ಗದಗ : ವಿಧಾನಸಭಾ ಚುನಾವಣೆ ಹಿನ್ನೆಲೆ ಗದಗ ಜಿಲ್ಲೆಯಲ್ಲಿ ಮತದಾನ ಆರಂಭವಾಗಿದ್ದು,ಜಿಲ್ಲೆಯಲ್ಲಿ  8.43 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನಕ್ಕಾಗಿ 944 ಮತಗಟ್ಟೆಗಳು ತೆರೆಯಲಾಗಿದೆ.

ಇನ್ನು 5900 ಪೋಲಿಂಗ್ ಪರ್ಸನಲ್ ಸಿಬ್ಬಂದಿ ಹಾಗೂ 216 ಮೈಕ್ರೋ ಅಬ್ಸರ್ವರ್ ಗಳನ್ನು ನೇಮಿಸಲಾಗಿದೆ. 16-ಇನ್ಪ್ ಪೆಕ್ಟರ್, 5-ಡಿವೈಎಸ್ ಪಿ, 28-ಪಿಎಸ್ಐ, 191-ಹೆಡ್ ಕಾನ್ಸಟೆಬಲ್, 380-ಪಿಸಿ, 80 ಆರ್ಮಿ ಪಿಸಿ, 552 ಹೋಂ ಗಾರ್ಡ್ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳು ಹಾಗೂ ಚೆಕ್ ಪೋಸ್ಟ್ ಗಳಿಗಾಗಿ  ಸಿಪಿಎಂಎಫ್ ನ 10 ಕಂಪನಿ ನೇಮಕ ಮಾಡಲಾಗಿದೆ.ಹೆಚ್ಚಿನ ಬಂದೋಬಸ್ಥಗಾಗಿ ಪ್ಯಾರಾ ಮಿಲಿಟರಿ ಪೋರ್ಸ್ ಕೂಡ  ಬಳಸಿಕೊಳ್ಳಲಾಗ್ತಿದೆ.

ಜಿಲ್ಲೆಯಲ್ಲಿ ಎಸ್ಐ ಮತ್ತು ಪಿಎಸ್ಐ ಒಳಗೊಂಡು 48 ಸೆಕ್ಟರ್ ಮೊಬೈಲ್ ಸ್ಥಾಪಿಸಿದ್ದು, 27 ಪ್ಲೈಯಿಂಗ್ ಸ್ಕ್ವಾಡ್  ನಿಯೋಜನೆ ಮಾಡಲಾಗಿದೆ. ಇನ್ನು ಜಿಲ್ಲೆಯ ಅಲ್ಲಲ್ಲಿ ವಿವಿ ಪ್ಯಾಟ್ ನಲ್ಲಿನ ಗೊಂದಲದಿಂದಾಗಿ‌ ಕೆಲವೆಡೆ ಮತದಾನ ವಿಳಂಬವಾಗಿ ಆರಂಭವಾಯಿತು.


ಇನ್ನು ಗದಗ ಮಗರದ 92 ನೇ ಮತಗಟ್ಟೆಯ ಬಳಿ ಕಾಂಗ್ರೆಸ್ ಏಜೆಂಟನೊಬ್ಬ ಕಾಂಗ್ರೆಸ್ ಅಭ್ಯರ್ಥಿ ಎಚ್ ಕೆ ಪಾಟೀಲ್ ಭಾವಚಿತ್ರ ಇರೋ ಬ್ಯಾಡ್ಜ್ ಅನ್ನು ಹಾಕಿಕೊಂಡು ಮತಗಟ್ಟೆ ಬಳಿಯೇ ಕಾಂಗ್ರೆಸ್ ಗೆ‌ ಮತ ಹಾಕುವಂತೆ ಪ್ರಚಾರ ಮಾಡೋ ಮೂಲಕ ನೀತಿಸಂಹಿತೆ ಉಲ್ಲಂಘನೆ ಮಾಡಿದ. ಆದ್ರೂ ಸಹ ಮತಗಟ್ಟೆಯ ಸಿಬ್ಬಂದಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ನರಗುಂದ ವಿಧಾನಸಭೆ ಕ್ಷೇತ್ರದ ೭೩ ನೇ ಮತಗಟ್ಟೆ, ಗದಗನ  24 ನೇ ವಾರ್ಡಿನ 81 ನೇ ಮತಗಟ್ಟೆ ಸೇರಿದಂತೆ ಜಿಲ್ಲೆಯ ಹಲವೆಡೆ ಮತದಾನ ವಿಳಂಬವಾಗಿ ಆರಂಭಗೊಂಡಿದೆ.

Please follow and like us:
0
http://bp9news.com/wp-content/uploads/2018/05/Karnatakada-Miditha-44.jpeghttp://bp9news.com/wp-content/uploads/2018/05/Karnatakada-Miditha-44-150x150.jpegBP9 Bureauಗದಗಪ್ರಮುಖರಾಜಕೀಯಗದಗ : ವಿಧಾನಸಭಾ ಚುನಾವಣೆ ಹಿನ್ನೆಲೆ ಗದಗ ಜಿಲ್ಲೆಯಲ್ಲಿ ಮತದಾನ ಆರಂಭವಾಗಿದ್ದು,ಜಿಲ್ಲೆಯಲ್ಲಿ  8.43 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನಕ್ಕಾಗಿ 944 ಮತಗಟ್ಟೆಗಳು ತೆರೆಯಲಾಗಿದೆ. ಇನ್ನು 5900 ಪೋಲಿಂಗ್ ಪರ್ಸನಲ್ ಸಿಬ್ಬಂದಿ ಹಾಗೂ 216 ಮೈಕ್ರೋ ಅಬ್ಸರ್ವರ್ ಗಳನ್ನು ನೇಮಿಸಲಾಗಿದೆ. 16-ಇನ್ಪ್ ಪೆಕ್ಟರ್, 5-ಡಿವೈಎಸ್ ಪಿ, 28-ಪಿಎಸ್ಐ, 191-ಹೆಡ್ ಕಾನ್ಸಟೆಬಲ್, 380-ಪಿಸಿ, 80 ಆರ್ಮಿ ಪಿಸಿ, 552 ಹೋಂ ಗಾರ್ಡ್ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳು ಹಾಗೂ...Kannada News Portal