ಗಣೇಶ ಹಬ್ಬವನ್ನು ರಾಷ್ಟ್ರದಾದ್ಯಂತ ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ಸೆಲೆಬ್ರಿಗಳು ಕೂಡ ಗಣಪತಿಯನ್ನು ಕೂರಿಸಿ ಹಬ್ಬ ಸೆಲೆಬ್ರೇಟ್​ ಮಾಡಿದ್ದಾರೆ. ಬಾಲಿವುಡ್​ನ ಕೆಲ ಬಿಗ್​ ಸ್ಟಾರ್​ಗಳು ಪ್ರತೀ ವರ್ಷದಂತೇ ಈ ಬಾರಿಯು ಹಬ್ಬ ಆಚರಿಸಿ  ಸಂಭ್ರಮಿಸಿದ್ದಾರೆ.

ನಿನ್ನೆ ಬಾಲಿವುಡ್‌ನಲ್ಲಿ ಗಣಪತಿ ಹಬ್ಬದ ಸಂಭ್ರಮ. ಒಂದ್‌ ಕಡೆ ಮುಖೇಶ್‌ ಅಂಬಾನಿ ಮನೇಲಿ ಗಣೇಶ ಚತುರ್ಥಿ ಸಂಭ್ರಮ ಜೋರಾಗಿದ್ರೆ, ಇನ್ನೊಂದಂಡೆ ಪ್ರತಿ ವರ್ಷದಂತೆ ಸಲ್ಮಾನ್ ಖಾನ್ ಮನೇಲೂ ಗಣೇಶನನ್ನ ಪ್ರತಿಷ್ಠಾಪಿಸಿದ್ರು. ಹಲವು ತಾರೆಯರು ಆಗಮಿಸಿ ವಿಘ್ನ ನಿವಾರಕನಿಗೆ ಆರತಿ ಮಾಡಿ ಪೂಜೆ ಸಲ್ಲಿಸಿದ್ರು.

ಅರ್ಬಾಜ್‌ ಖಾನ್, ಸಲ್ಮಾನ್ ಖಾನ್,ಸೊಹೈಲ್‌ ಅಲಿ ಖಾನ್, ಅರ್ಪಿತಾ ಖಾನ್ ಹೀಗೆ ಒಬ್ರಾದ್ಮೇಲೊಬ್ರು ಗಣೇಶನಿಗೆ ಆರತಿ ಮಾಡಿದ್ರು. ಆದ್ರೆ ಗಣಪತಿ ಪೂಜೆಗೆ ಮನೆಗೆ ಬಂದಿದ್ದ ಸಲ್ಲು ಮಾಜಿ ಪ್ರೇಯಸಿ ಕತ್ರಿನಾ ಕೈಫ್ ಗಣೇಶನಿಗೆ ಶಾಕ್ ಕೊಟ್ಲು. ಆರತಿ ತಟ್ಟೆಯನ್ನ ಆ್ಯಂಟಿ ಕ್ಲಾಕ್‌ವೈಸ್ಅಂದ್ರೆ ಉಲ್ಟಾ ಆರತಿ ಎತ್ತಿದ್ಲು. ಆದ್ರೆ ಗಡಿಬಿಡಿಲಿ ಇದು ಅಲ್ಲಿದ್ದವರ ಗಮನಕ್ಕೆ ಬರಲಿಲ್ಲ.
ನಂತ್ರ ಕತ್ರಿನಾ ಆರತಿ ಸ್ಟೈಲ್, ಕೆಲವರ ಗಮನಕ್ಕೆ ಬಂದಿದ್ದೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದೆ. ಇನ್ನು ಕೆಲವರು ಆಕೆ ವಿದೇಶದವಳಾದ್ರೂ ಪೂಜೆಗೆ ಆಗಮಿಸಿ ಭಕ್ತಿಯಿಂದ ಆರತಿ ಮಾಡಿದ್ಲಲ್ವಾ?ಅದು ಮುಖ್ಯ ಅಂತಾ ಆಕೆ ಪರವೂ ಮಾತಾಡ್ತಿದ್ದಾರೆ.

Please follow and like us:
0
http://bp9news.com/wp-content/uploads/2018/09/140918_-Katrina-Kaif-e1536913630121.jpghttp://bp9news.com/wp-content/uploads/2018/09/140918_-Katrina-Kaif-e1536913630121-150x150.jpgBP9 Bureauಸಿನಿಮಾಗಣೇಶ ಹಬ್ಬವನ್ನು ರಾಷ್ಟ್ರದಾದ್ಯಂತ ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ಸೆಲೆಬ್ರಿಗಳು ಕೂಡ ಗಣಪತಿಯನ್ನು ಕೂರಿಸಿ ಹಬ್ಬ ಸೆಲೆಬ್ರೇಟ್​ ಮಾಡಿದ್ದಾರೆ. ಬಾಲಿವುಡ್​ನ ಕೆಲ ಬಿಗ್​ ಸ್ಟಾರ್​ಗಳು ಪ್ರತೀ ವರ್ಷದಂತೇ ಈ ಬಾರಿಯು ಹಬ್ಬ ಆಚರಿಸಿ  ಸಂಭ್ರಮಿಸಿದ್ದಾರೆ. ನಿನ್ನೆ ಬಾಲಿವುಡ್‌ನಲ್ಲಿ ಗಣಪತಿ ಹಬ್ಬದ ಸಂಭ್ರಮ. ಒಂದ್‌ ಕಡೆ ಮುಖೇಶ್‌ ಅಂಬಾನಿ ಮನೇಲಿ ಗಣೇಶ ಚತುರ್ಥಿ ಸಂಭ್ರಮ ಜೋರಾಗಿದ್ರೆ, ಇನ್ನೊಂದಂಡೆ ಪ್ರತಿ ವರ್ಷದಂತೆ ಸಲ್ಮಾನ್ ಖಾನ್ ಮನೇಲೂ ಗಣೇಶನನ್ನ ಪ್ರತಿಷ್ಠಾಪಿಸಿದ್ರು. ಹಲವು ತಾರೆಯರು ಆಗಮಿಸಿ ವಿಘ್ನ...Kannada News Portal