ಗದಗ : ಅಧಿಕಾರಿ ಶಾಹಿ ವರ್ಗದಿಂದ ಕುರುಬ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಹೀಗಾಗಿ ಸಮಾಜದ ಶೇಕಡಾವಾರು ಜನಸಂಖ್ಯೆಯಷ್ಟು ರಾಜಕೀಯ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಈ ಕುರಿತು ಗದಗನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶೇ.80 ರಷ್ಟು ಕುರುಬ ಸಮಾಜದವರು ಕಾಂಗ್ರೆಸ್​​​​​ ಪಕ್ಷವನ್ನು ಬೆಂಬಲಿಸಿದ್ದಾರೆ. ಆದರೆ ಅದಕ್ಕನುಗುಣವಾಗಿ ಪ್ರಾತಿನಿಧ್ಯ ದೊರೆಯದೇ ಇರುವುದು ವಿಪರ್ಯಾಸ. ನಮ್ಮ ಸಮಯುದಾಯಕ್ಕೆ ನಾಲ್ಕ ರಿಂದ ಐದು ಸಚಿವ ಸ್ಥಾನ ನೀಡಬೇಕು.

ಈ ಮೂಲಕ ಹಿಂದುಳಿದ ನಮ್ಮ ಸಮಾಜಕ್ಕೆ ಸಂಪುಟದಲ್ಲಿ ಪ್ರಾಧಾನ್ಯತೆ ನೀಡಬೇಕು. ಈ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಸಕ್ತಿ ತೋರಬೇಕು. ಒಂದು ವೇಳೆ ಪ್ರಾತಿನಿಧ್ಯ ನೀಡದಿದ್ದರೆ ಬರೋ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸಮಾಜದ ನಂಬಿಕೆ ಕಳೆದುಕೊಳ್ಳುತ್ತೆ. ಜೊತೆಗೆ ಜೆಡಿಎಸ್ ಪಕ್ಷಕ್ಕೂ ಕೂಡ ನಮ್ಮ ಸಮಾಜದವರು ಬೆಂಬಲಿಸಿದ್ದರಿಂದಾಗಿ ಜೆಡಿಎಸ್ ಕೂಡ ನಿಗಮ ಮಂಡಳಿಗಳಲ್ಲಿ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ರುದ್ರಣ್ಣ ಗುಳಗುಳಿ ಆಗ್ರಹಿಸಿದರು.

Please follow and like us:
0
http://bp9news.com/wp-content/uploads/2018/05/Karnatakada-Miditha-90.jpeghttp://bp9news.com/wp-content/uploads/2018/05/Karnatakada-Miditha-90-150x150.jpegBP9 Bureauಗದಗಪ್ರಮುಖರಾಜಕೀಯಗದಗ : ಅಧಿಕಾರಿ ಶಾಹಿ ವರ್ಗದಿಂದ ಕುರುಬ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಹೀಗಾಗಿ ಸಮಾಜದ ಶೇಕಡಾವಾರು ಜನಸಂಖ್ಯೆಯಷ್ಟು ರಾಜಕೀಯ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಗದಗನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶೇ.80 ರಷ್ಟು ಕುರುಬ ಸಮಾಜದವರು ಕಾಂಗ್ರೆಸ್​​​​​ ಪಕ್ಷವನ್ನು ಬೆಂಬಲಿಸಿದ್ದಾರೆ. ಆದರೆ ಅದಕ್ಕನುಗುಣವಾಗಿ ಪ್ರಾತಿನಿಧ್ಯ ದೊರೆಯದೇ ಇರುವುದು ವಿಪರ್ಯಾಸ. ನಮ್ಮ ಸಮಯುದಾಯಕ್ಕೆ ನಾಲ್ಕ ರಿಂದ ಐದು ಸಚಿವ...Kannada News Portal