ಬಳ್ಳಾರಿ : ಇದೇ ಮೊದಲ ಬಾರಿಗೆ ಕಂಪ್ಲಿ ಶಾಸಕ ಗಣೇಶ್ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಈ ಸಭೆಯಲ್ಲಿ ಕ್ಷೇತ್ರದ ಜನರು ಕೂಡ ಭಾಗಿಯಾಗಿದ್ದು, ಅಧಿಕಾರಿಗಳ ಜತೆ ಅಭಿವೃದ್ಧಿಯಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಇನ್ನು ಈ ಕ್ಷೇತ್ರ ಹಿಂದೆ ಬಿಜೆಪಿ ಶಾಸಕ ಮಾಜಿ ಸಚಿವ ರಾಮುಲು ಅವರ ಅಳಿಯ ಸುರೇಶ್ ಬಾಬು ಅವರ ಕ್ಷೇತ್ರ ಆಗಿತ್ತು. ಈ ಬಾರಿ ನಾರಾ ಸೂರ್ಯ ನಾರಾಯಣ ರೆಡ್ಡಿ ಅವರ ಕೃಪೆಯಿಂದ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಈ ಹಿಂದೆ ಎಂದೂ ಕೂಡ ಪ್ರಗತಿ ಪರಿಶೀಲನಾ ಸಭೆ ನಡೆದೇ ಇರಲಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಈ ಕ್ಷೇತ್ರದಲ್ಲಿ ಸುಮಾರು 19 ಗ್ರಾಮಗಳು ಇದ್ದು, ಎಲ್ಲಾ ಗ್ರಾಮಗಳೂ ಬಳ್ಳಾರಿ ನಗರಕ್ಕೆ ಹತ್ತಿರವೇ ಇದೆ. ಈ ಸಭೆ ನಡೆದ ಬಳಿಕ ಕ್ಷೇತ್ರದ ಜನರು ಸುದ್ದಿಗಾರರ ಜತೆ ಮಾತನಾಡಿ ಈ ಭಾಗದಲ್ಲಿ ಯಾವ ಶಾಸಕರು ಇಂತಹಾ ಅಭಿವೃದ್ಧಿಯ ವಿಚಾರವಾಗಿ ಯೋಚನೆ ಮಾಡಿಲ್ಲ ಎಂದು ಶಾಸಕ ಗಣೇಶ್ ಅವರ ಪರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Please follow and like us:
0
http://bp9news.com/wp-content/uploads/2018/06/ganesh-the-municipal-councilor-who-conducted-the-first-progress-review-meeting-Karnatakada-Miditha.jpeghttp://bp9news.com/wp-content/uploads/2018/06/ganesh-the-municipal-councilor-who-conducted-the-first-progress-review-meeting-Karnatakada-Miditha-150x150.jpegPolitical Bureauಪ್ರಮುಖಬಳ್ಳಾರಿರಾಜಕೀಯಬಳ್ಳಾರಿ : ಇದೇ ಮೊದಲ ಬಾರಿಗೆ ಕಂಪ್ಲಿ ಶಾಸಕ ಗಣೇಶ್ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಈ ಸಭೆಯಲ್ಲಿ ಕ್ಷೇತ್ರದ ಜನರು ಕೂಡ ಭಾಗಿಯಾಗಿದ್ದು, ಅಧಿಕಾರಿಗಳ ಜತೆ ಅಭಿವೃದ್ಧಿಯಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನು ಈ ಕ್ಷೇತ್ರ ಹಿಂದೆ ಬಿಜೆಪಿ ಶಾಸಕ ಮಾಜಿ ಸಚಿವ ರಾಮುಲು ಅವರ ಅಳಿಯ ಸುರೇಶ್ ಬಾಬು ಅವರ ಕ್ಷೇತ್ರ ಆಗಿತ್ತು. ಈ ಬಾರಿ ನಾರಾ ಸೂರ್ಯ ನಾರಾಯಣ ರೆಡ್ಡಿ ಅವರ ಕೃಪೆಯಿಂದ...Kannada News Portal