಪಾಸ್ ಸೌಲಭ್ಯ ವದಿಗಿಸ ಬೇಕಾಗಿದ್ದು, ಈ ಯೋಜನೆಗೆ ವಾರ್ಷಿಕ ಸಾರಿಗೆ ಇಲಾಖೆಗೆ 6 ಸಾವಿರ ಕೋಟಿ ನಷ್ಟ ಉಂಟಾಗಲಿದ್ದು, ಈಗಾಗಲೇ ಸಾರಿಗೆ ಇಲಾಖೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, 5 ಸಾವಿರ ಕೋಟಿ ನಷ್ಟದಲ್ಲಿ ಇದೆ ಎನ್ನಲಾಗಿದೆ.

ಅಲ್ಲದೆ ನಮ್ಮ ಮೆಟ್ರೋ ಸಂಸ್ಥೆಯನ್ನು ಕೂಡ ರಾಜ್ಯ ಸಾರಿಗೆ ಇಲಾಖೆ ಅಡಿಯಲ್ಲಿ ತರುವ ಬಗ್ಗೆ ಪ್ರಸ್ತಾವನೆ ನೀಡಲಾಗಿದೆ ಎಂದ ಅವರು, ಖಾಸಗಿ ಡೀಸೆಲ್ ವಾಹನಗಳನ್ನು ಹತೋಟಿಯಲ್ಲಿ ಇಡಲು ಸರ್ಕಾರ ಚಿಂತಿಸುತ್ತಿದ್ದು, ಪಾರ್ಕಿಂಗ್ ವ್ಯೆವಸ್ಥೆ ಇದ್ದರೆ ಮಾತ್ರ ಡೀಸೆಲ್ ಕಾರುಗಳನ್ನು ಖರೀದಿಸಲು ಅವಕಾಶ ನೀಡುವ ಪ್ರಸ್ತವಾನೆ ಸರ್ಕಾರದ ಮುಮದೆ ಇದೆ ಎಂದು ತಿಳಿಸಿದ್ದಾರೆ.

ಇನ್ನು ಈ ಉಚಿತ ಪಾಸ್ ಯೋಜನೆ ರುವಾಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ್ದಾಗಿದ್ದು, ಸರ್ಕಾರದ ಅಂತಿಮ ಘಳಿಗೆಯಲ್ಲಿ ಈ ಯೋಜನೆಯನ್ನು ಚಾಲ್ತಿಗೆ ತರಲು ಮುಂದಾಗಿದ್ದರು. ಆದರೆ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಈ ಯೋಜನೆ ಕೃಷ್ಣ ಕಚೇರಿಯ ಟೇಬಲ್ ಮೇಲೆಯೇ ಉಳಿದಿತ್ತು. ಇದೀಗ ಮೈತ್ರಿ ಸರ್ಕಾರ ರಚನೆಯಾದ ಹಿನ್ನಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ನನಸಾಗುತ್ತಿದೆ.

Please follow and like us:
0
http://bp9news.com/wp-content/uploads/2018/06/maxresdefault-15.jpghttp://bp9news.com/wp-content/uploads/2018/06/maxresdefault-15-150x150.jpgPolitical Bureauಪ್ರಮುಖರಾಜಕೀಯಬೆಂಗಳೂರು : ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಲು ರಾಜ್ಯ ಮೈತ್ರಿ ಸರ್ಕಾರ ನಿರ್ಧಾರ ಮಾಡಿದೆ. ಈ ವಿಷಯವನ್ನು ವಿಧಾನಸೌದಲ್ಲಿ ಸುದ್ದಿಗಾರರಿಗೆ ತಿಳಿಸಿದ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಈ ಸಂಬಂಧ ಮುಖ್ಯಮಂತ್ರಿಗಳು ಹಣಕಾಸು ಇಲಾಖೆ ಜತೆ ಮಾತುಕತೆ ನಡೆಸುತ್ತಿದ್ದು ಅಂತಿಮವಾಗಿ ಸಿಎಂ ಕುಮಾರಸ್ವಾಮಿ ಅವರೇ ಈ ಯೋಜನೆಯನ್ನು ಪ್ರಕಟ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. 19.6 ಲಕ್ಷ ವಿದ್ಯಾಥಿರ್ಗಳಿಗೆ ಈ ಯಉಚಿತ ಬಸ್ ಪಾಸ್ ಸೌಲಭ್ಯ ವದಿಗಿಸ...Kannada News Portal