ಗದಗ : ಕಳೆದ‌ ಎರಡು ದಿನ ಗದಗ ಜಿಲ್ಲೆಯಲ್ಲಿ ಬಿಡುವು ನೀಡಿದ್ದ ಮಳೆರಾಯ ನಿನ್ನೆ ಸಂಜೆಯಿಂದ ಮತ್ತೆ ತನ್ನ ಆರ್ಭಟ ತೋರಿದ್ದಾನೆ. ಮಳೆರಾಯನ ರಭಸಕ್ಕೆ ಜಿಲ್ಲೆಯಲ್ಲಿರೋ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳದ ನೀರು ರಸ್ತೆಯ ಮೇಲೆಲ್ಲಾ ಹರಿದಿದ್ದರಿಂದ ಹಳ್ಳದ ಸೇತುವೆ ದಾಟಲು ವಾಹನ ಸವಾರರು ಪರದಾಡ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಭಾರಿ ಮಳೆಯಿಂದಾಗಿ ಗದಗ ನಗರದ ರಿಂಗ್ ರಸ್ತೆಯ ಬಳಿಯಿರೋ ಶ್ರೀನಿವಾಸ ಕಲ್ಯಾಣ ಮಂಟಪ ಸಂಪೂರ್ಣವಾಗಿ ಜಲಾವೃತವಾಗಿದೆ. ಇನ್ನು ಮಳೆಯಿಂದಾಗಿ ನಗರದ ಜಿಲ್ಲಾಡಳಿತ ಭವನದ ಕೂಗಳತೆ ದೂರದಲ್ಲಿರೋ ಗಂಗೀಮಡಿ ಕಾಲೋನಿಯ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಇದರಿಂ ದ ಮನೆಯಲ್ಲಿ ಹಾಸಿಗೆ ಸೇರಿದಂತೆ ಇತರೇ ವಸ್ತುಗಳು ನೀರಿನಲ್ಲಿ ನೆಂದೋಗಿದೆ.

ಮನೆಗಳ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ಮನೆ ಬೀಳಬಹುದೆನ್ನೋ ಆತಂಕ ಉಂಟುಮಾಡಿದೆ. ರಾತ್ರಿಯೆಲ್ಲಾ ಮನೆಯ ಸದಸ್ಯರು ಮನೆಗೆ ನುಗ್ಗಿದ ನೀರನ್ನು ಹೊರಹಾಕೋದ್ರಲ್ಲೆ ಕಾಲ ಕಳೆದಿದ್ದಾರೆ. ಬೆಳಿಗ್ಗೆಯಾದ್ರೂ ಸಹ ಇನ್ನು ಕೆಲ ಮನೆಗಳ ಮುಂದೆ ಇದ್ದ ನೀರನ್ನು ಹೊರಹಾಕುತ್ತಿದ್ದ ದೃಶ್ಯಗಳು ಕಂಡುಬಂದಿದೆ. ಕಳೆದ 15 ವರ್ಷದಿಂದ ಇಲ್ಲಿ ಇದೇ ಪರಿಸ್ಥಿತಿ ಇದ್ರೂ ಸಹ ಯಾವೊಬ್ಬ ರಾಜಕಾರಣಿಯೂ ಇತ್ತ ಸುಳಿದಿಲ್ಲ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಬರ್ತಾರೆ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

Please follow and like us:
0
http://bp9news.com/wp-content/uploads/2018/06/Karnatakada-Miditha-9.jpeghttp://bp9news.com/wp-content/uploads/2018/06/Karnatakada-Miditha-9-150x150.jpegBP9 Bureauಗದಗಗದಗ : ಕಳೆದ‌ ಎರಡು ದಿನ ಗದಗ ಜಿಲ್ಲೆಯಲ್ಲಿ ಬಿಡುವು ನೀಡಿದ್ದ ಮಳೆರಾಯ ನಿನ್ನೆ ಸಂಜೆಯಿಂದ ಮತ್ತೆ ತನ್ನ ಆರ್ಭಟ ತೋರಿದ್ದಾನೆ. ಮಳೆರಾಯನ ರಭಸಕ್ಕೆ ಜಿಲ್ಲೆಯಲ್ಲಿರೋ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳದ ನೀರು ರಸ್ತೆಯ ಮೇಲೆಲ್ಲಾ ಹರಿದಿದ್ದರಿಂದ ಹಳ್ಳದ ಸೇತುವೆ ದಾಟಲು ವಾಹನ ಸವಾರರು ಪರದಾಡ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಭಾರಿ ಮಳೆಯಿಂದಾಗಿ ಗದಗ ನಗರದ ರಿಂಗ್ ರಸ್ತೆಯ ಬಳಿಯಿರೋ ಶ್ರೀನಿವಾಸ ಕಲ್ಯಾಣ ಮಂಟಪ ಸಂಪೂರ್ಣವಾಗಿ ಜಲಾವೃತವಾಗಿದೆ. ಇನ್ನು ಮಳೆಯಿಂದಾಗಿ ನಗರದ...Kannada News Portal