ಭಾದ್ರಪದ ಶುಕ್ಲ 2017ರ ಗೌರೀ, ಗಣೇಶ ಹಬ್ಬ ಈ ಬಾರಿ ಗುರುವಾರ, ಶುಕ್ರವಾರ ಬಂದಿದೆ. ಗಣೇಶ ಚತುರ್ಥಿ ಶುಕ್ರವಾರ ಬಂದಿರುವುದರಿಂದ ಹಬ್ಬದ ದಿನದಂದೇ ಗೌರೀ ಗಣೇಶನನ್ನು ವಿಸರ್ಜನೆ ಮಾಡಬಾರದು. ಹಾಗಾಂತ ಅಂತೆಕಂತೆ ಸುದ್ದಿ ಊರೆಲ್ಲಾ ಸುದ್ದಿಯಾಗುತ್ತಿದೆ.

ಗಣೇಶನ ವಿಗ್ರಹವನ್ನು ಮನೆಯಲ್ಲಿಟ್ಟು ಪೂಜಿಸುವವರು ಒಂದು ದಿನ ಇಲ್ಲಾಂದ್ರೆ ಮೂರು ದಿನ ಪೂಜಿಸುವ ಪದ್ದತಿಯಿದೆ. ಹಾಗಾಗಿ, ಈ ಬಾರಿ ಹಬ್ಬದ ದಿನದಂದು ವಿಸರ್ಜನೆ ಮಾಡಬಾರದು ಎನ್ನುವ ಸುದ್ದಿಯನ್ನು ನಂಬುವ ಆಸ್ತಿಕ ವರ್ಗದವರು ಭಾನುವಾರದ (ಆ 27) ತನಕ ಹಿಂದೂಗಳ ಫೇವರೇಟ್ ದೇವ್ರು ಗಣೇಶನನ್ನು ಭಕ್ತಿಯಿಂದ ನೋಡಿಕೊಳ್ಳಬೇಕಿದೆ.

ಹಾಗಾಗಿ, ಈ ಬಾರಿ ಗಣೇಶನ ವಿಗ್ರಹ ಎಷ್ಟು ದುಬಾರಿಯೋ ಗಣೇಶನ ಪೂಜೆಯೂ ಅಷ್ಟೇ ದುಬಾರಿ. ಹೇಳಿಕೇಳಿ ನಮ್ಮ ಗಣೇಶ ಆಹಾರಪ್ರಿಯ. ಮೂರು ಹೊತ್ತು ಪೂಜೆ, ಮೂರು ಹೊತ್ತು ನೈವೇದ್ಯ, ಹೂವಿನ ಅಲಂಕಾರ, ಜೊತೆಗೆ ಇದೆಲ್ಲಾ ಮೂರ್ಮೂರು ದಿನ!

ಹಬ್ಬದ ದಿನದಂದೇ ಗಣೇಶನನ್ನು ವಿಸರ್ಜಜನೆ ಯಾಕೆ ಮಾಡಬಾರದು ಎನ್ನುವ ಸುದ್ದಿಗೆ ಸಿಕ್ಕ ಉತ್ತರ ಏನಂದರೆ, ಗಣೇಶನ ಜೊತೆ ಆತನ ತಾಯಿ ಗೌರಿಯನ್ನೂ ವಿಸರ್ಜಿಸಬೇಕು. ಗೌರಿ ಬೇರೆಯಲ್ಲಾ, ಲಕ್ಷ್ಮಿ ಬೇರೆಯಲ್ಲಾ. ಶುಕ್ರವಾರದಂದು ಲಕ್ಷ್ಮೀಯನ್ನು ವಿಸರ್ಜಿಸುವುದುಂಟೇ, ಶುಕ್ರವಾರದಂದು ಲಕ್ಷ್ಮಿಯನ್ನು ಮನೆಯಿಂದ ಹೊರಗೆ ಕಳುಹಿಸುವುದುಂಟೇ..

ಇದರಿಂದಾಗಿ, ಶುಕ್ರವಾರದಂದು ವಿಗ್ರಹ ವಿಸರ್ಜನೆ ಮಾಡದೇ ಶನಿವಾರವೋ (ಆ 26) ಅಥವಾ ಭಾನುವಾರದ ವರೆಗೆ ಪೂಜಾ ವಿದಿವಿಧಾನ ನಡೆಸಿ ವಿಸರ್ಜನೆ ಮಾಡಿದರೆ ಶ್ರೇಯಸ್ಸಂತೆ ಎನ್ನುವ ಮಾತು ಕೇಳಿಬರುತ್ತಿದೆ.

ಸಾಮಾನ್ಯವಾಗಿ ಹೆಣ್ಣುಮಕ್ಕಳನ್ನು ಶುಕ್ರವಾರದಂದು ಮನೆಯಿಂದ ಊರಿಗೆ ಕಳುಹಿಸದ ಬಹಳಷ್ಟು ಮನೆಗಳಿವೆ. ಹಾಗಾಗಿ, ಶುಕ್ರವಾರದಂದು ವಿಸರ್ಜನೆ ಮಾಡಬಾರದು ಎನ್ನುವ ವಾದ ಸರಿ ಎನ್ನುವ ಸ್ಪಷ್ಟೀಕರಣವೂ ನಡೆಯುತ್ತಿದೆ.

 

Please follow and like us:
0
http://bp9news.com/wp-content/uploads/2017/08/ಲಲಲಲಲ.pnghttp://bp9news.com/wp-content/uploads/2017/08/ಲಲಲಲಲ-150x150.pngFilm Bureauಆಧ್ಯಾತ್ಮಭಾದ್ರಪದ ಶುಕ್ಲ 2017ರ ಗೌರೀ, ಗಣೇಶ ಹಬ್ಬ ಈ ಬಾರಿ ಗುರುವಾರ, ಶುಕ್ರವಾರ ಬಂದಿದೆ. ಗಣೇಶ ಚತುರ್ಥಿ ಶುಕ್ರವಾರ ಬಂದಿರುವುದರಿಂದ ಹಬ್ಬದ ದಿನದಂದೇ ಗೌರೀ ಗಣೇಶನನ್ನು ವಿಸರ್ಜನೆ ಮಾಡಬಾರದು. ಹಾಗಾಂತ ಅಂತೆಕಂತೆ ಸುದ್ದಿ ಊರೆಲ್ಲಾ ಸುದ್ದಿಯಾಗುತ್ತಿದೆ. ಗಣೇಶನ ವಿಗ್ರಹವನ್ನು ಮನೆಯಲ್ಲಿಟ್ಟು ಪೂಜಿಸುವವರು ಒಂದು ದಿನ ಇಲ್ಲಾಂದ್ರೆ ಮೂರು ದಿನ ಪೂಜಿಸುವ ಪದ್ದತಿಯಿದೆ. ಹಾಗಾಗಿ, ಈ ಬಾರಿ ಹಬ್ಬದ ದಿನದಂದು ವಿಸರ್ಜನೆ ಮಾಡಬಾರದು ಎನ್ನುವ ಸುದ್ದಿಯನ್ನು ನಂಬುವ ಆಸ್ತಿಕ ವರ್ಗದವರು ಭಾನುವಾರದ...Kannada News Portal