ಗದಗ: ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದ್ರೂ ಸಹ ಈ ಬಾರಿ ಕಾಂಗ್ರೆಸ್ ಶೇ.೩೦ ರಷ್ಟು ಸಾಧನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗುಜರಾತಲ್ಲೂ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಸಚಿವ ಹೆಚ್ ಕೆ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಗುಜರಾತನ್ನು ಗೆಲ್ಲೋದಕ್ಕೆ ಮೋದಿ ಮತ್ತು ಅಮಿತ್ ಶಾ ಜನರನ್ನು ಭಾವನಾತ್ಮಕವಾಗಿ ಪ್ರಚೋದನೆ ಮಾಡಿದ್ರೂ ಸಹ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಈ ಚುನಾವಣೆ ಮೂಲಕ ಪ್ರಜಾಪ್ರಭುತ್ವದಲ್ಲಿ ಯಾರೇ ಸೊಕ್ಕು ತೋರಿಸಿದ್ರೂ ಅವರಿಗೆ ತಕ್ಕ ಶಾಸ್ತಿ ಮಾಡ್ತೇವೆ ಎನ್ನೋ ಎಚ್ಚರಿಕೆಯನ್ನು ಜನ ನೀಡಿದ್ದಾರೆ ಎಂದರು.

ಇನ್ನು ಚುನಾವಣೆ ಗೆಲ್ಲೋದಕ್ಕೆ ಪ್ರಧಾನಿ ನರೇಂದ್ರಮೋದಿ ನೀಚ ಎನ್ನೋ ಪದಪ್ರಯೋಗ, ಪಾಕಿಸ್ತಾನದ ಜೊತೆಗೆ ಮಾತಾಡಿದ್ರೂ ಅನ್ನೋ ಕೆಳಮಟ್ಟದ ಪ್ರಚಾರ ಮಾಡೋ ಮೂಲಕ ಪ್ರಧಾನಿ ಸ್ಥಾನಕ್ಕೆ ಅಗೌರವ ತೋರಿದ್ದಾರೆ ಎಂದರು. ಇನ್ನು ಹಿಮಾಚಲ ಪ್ರದೇಶದಲ್ಲಿ ನಮ್ಮ ಸಾಧನೆ ಕುಸಿದಿದೆ. ಈ ಕುರಿತು ಪಕ್ಷದ ಹಿರಿಯರು ಸಮಾಲೋಚನೆ ಮಾಡಿ ಮುಂದಿನ ದಿನಗಳಲ್ಲಿ ನಮ್ಮ ತೆಕ್ಕೆಯಲ್ಲಿದ್ದ ಹಿಮಾಚಲ ಪ್ರದೇಶವನ್ನು ಮತ್ತೊಮ್ಮೆ ಹಿಂಪಡೆಯಲು ಪ್ರಯತ್ನಿಸಲಾಗುವುದೆಂದರು.

ಇನ್ನು ಗುಜರಾತ್ ಚುನಾವಣೆ ಫಲಿತಾಂಶ ಮುಂದಿನ ಮೇ ನಲ್ಲಿ ನಡೆಯೋ ರಾಜ್ಯದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರೊಲ್ಲ. ಗುಜರಾತನ್ನು ಕಾಂಗ್ರೆಸ್ ಮುಕ್ತ ಮಾಡ್ತೀವಿ ಅಂತ ಹೇಳ್ಕೊಳ್ಳೋ ಬಿಜೆಪಿ ನಾಯಕರಿಗೆ ಸಂಪೂರ್ಣ ನಿರಾಸೆಯಾಗಿದೆ. ಗುಜರಾತಲ್ಲಿ ಕಾಂಗ್ರೆಸ್ ದೊಡ್ಡ ಶಕ್ತಿಯಾಗಿ ಮೇಲೆದ್ದಿದೆ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ವಿಶೇಷ ಬಲ ಬಂದಿದೆಯೆಂದರು.

 

Please follow and like us:
0
http://bp9news.com/wp-content/uploads/2017/12/Capture-27-1024x610.jpghttp://bp9news.com/wp-content/uploads/2017/12/Capture-27-150x150.jpgBP9 Bureauಕೊಪ್ಪಳಪ್ರಮುಖಗದಗ: ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದ್ರೂ ಸಹ ಈ ಬಾರಿ ಕಾಂಗ್ರೆಸ್ ಶೇ.೩೦ ರಷ್ಟು ಸಾಧನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗುಜರಾತಲ್ಲೂ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಸಚಿವ ಹೆಚ್ ಕೆ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಗುಜರಾತನ್ನು ಗೆಲ್ಲೋದಕ್ಕೆ ಮೋದಿ ಮತ್ತು ಅಮಿತ್ ಶಾ ಜನರನ್ನು ಭಾವನಾತ್ಮಕವಾಗಿ ಪ್ರಚೋದನೆ ಮಾಡಿದ್ರೂ ಸಹ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಈ ಚುನಾವಣೆ ಮೂಲಕ ಪ್ರಜಾಪ್ರಭುತ್ವದಲ್ಲಿ ಯಾರೇ ಸೊಕ್ಕು ತೋರಿಸಿದ್ರೂ ಅವರಿಗೆ...Kannada News Portal