ಗದಗ : ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಹೊಡೆದಾಡಿಕೊಂಡಿರುವ ಘಟನೆ ಗದಗ ನಗರದ ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದ ಬಳಿ ನಡೆದಿದೆ. ಮತದಾನ ದಿನದಂದು ಸಂಜೆ ಬಿಜೆಪಿ ಕಾರ್ಯಕರ್ತರಾದ ಶರಣಪ್ಪ ಜಾಲಗಾರ, ಮುತ್ತು ಜಾಲಗಾರ ಹಾಗೂ ಮಂಜು ಈ ಮೂವರು ಮತಹಾಕಲು ಮತಗಟ್ಟೆಗೆ ತೆರಳಿದ್ದರು. ಆಗ ಮತದಾನ ಸಮಯ ಮೀರಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರಾದ ವಿನಾಯಕ ಜಂತ್ಲಿ, ಪ್ರಕಾಶ್ ಜಂತ್ಲಿ ಹೇಳಿದ್ದಾರೆ.

ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಮುಂದುವರೆದ ಜಗಳ, ನಿನ್ನೆ ಎರಡು ಪಕ್ಷದ ಕಾರ್ಯಕರ್ತರು ಕೈಕೈ ಮಿಲಾಯಿಸಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಾದ ವಿನಾಯಕ ಜಂತ್ಲಿ, ಪ್ರಕಾಶ್ ಜಂತ್ಲಿ, ಶಿವು ಜಂತ್ಲಿ, ಸಂತೋಷ ಶೆಟ್ಟಿಕೇರಿ ಹಾಗೂ ಬಿಜೆಪಿ ಕಾರ್ಯಕರ್ತರಾದ ಶರಣಪ್ಪ, ಮುತ್ತು ಹಾಗೂ ಮಂಜು ನಡುವೆ ಮಾರಾಮಾರಿಯಾಗಿದೆ.

ಜಂತ್ಲಿ ಹಾಗೂ ಜಾಲಗಾರ ಇಬ್ಬರು ಸಂಬಂಧಿಕರಾಗಿದ್ದು, ಕುಟುಂಬದ ಹಳೆ ವೈಷಮ್ಯ ಚುನಾವಣೆ ಸ್ವರೂಪ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಇಬ್ಬರುಗೂ ಗಾಯಗಳಾಗಿವೆ. ಈ ಕುರಿತು ಗದಗ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡೂ ಪಕ್ಷದ ಕಾರ್ಯಕರ್ತರನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/Karnatakada-Miditha-54.jpeghttp://bp9news.com/wp-content/uploads/2018/05/Karnatakada-Miditha-54-150x150.jpegBP9 Bureauಗದಗಪ್ರಮುಖರಾಜಕೀಯಗದಗ : ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಹೊಡೆದಾಡಿಕೊಂಡಿರುವ ಘಟನೆ ಗದಗ ನಗರದ ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದ ಬಳಿ ನಡೆದಿದೆ. ಮತದಾನ ದಿನದಂದು ಸಂಜೆ ಬಿಜೆಪಿ ಕಾರ್ಯಕರ್ತರಾದ ಶರಣಪ್ಪ ಜಾಲಗಾರ, ಮುತ್ತು ಜಾಲಗಾರ ಹಾಗೂ ಮಂಜು ಈ ಮೂವರು ಮತಹಾಕಲು ಮತಗಟ್ಟೆಗೆ ತೆರಳಿದ್ದರು. ಆಗ ಮತದಾನ ಸಮಯ ಮೀರಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರಾದ ವಿನಾಯಕ ಜಂತ್ಲಿ, ಪ್ರಕಾಶ್ ಜಂತ್ಲಿ ಹೇಳಿದ್ದಾರೆ. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ...Kannada News Portal